ಚಿತಾಗಾರಗಳ ಎದುರು ಹೆಚ್ಚಿದ ಕ್ಯೂ; ಒಂದೆಡೆಯಿಂದ ಮತ್ತೊಂದೆಡೆ ಶವ ಕೊಂಡೊಯ್ಯುತ್ತಿರುವ ಸಂಬಂಧಿಕರು

ಬೌರಿಂಗ್ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಶವವನ್ನು ಕುಟುಂಬದ ಸದಸ್ಯರು ಹರಿಶ್ಚಂದ್ರಘಾಟ್​ಗೆ ತೆಗೆದುಕೊಂಡು ಹೋಗಿದ್ದರು. ತಡವಾಗುತ್ತೆ ಎಂಬ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ಸುಮನಹಳ್ಳಿ ಚಿತಾಗಾರಕ್ಕೆ ಕಳಿಸಿದರು.

ಚಿತಾಗಾರಗಳ ಎದುರು ಹೆಚ್ಚಿದ ಕ್ಯೂ; ಒಂದೆಡೆಯಿಂದ ಮತ್ತೊಂದೆಡೆ ಶವ ಕೊಂಡೊಯ್ಯುತ್ತಿರುವ ಸಂಬಂಧಿಕರು
ಅಂತ್ಯಸಂಸ್ಕಾರಕ್ಕೆ ಕ್ಯೂ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 25, 2021 | 3:44 PM

ಬೆಂಗಳೂರು: ಚಿತಾಗಾರಗಳ ಎದುರು ಶವಗಳನ್ನು ಹೊತ್ತ ವಾಹನಗಳು ಕ್ಯೂ ನಿಂತಿದ್ದು ನಗರದಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಭಾನುವಾರವೂ ಸಂಬಂಧಿಕರು ಪರದಾಡುತ್ತಿದ್ದುದು ಕಂಡು ಬಂತು. ಬೌರಿಂಗ್ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಶವವನ್ನು ಕುಟುಂಬದ ಸದಸ್ಯರು ಹರಿಶ್ಚಂದ್ರಘಾಟ್​ಗೆ ತೆಗೆದುಕೊಂಡು ಹೋಗಿದ್ದರು. ತಡವಾಗುತ್ತೆ ಎಂಬ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ಸುಮನಹಳ್ಳಿ ಚಿತಾಗಾರಕ್ಕೆ ಕಳಿಸಿದರು. ಸುಮನಹಳ್ಳಿ ಚಿತಾಗಾರದ ಎದುರು ಶವದೊಂದಿಗೆ ಕುಟುಂಬದ ಸದಸ್ಯರು ಕಾಯುತ್ತಿದ್ದಾರೆ.

ಕೊರೊನಾದಿಂದ ಬೌರಿಂಗ್ ಆಸ್ಪತ್ರೆ ಡೀನ್ ಸಂಬಂಧಿ ಸಾವು ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯ ಡೀನ್ ಒಬ್ಬರ ಸಂಬಂಧಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಸುಮನಹಳ್ಳಿ ಚಿತಾಗಾರಕ್ಕೆ ಮೃತದೇಹ ತಂದಿರುವ ಸಂಬಂಧಿಕರು ಕಳೆದ 3 ಗಂಟೆಯಿಂದ ಕಾಯುತ್ತಿದ್ದಾರೆ. ಸಂಜೆ 7 ಗಂಟೆಗೆ ಅಂತ್ಯಸಂಸ್ಕಾರ ಆಗಬಹುದು ಎಂದು ಚಿತಾಗಾರದ ಸಿಬ್ಬಂದಿ ಹೇಳುತ್ತಿದ್ದಾರೆ. ವಿದ್ಯುತ್ ಚಿತಾಗಾರದ ಬಳಿ ಸಂಬಂಧಿಕರು ಕಾಯುತ್ತಿದ್ದಾರೆ.

ಕೈಕಾಟು ಕಟ್ಟಿಹಾಕಿ ಟ್ರೀಟ್​ಮೆಂಟ್ ಆರೋಪ ನನ್ನ ಗಂಡನಿಗೆ ಕೈಕಾಲು ಕಟ್ಟಿ ಹಾಕಿ ಟ್ರೀಟ್ಮೆಂಟ್​ ಕೊಟ್ಟಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಹೆಂಡತಿ ಆರೋಪ ಮಾಡಿದ್ದಾರೆ. ನನ್ನ ಗಂಡನಿಗೆ ಕೈಕಾಲು ಕಟ್ಟಿಹಾಕಿ ಟ್ರೀಟ್​ಮೆಂಟ್​ ಕೊಡುವ ಅಗತ್ಯವೇನಿತ್ತು? ನನ್ನ ಗಂಡನ ಸಾವಿಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರೇ ಕಾರಣ ಎಂದು ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಹೇಳಿದ್ದಾರೆ. ಪೀಪಲ್​ ಟ್ರೀ ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್​ ಮಾಡಿಸಿದ್ದೆವು. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್​ ಸಿಗದ ಕಾರಣ ಇಲ್ಲಿಗೆ ಬಂದೆವು. ವಿಕ್ಟೋರಿಯಾದಲ್ಲಿ ಕೊವಿಡ್​ ಟೆಸ್ಟ್​ ವೇಳೆ ನೆಗೆಟಿವ್​ ಬಂದಿತ್ತು. ಹೇಗಿದ್ರೂ ಕೊವಿಡ್​ ವಾರ್ಡ್​ಗೆ ಬಂದಿದ್ದೀರಿ ಚಿಕಿತ್ಸೆ ಪಡೆಯಿರಿ ಎಂದು ಒತ್ತಾಯಪೂರ್ವಕವಾಗಿ ಚಿಕಿತ್ಸೆ ನೀಡಿದ್ದರು ಎಂದು ಅವರು ದೂರಿದ್ದಾರೆ.

ಏರ್​ಪೋರ್ಟ್​ನಲ್ಲಿ ಕ್ಯಾಬ್ ಚಾಲಕರ ಪರದಾಟ ಕೊರೊನಾ ವೈರಸ್ ಹರಡದಂತೆ ತಡೆಯಲು ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಕರ್ಫ್ಯೂಗೆ ಹೆದರಿ ದೇಶ, ವಿದೇಶದಿಂದ ಜನರು ಬರುತ್ತಿಲ್ಲ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30 ಗಂಟೆ ಕಾದರೂ ಬಾಡಿಗೆ ಸಿಗದೆ ಕ್ಯಾಬ್​ ಚಾಲಕರ ಪರದಾಡುತ್ತಿದ್ದಾರೆ. ಹೋಟೆಲ್, ದರ್ಶಿನಿಗಳನ್ನು ಮುಚ್ಚಿದ್ದರಿಂದ ಊಟವೂ ಇಲ್ಲ. ನಮ್ಮ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲವೆಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

(Big Ques in front of Crematorium in Bangalore for Cremation of Dead bodies of Covid patients)

ಇದನ್ನೂ ಓದಿ: Corona Deaths : ಕ್ರೂರಿ ಕೊರೊನಾ ಆರ್ಭಟಕ್ಕೆ ಚಿತಾಗಾರದ ಬಳಿ ಮೃತ ಸಂಬಂಧಿಕರ ರೋದನೆ ನೋಡ ತೀರದಾಗಿದೆ.!

ಇದನ್ನೂ ಓದಿ: ನಾವು ಮನೆ ಬಿಟ್ಟು ಕೆಲಸ ಮಾಡ್ತಾ ಇದೀವಿ, ನಾವು ಸತ್ರೂ ಯಾರೂ ಕೇಳೋರೆ ಇಲ್ಲ! ಚಿತಾಗಾರದ ಸಿಬ್ಬಂದಿ ಹೋರಾಟದ ಎಚ್ಚರಿಕೆ

Published On - 3:42 pm, Sun, 25 April 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?