ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬಿರುಬೇಸಿಗೆ ಹೆಚ್ಚಾಗುತ್ತಿದ್ದಂತೆ ಅಗ್ನಿ ಅವಘಡಗಳು ಹೆಚ್ಚಾಗುತ್ತಿವೆ. ಕಾಟನ್ ಮಿಲ್ಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಕೋಟಿ ಕೋಟಿ ಮೌಲ್ಯದ ಹತ್ತಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ನಗರದ ಹಂದ್ರಾಳು ರಸ್ತೆಯಲ್ಲಿರುವ ಬಿಲ್ವಾ ಕಾಟನ್ ಮಿಲ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ.
ರೂಪನಗುಡಿ ಬಸವರಾಜ್ ಎಂಬುವರಿಗೆ ಸೇರಿದ ಕಾಟನ್ ಮಿಲ್ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಆಗಲೆ ಕಾಟನ್ ಮಿಲ್ನಲ್ಲಿ ಇಡೀ ಹತ್ತಿ ರಾಶಿಗೆ ಬೆಂಕಿ ಅವರಿಸಿಕೊಂಡು ಬಿಟ್ಟಿತ್ತು. ಅಗ್ನಿಶಾಮಕ ಸಿಬ್ಬಂದಿಗಳು ಮೂರ್ನಾಲ್ಕು ಗಂಟೆಗಳ ಕಾಲ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ ತಕ್ಷಣ ನಿಯಂತ್ರಣಕ್ಕೆ ಬಂದಿರಲಿಲ್ಲ. ಮಿಲ್ನಲ್ಲಿ ಸಂಪೂರ್ಣ ಕಾಟನ್ ಬೆಂಕಿಗೆ ಸುಟ್ಟು ಕರಕಲಾಗಿದೆ. ಇದರಿಂದ ಕೋಟ್ಯಾಂತರ ಮೌಲ್ಯದ ಹತ್ತಿ ನಾಶವಾಗಿದೆ.
ಕಾಟನ್ ಮಿಲ್ ಮಾಲೀಕರ ಮಾಹಿತಿ ಪ್ರಕಾರ ಸುಮಾರು 7 ಕೋಟಿಗೂ ಅಧಿಕ ಮೌಲ್ಯದ ಕಾಟನ್ ಹಾಗೂ ಬೀಜ ಸುಟ್ಟು ಕರಕಲಾಗಿದೆ. ಹೀಗಾಗಿ ಕಾಟನ್ ಮಿಲ್ ಮಾಲೀಕರು ತುಂಬಾ ನಷ್ಟ ಅನುಭವಿಸಿದ್ದಾರೆ. ಮತ್ತೊಂದೆಡೆ ರೈತರಿಗೂ ಸಂಕಷ್ಟ ಶುರುವಾಗಿದೆ. ಸಾಕಷ್ಟು ರೈತರು ಕಾಟನ್ ಮಿಲ್ಗೆ ಹತ್ತಿ ಮಾರಾಟ ಮಾಡಿದ್ದಾರೆ. ಇನ್ನೂ ಕೆಲ ರೈತರಿಗೆ ಹಣ ಕೊಡಬೇಕಾಗಿದೆ. ಈಗ ಹತ್ತಿ ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಮಾಲೀಕರಿಗೆ ಭಾರಿ ನಷ್ಟ ಉಂಟಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಇವರ ನೆರವಿಗೆ ಬರಬೇಕು ಅಂತಾ ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ.
ಕಾಟನ್ ಮಿಲ್ನಲ್ಲಿದ್ದ ಕಾಟನ್ ಜೊತೆಗೆ ಯಂತ್ರೋಪಕರಣಗಳು ಕೂಡ ಬೆಂಕಿಗಾಹುತಿ ಆಗಿವೆ. ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದ್ದ ಕಾಟನ್ ಮಿಲ್ಗೆ ಈಗ ಬೆಂಕಿಗಾಹುತಿಯಿಂದ ಕೋಟಿ ಕೋಟಿ ರೂ. ನಷ್ಟ ಉಂಟಾಗಿದೆ.
ಇದನ್ನೂ ಓದಿ
ಆಟೋದಲ್ಲಿ ಹಾಸ್ಯ ನಟನ ಮೃತದೇಹ ಪತ್ತೆ! ಅನುಮಾನ ಹುಟ್ಟುಹಾಕಿದ ಸಾವು
ಕೊರೊನಾ ಎರಡನೇ ಅಲೆ.. ಮಾಸ್ಕ್ ಹಾಕಲ್ಲ-ದಂಡ ಪಾವತಿಸಲ್ಲ ಎಂದು ಮಾರ್ಷಲ್ಗಳ ಜೊತೆ ರಗಳೆ ತೆಗೆದ ಜನ