ಆಟೋದಲ್ಲಿ ಹಾಸ್ಯ ನಟನ ಮೃತದೇಹ ಪತ್ತೆ! ಅನುಮಾನ ಹುಟ್ಟುಹಾಕಿದ ಸಾವು

ವಿ. ಬಾಬು ಅವರಿಗೆ ಚಿತ್ರರಂಗದಲ್ಲಿ ಸೂಕ್ತ ಅವಕಾಶಗಳು ಇರಲಿಲ್ಲ. ಸರಿಯಾದ ಕೆಲಸವೂ ಸಿಗದ ಕಾರಣ ಆಟೋರಿಕ್ಷಾಗಳಲ್ಲಿ ಮಲಗುತ್ತಿದ್ದರು. ದೇವಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಆಟೋದಲ್ಲಿ ಹಾಸ್ಯ ನಟನ ಮೃತದೇಹ ಪತ್ತೆ! ಅನುಮಾನ ಹುಟ್ಟುಹಾಕಿದ ಸಾವು
ವಿ. ಬಾಬು
Follow us
ಮದನ್​ ಕುಮಾರ್​
| Updated By: Praveen Sahu

Updated on:Mar 25, 2021 | 1:31 PM

ಕಳೆದ ವರ್ಷ ಲಾಕ್​ಡೌನ್​ನಲ್ಲಿ ಅನೇಕ ಸೆಲೆಬ್ರಿಟಿಗಳು ಅಕಾಲಿಕವಾಗಿ ಕೊನೆಯುಸಿರೆಳೆದಿದ್ದರು. 2021ನೇ ವರ್ಷದಲ್ಲಾದರೂ ಅಂಥ ಘಟನೆಗಳು ನಡೆಯದಿರಲಿ ಎಂಬುದು ಎಲ್ಲರ ಪ್ರಾರ್ಥನೆ ಆಗಿತ್ತು. ಆದರೆ ಕಾಲಿವುಡ್​ಯಿಂದ ಈಗೊಂದು ಕಹಿ ಸುದ್ದಿ ಕೇಳಿಬಂದಿದೆ. ತಮಿಳು ಚಿತ್ರರಂಗದ ಹಾಸ್ಯ ಕಲಾವಿದ ವಿ. ಬಾಬು ಅವರು ಮೃತರಾಗಿದ್ದಾರೆ. ಅವರ ಸಾವು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ!

ಸೂಪರ್​ ಹಿಟ್​ ‘ಕಾದಲ್​’ ಸಿನಿಮಾದಲ್ಲಿ ವಿ. ಬಾಬು ಅವರು ಒಂದು ಚಿಕ್ಕ ಪಾತ್ರ ಮಾಡಿದ್ದರು. ಚೆನ್ನೈನಲ್ಲಿ ಅವರು ನಿಧನರಾಗಿದ್ದು, ಆಟೋರಿಕ್ಷಾದಲ್ಲಿ ಮೃತದೇಹ ಪತ್ತೆ ಆಗಿದೆ. ಮಾ.23ರ ರಾತ್ರಿಯೇ ಅವರು ಕೊನೆಯುರೆಳೆದಿದ್ದಾರೆ ಎಂದು ವರದಿ ಆಗಿದೆ. ಬಾಬು ಸಾವಿಗೆ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಕೆಲವು ವರ್ಷಗಳ ಹಿಂದೆ ವಿ. ಬಾಬು ತಂದೆ-ತಾಯಿ ನಿಧನರಾಗಿದ್ದರು. ಅದರಿಂದ ಅವರು ತೀವ್ರ ವಿಚಲಿತರಾಗಿದ್ದರು. ಚಿತ್ರರಂಗದಲ್ಲಿ ಸೂಕ್ತ ಅವಕಾಶಗಳು ಇರಲಿಲ್ಲ. ಸರಿಯಾದ ಕೆಲಸವೂ ಸಿಗದ ಕಾರಣ ಆಟೋರಿಕ್ಷಾಗಳಲ್ಲಿ ಮಲಗುತ್ತಿದ್ದರು. ದೇವಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತಂದೆ-ತಾಯಿ ನಿಧನದ ನಂತರ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಎಂದೆಲ್ಲ ವರದಿ ಆಗಿತ್ತು.

ಭರತ್​ ಮತ್ತು ಸಂಧ್ಯಾ ನಟಿಸಿದ್ದ 2004ರ ಸೂಪರ್​ ಹಿಟ್​ ಸಿನಿಮಾ ‘ಕಾದಲ್​’ನಲ್ಲಿ ಬಾಬು ಮಾಡಿದ ಚಿಕ್ಕ ಪಾತ್ರ ಗಮನ ಸೆಳೆದಿತ್ತು. ಸಿನಿಮಾ ಹೀರೋ ಆಗಬೇಕು ಎಂಬ ಆಸೆ ಇಟ್ಟುಕೊಂಡು ಆಡಿಷನ್​ಗೆ ಬರುವ ಯುವಕನ ಪಾತ್ರದ ಮೂಲಕ ಅವರು ಸಿಕ್ಕಾಪಟ್ಟೆ ನಗು ಉಕ್ಕಿಸಿದ್ದರು. ಆದರೆ ಈಗ ಅವರು ಅನುಮಾನಾಸ್ಪದವಾಗಿ ನಿಧನರಾಗಿರುವುದು ಇಡೀ ಚಿತ್ರರಂಗಕ್ಕೆ ಶಾಕ್​ ನೀಡಿದೆ.

ಕಾದಲ್​ ಸಿನಿಮಾ ಬಳಿಕ ಬಾಬು ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅದರಿಂದ ಅವರು ಆರ್ಥಿಕವಾಗಿ ತೊಂದರೆಗೆ ಸಿಲುಕಿದರು. ಅವರು ದೇವಸ್ಥಾನದಲ್ಲಿ ಕಾಣಿಸಿಕೊಂಡ ವಿಡಿಯೋ ಕೂಡ ಈ ಹಿಂದೆ ವೈರಲ್​ ಆಗಿತ್ತು.

ಇದನ್ನೂ ಓದಿ: ಖ್ಯಾತ ನಿರ್ದೇಶಕ ಎಸ್​.ಪಿ. ಜನನಾಥನ್​ ಹೃದಯಾಘಾತದಿಂದ ನಿಧನ! ಸೆಲೆಬ್ರಿಟಿಗಳ ಸಂತಾಪ

Published On - 1:03 pm, Thu, 25 March 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ