ಸಿದ್ದರಾಮಯ್ಯ ಸುಳ್ಳನ್ನೇ ಮನೆ ದೇವರಾಗಿ ಮಾಡಿಕೊಂಡಿದ್ದಾರೆ -C.T. ರವಿ
ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ಗೆ ಸುಳ್ಳೇ ಮನೆ ದೇವರು. ಕಾಂಗ್ರೆಸ್ಗೆ ಹೋದ ಸಿದ್ದರಾಮಯ್ಯ ಸಹ ಸುಳ್ಳನ್ನೆ ಮನೆ ದೇವರಾಗಿ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರು: ಸಿಎಂ ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಸತ್ಯವನ್ನು ನಂಬದೇ ಇರುವವರಿಗೆ ಸತ್ಯವೆಲ್ಲಾ ಸುಳ್ಳಾಗಿ ಕಾಣುತ್ತದೆ. ಸತ್ಯವನ್ನು ನಂಬುವ ಸ್ವಭಾವ ಕಾಂಗ್ರೆಸ್ನವರಿಗೆ ಇಲ್ಲ. ಹಾಗಾಗಿ, ಕಾಂಗ್ರೆಸ್ಗೆ ಇರುವ ಪಟ್ಟವನ್ನು ಇನ್ಯಾರು ಕಿತ್ತುಕೊಳ್ಳಲು ಆಗುವುದಿಲ್ಲ. ಕಾಂಗ್ರೆಸ್ಗೆ ಬಂದ ನಂತರ ಸಿದ್ದರಾಮಯ್ಯ ಕೂಡ ಅವರದ್ದೇ ಪಾಠವನ್ನ ಕಲಿಯುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರಿಗಿಂತ ನಿಸ್ಸೀಮರು ಯಾರು ಇಲ್ಲ ಎಂದಿದ್ದಾರೆ.
ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಹೀಗಾಗಿ, ಕಾಂಗ್ರೆಸ್ಗೆ ಸುಳ್ಳೇ ಮನೆ ದೇವರು. ಕಾಂಗ್ರೆಸ್ಗೆ ಹೋದ ಸಿದ್ದರಾಮಯ್ಯ ಸಹ ಸುಳ್ಳನ್ನೇ ಮನೆ ದೇವರಾಗಿ ಮಾಡಿಕೊಂಡಿದ್ದಾರೆ. ಅಲ್ಲದೆ ಸಿಎಎ ವಿರುದ್ಧ ಭಯ ಹುಟ್ಟಿಸಿ ಮುಸ್ಲಿಮರನ್ನು ಬೀದಿಗೆ ಇಳಿಸಿದ್ರು. ಜೊತೆಗೆ, ಕೇಂದ್ರದ ನೂತನ ಕೃಷಿ ಕಾಯ್ದೆಯ ಬಗ್ಗೆಯೂ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಸಿಟಿ ರವಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ‘ಗೋ ಹತ್ಯೆ ಪ್ರಹಸನ! ಗೋ ಹತ್ಯೆ ಮಾಡಿ ಅದನ್ನು ವಿದೇಶಕ್ಕೆ ರಫ್ತು ಮಾಡ್ತಿರೋರು ಯಾರು?’
Published On - 5:00 pm, Mon, 30 November 20




