ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಡಿಯೋದಲ್ಲಿರುವ ಸಂತ್ರಸ್ತೆಯ ಗ್ರಾಮಕ್ಕೆ ಕಬ್ಬನ್ಪಾರ್ಕ್ ಪೊಲೀಸರು ಭೇಟಿಕೊಟ್ಟರು. ಬಾಗಲಕೋಟೆ ಜಿಲ್ಲೆಯ ಸಂತ್ರಸ್ತೆಯ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿದರು. ಯುವತಿಯ ಗ್ರಾಮಕ್ಕೆ ಇಬ್ಬರು ಪೊಲೀಸರು ಭೇಟಿ ನೀಡಿದರು. ಪೊಲೀಸರು ಗ್ರಾಮದಲ್ಲಿ ಕೆಲವರನ್ನ ಮಾತಾಡಿಸಿ ಮಾಹಿತಿ ಸಂಗ್ರಹಿಸಿದರು. ಸದ್ಯ, ಕಳೆದ 25 ವರ್ಷದಿಂದ ಊರು ಬಿಟ್ಟಿರುವ ಯುವತಿ ತಂದೆ ಆಗಾಗ ಊರಿಗೆ ಬಂದು ಹೋಗುತ್ತಿದ್ದರು ಎಂದು ಪೊಲೀಸರಿಗೆ ತಿಳಿದುಬಂದಿದೆ.
ಹೀಗಾಗಿ, ಮನೆ ಪರಿಶೀಲಿಸಿ ನೋಟಿಸ್ ಅಂಟಿಸಿ ಪೊಲೀಸರು ತೆರಳಿದರು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಅಂಟಿಸಿದರು. ನೋಟಿಸ್ ನೋಡಿದ ತಕ್ಷಣ ವಿಚಾರಣೆಗೆ ಹಾಜರಾಗಬೇಕು ಎಂದು ಕಬ್ಬನ್ಪಾರ್ಕ್ ಠಾಣೆ ಪೊಲೀಸರಿಂದ ಯುವತಿಗೆ ಸೂಚನೆ ನೀಡಲಾಗಿದೆ.
‘ಸ್ವಲ್ಪ ದಿನಗಳ ನಂತರ ಸತ್ಯಾಂಶ ಹೊರಗೆ ಬಂದೇ ಬರುತ್ತದೆ’
ಇತ್ತ, ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು ಕೇಳಿ ಬರುತ್ತಿರುವ ವಿಚಾರವಾಗಿ ಸ್ವಲ್ಪ ದಿನಗಳ ನಂತರ ಸತ್ಯಾಂಶ ಹೊರಗೆ ಬಂದೇ ಬರುತ್ತದೆ ಎಂದು ರಮೇಶ್ ಸಹೋದರ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಯಾರ ಮೇಲೆ ಯಾರೂ ದ್ವೇಷ ಮಾಡುವ ಅಗತ್ಯವಿಲ್ಲ. ಪೊಲೀಸ್ ಇಲಾಖೆಯಿದೆ, ಪೊಲೀಸರು ತನಿಖೆ ಮಾಡುತ್ತಾರೆ. ನಿನ್ನೆಯಷ್ಟೇ ಪೊಲೀಸ್ ತನಿಖೆ ಆರಂಭವಾಗಿದೆ, ಕಾಯೋಣ. ಸ್ವಲ್ಪ ದಿನಗಳ ನಂತರ ಸತ್ಯಾಂಶ ಹೊರಗೆ ಬಂದೇ ಬರುತ್ತದೆ ಎಂದು ಹೇಳಿದರು.
ಸಿಡಿ ಕೇಸ್‌ನ ತನಿಖೆ ಸಿಬಿಐಗೆ ವಹಿಸಲು ನಾವು ಆಗ್ರಹಿಸಲ್ಲ ಎಂದು ಶಾಸಕ ಯತ್ನಾಳ್ ಹೇಳಿಕೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು. ಇಂಥ ಘಟನೆ ನಡೆಯಬಾರದೆಂದು ಎಲ್ಲರ ಅಭಿಪ್ರಾಯವಿದೆ. ಪೊಲೀಸರು ಯಾವ ತನಿಖೆ ಬೇಕಾದ್ರೂ ಮಾಡಲಿ ಎಂದು ರಮೇಶ್ ಸಹೋದರ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.
ಮೌಢ್ಯ ನಿವಾರಣೆಗೆ ಸ್ಮಶಾನ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದರು. ಜುಮನಾಳದಲ್ಲಿ ತೆರೆದ ವಾಹನದಲ್ಲಿ ಸತೀಶ್ ಅವರನ್ನು ಮೆರವಣಿಗೆ ಮುಖಾಂತರ ಕಾರ್ಯಕ್ರಮಕ್ಕೆ ಕರೆತರಲಾಯಿತು. ವಿಜಯಪುರ ಜಿ.ಪಂ ಅಧ್ಯಕ್ಷೆ ಸುಜಾತಾರಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ: Darshan | ಹಾಸನದಲ್ಲಿ D ಬಾಸ್ ಹವಾ.. ‘ಐರಾವತ’ನ ನೋಡಲು ಮುಗಿಬಿದ್ದ ಅಭಿಮಾನಿಗಳು