Darshan | ಹಾಸನದಲ್ಲಿ D ಬಾಸ್ ಹವಾ.. ‘ಐರಾವತ’ನ ನೋಡಲು ಮುಗಿಬಿದ್ದ ಅಭಿಮಾನಿಗಳು
ಜಿಲ್ಲೆಯ ಸಂತೆಪೇಟೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭಕ್ಕೆ ಆಗಮಿಸಿದ ನಟ ದರ್ಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಸಮಾರಂಭದಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಜಿ.ಪಂ ಅರೋಗ್ಯ ಸ್ಥಾಯಿ ಸಮಿತಿ ಅದ್ಯಕ್ಷೆ ಭವಾನಿ ರೇವಣ್ಣ ಸಹ ಭಾಗಿಯಾಗಿದ್ದರು.
ಹಾಸನ: ರಾಬರ್ಟ್ ಸಿನಿಮಾದ ಭರ್ಜರಿ ಯಶಸ್ಸಿನ ಸಂತಸದಲ್ಲಿರುವ ನಟ ದರ್ಶನ್ ಅವರು ಮಾತ್ರ ಎಂದಿನಂತೆ ಸಮಾಜದ ಪರ ಇರುವ ತಮ್ಮ ಕಾಳಜಿ ಮರೆತಿಲ್ಲ. ಹಾಗಾಗಿ, ಇಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಏಪರ್ಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಯಜಮಾನ ಪಾಲ್ಗೊಂಡು ಮಾನಿನಿಯರ ಬೆಂಬಲಕ್ಕೆ ನಿಂತರು. ಹೌದು, ಜಿಲ್ಲೆಯ ಸಂತೆಪೇಟೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭಕ್ಕೆ ಆಗಮಿಸಿದ ನಟ ದರ್ಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಸಮಾರಂಭದಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಜಿ.ಪಂ ಅರೋಗ್ಯ ಸ್ಥಾಯಿ ಸಮಿತಿ ಅದ್ಯಕ್ಷೆ ಭವಾನಿ ರೇವಣ್ಣ ಸಹ ಭಾಗಿಯಾಗಿದ್ದರು.
ಇದೇ ವೇಳೆ, ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗವೂ ನಡೆಯಿತು. ಎಲ್ಲಡೆಯಿಂದ ಡಿ ಬಾಸ್ ಡಿ ಬಾಸ್ ಎಂಬ ಘೋಷಣೆ ಮಹಾಕಹಳೆ ಕೇಳಿಬಂತು.
ಇದನ್ನೂ ಓದಿ: ಕುಂದಾನಗರಿಯಲ್ಲಿ ಕೊರೊನಾರ್ಭಟ 2.0: ಒಂದೇ ದಿನ.. ಒಂದೇ ಕುಟುಂಬದ.. 14 ಮಂದಿಗೆ ವಕ್ಕರಿಸಿದ ವೈರಸ್