‘ಅಸ್ಸಾಂ ಲೇಡಿ’ಗಾಗಿ ಹುಡುಗರ ಗ್ಯಾಂಗ್​ ವಾರ್.. ಗಲಾಟೆಯಲ್ಲಿ ಮಹಿಳೆಗೂ ಬಿತ್ತು ಎರಡು ಗೂಸಾ!

‘ಅಸ್ಸಾಂ ಲೇಡಿ’ಗಾಗಿ ಹುಡುಗರ ಗ್ಯಾಂಗ್​ ವಾರ್.. ಗಲಾಟೆಯಲ್ಲಿ ಮಹಿಳೆಗೂ ಬಿತ್ತು ಎರಡು ಗೂಸಾ!
‘ಅಸ್ಸಾಂ ಲೇಡಿ’ಗಾಗಿ ಹುಡುಗರ ಗ್ಯಾಂಗ್​ ವಾರ್

ಅಸ್ಸಾಂ ಮೂಲದ ಮಹಿಳೆಗಾಗಿ ಹುಡುಗರು ಹೊಡೆದಾಟ ನಡೆಸಿರುವ ಘಟನೆ ಪಟ್ಟಣದ ಆಶಾಪುರ‌ ಟಿಂಬರ್ ‌ಯಾರ್ಡ್‌ ಬಳಿ ನಡೆದಿದೆ. ಅಸ್ಸಾಂ ಲೇಡಿಗಾಗಿ ರಾಜಾ, ಸಿಂಕರ್‌ ಹಾಗೂ ಜಿನೋದ್‌, ದೀಪಕ್ ಎಂಬ ಹುಡುಗರು ಗ್ಯಾಂಗ್​ ವಾರ್​ ನಡೆಸಿದ್ದಾರೆ.

KUSHAL V

|

Mar 14, 2021 | 9:55 PM

ನೆಲಮಂಗಲ: ಅಸ್ಸಾಂ ಮೂಲದ ಮಹಿಳೆಗಾಗಿ ಹುಡುಗರು ಹೊಡೆದಾಟ ನಡೆಸಿರುವ ಘಟನೆ ಪಟ್ಟಣದ ಆಶಾಪುರ‌ ಟಿಂಬರ್ ‌ಯಾರ್ಡ್‌ ಬಳಿ ನಡೆದಿದೆ. ಅಸ್ಸಾಂ ಲೇಡಿಗಾಗಿ ರಾಜಾ, ಸಿಂಕರ್‌ ಹಾಗೂ ಜಿನೋದ್‌, ದೀಪಕ್ ಎಂಬ ಹುಡುಗರು ಗ್ಯಾಂಗ್​ ವಾರ್​ ನಡೆಸಿದ್ದಾರೆ. ಹೊಡೆದಾಟದಲ್ಲಿ ಒಬ್ಬನಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

NLM FIGHT 1

ಆಶಾಪುರ‌ ಟಿಂಬರ್ ‌ಯಾರ್ಡ್‌

ಅಂದ ಹಾಗೆ, ಗಲಾಟೆ ವೇಳೆ ಅಸ್ಸಾಂ ಲೇಡಿ ಮೇಲೂ ಬಣಗಳು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬೈ ದಿ ಬೈ, ಅಸ್ಸಾಂ ಮೂಲದ ಮಹಿಳೆ ಮತ್ತು ಹುಡುಗರು ಕೆಲಸ ಅರಿಸಿ ಬೆಂಗಳೂರಿಗೆ ಬಂದಿದ್ದರು. ನೆಲಮಂಗಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹೂವಿನ ಅಂಗಡಿ ಬಳಿ ನಿಂತಿದ್ದ ಮಹಿಳೆ ಸರ ಕದ್ದ ಕಳ್ಳರು ಹೂವಿನ ಅಂಗಡಿ ಬಳಿ ನಿಂತಿದ್ದ ಮಹಿಳೆ ಸರ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ದಾಬಸ್​ಪೇಟೆ ಸರ್ಕಲ್​ನಲ್ಲಿ ನಡೆದಿದೆ. ಪ್ರೇಮಾ ಎಂಬುವವರ 30 ಗ್ರಾಂ ಮಾಂಗಲ್ಯ ಸರ ಕಳ್ಳತನವಾಗಿದೆ. ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ ಎಸಗಲಾಗಿದೆ. ದಾಬಸ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಿಕ್ಕಬಳ್ಳಾಪುರ ಡಿಸಿ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ, ಹಣ ವಸೂಲಿ ಚಿಕ್ಕಬಳ್ಳಾಪುರ ಡಿಸಿ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ ಸೃಷ್ಟಿಸಿ ಜನರಿಂದ ಹಣ ವಸೂಲಿ ಮಾಡಲು ಮುಂದಾಗಿರುವ ಸಂಗತಿ ವರದಿಯಾಗಿದೆ. ಆಸ್ಪತ್ರೆ ಎಮರ್ಜೆನ್ಸಿ ‌ವಾರ್ಡ್​​ನಲ್ಲಿದ್ದೇನೆ ಎಂದು ಹೇಳಿ ಸಾರ್ವಜನಿಕರಿಂದ ಫೋನ್​ಪೇ ಹಾಗೂ ಗೂಗಲ್​​ ಪೇ ಮೂಲಕ ಹಣ ವಸೂಲಿಗೆ ಕಿಡಿಗೇಡಿಗಳು ಮುಂದಾಗಿರುವ ಪ್ರಕರಣ ನಡೆದಿದೆ.

CBL FAKE ACCOUNT 1

ಚಿಕ್ಕಬಳ್ಳಾಪುರ ಡಿಸಿ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ

ಕಿರಾತಕರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದಾರೆ. ಇನ್ನು, ಈ ವಿಚಾರ ಗಮನಕ್ಕೆ ಬಂದ ತಕ್ಷಣ ಎಚ್ಚೆತ್ತ ಜಿಲ್ಲಾಧಿಕಾರಿ ಆರ್​​.ಲತಾ ಮೋಸ ಹೋಗದಂತೆ ಜನರಿಗೆ ಮನವಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಡಿಸಿ ಎಚ್ಚರಿಕೆ ಸಹ ಕೊಟ್ಟಿದ್ದಾರೆ.

ದಾವಣಗೆರೆ ಎಸ್​ಪಿ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ದಾವಣಗೆರೆ ಎಸ್​.ಪಿ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ಸೃಷ್ಟಿಸಲಾಗಿದೆ. ಎಸ್.​ಪಿ ಹನುಮಂತರಾಯ ಹೆಸರಿನಲ್ಲಿ ನಕಲಿ FB ಖಾತೆ ಸೃಷ್ಟಿಸಲಾಗಿದೆ. ನಕಲಿ ಖಾತೆ ಸೃಷ್ಟಿಸಿದ ಕಿರಾತಕರು ಹಣ ನೀಡುವಂತೆ ಎಸ್​.ಪಿ ಪರಿಚಯಸ್ಥರಿಗೆ ಬೇಡಿಕೆ ಇಟ್ಟಿದ್ದರು. ಇದೀಗ, ಇಂತಹ ಬೇಡಿಕೆಗೆ ಸ್ಪಂದಿಸದಂತೆ ದಾವಣಗೆರೆ ಎಸ್​.ಪಿ ವಿನಂತಿಸಿದ್ದಾರೆ.

DVG FAKE FB 1

ದಾವಣಗೆರೆ ಎಸ್​ಪಿ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ

ಕಲ್ಲಿನ ಕ್ವಾರಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು ಕಲ್ಲಿನ ಕ್ವಾರಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯಲ್ಲಿ ನಡೆದಿದೆ. ಕೆರಕಲಮಟ್ಟಿ ಕ್ವಾರಿಯಲ್ಲಿ ಬೀರಪ್ಪ ತೆಗ್ಗಿ(14) ನೀರುಪಾಲಾಗಿದ್ದಾನೆ. ಮೂವರು ಸ್ನೇಹಿತರ ಜೊತೆ ಈಜಲು ತೆರಳಿದ್ದಾಗ ದುರಂತ ಸಂಭವಿಸಿದೆ.

ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಬಾಲಕನ ಶವವನ್ನು ಹೊರತೆಗೆದಿದ್ದಾರೆ. ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೆಟ್ಟಿಕೆರೆಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು ಇತ್ತ, ಶೆಟ್ಟಿಕೆರೆಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಲಾಗಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿದೆ. ತಿಪಟೂರು ತಾಲೂಕಿನ ಕಟ್ಟಿಗೆನಹಳ್ಳಿ ಗ್ರಾಮದ ನಿವಾಸಿ ಗಿರೀಶ್(26) ನೀರುಪಾಲಾದ ಯುವಕ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ವರದಿಯಾಗಿದೆ.

TMK DROWNING 2

ಶೆಟ್ಟಿಕೆರೆಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು

TMK DROWNING 3

ನೀರುಪಾಲಾದ ಯುವಕ ಗಿರೀಶ್

ಮರಕ್ಕೆ ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ ಮರಕ್ಕೆ ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕಳ್ಳಿಪಾಳ್ಯದಲ್ಲಿ ನಡೆದಿದೆ. ಕಳ್ಳಿಪಾಳ್ಯ ಗ್ರಾಮದ ಬಳಿ ಪ್ರದೀಪ್(27) ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತಪಟ್ಟ ಪ್ರದೀಪ್​ ನುಲುಗಮ್ಮನಹಳ್ಳಿಯ ನಿವಾಸಿ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿದ್ಯುತ್​ ತಂತಿ ತಗುಲಿ 22 ವರ್ಷದ ಯುವಕ ದುರ್ಮರಣ ವಿದ್ಯುತ್​ ತಂತಿ ತಗುಲಿ 22 ವರ್ಷದ ಯುವಕ ದುರ್ಮರಣ ಹೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾನ್​ಮಳೆ ದೊಡ್ಡಿಯಲ್ಲಿ ನಡೆದಿದೆ. 22 ವರ್ಷದ ವೀರ ಎಂಬ ಯುವಕನು ಸಾವನ್ನಪ್ಪಿದ್ದಾರೆ. ಮರದಲ್ಲಿ ಹುಣಸೆ ಹಣ್ಣು ಕೀಳಲು ಹೋದಾಗ ಅವಘಡ ಸಂಭವಿಸಿದೆ. ಹನೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕೋಚರಿ ಗ್ರಾಮದಲ್ಲಿ ಬಾವಿಗೆ ಬಿದ್ದ ಮೊಸಳೆ ಕೋಚರಿ ಗ್ರಾಮದಲ್ಲಿ ಮೊಸಳೆಯೊಂದು ಬಾವಿಗೆ ಬಿದ್ದ ಪ್ರಸಂಗ ನಡೆದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಹಿರಣ್ಯಕೇಶಿ ನದಿಯಿಂದ ಬಂದ 8 ಅಡಿ ಉದ್ದದ ಮೊಸಳೆ ಗ್ರಾಮದ ಬಾವಿಗೆ ಬಿದ್ದಿದೆ. ಆಹಾರ ಅರಸಿ ಬಂದು ಸಿಲುಕಿದ ಮೊಸಳೆಯನ್ನು ಹೊರತೆಗೆಯಲು ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿಯ ಹರಸಾಹಸ ಪಡುತ್ತಿದ್ದಾರೆ.

GDG CROCODILE 1

ಕೋಚರಿ ಗ್ರಾಮದಲ್ಲಿ ಬಾವಿಗೆ ಬಿದ್ದ ಮೊಸಳೆ

ಇದನ್ನೂ ಓದಿ: ‘ರಾಮಮಂದಿರ ಕಟ್ಟೋಕೆ 2,500 ಕೋಟಿ ಸಂಗ್ರಹ ಆಗಿದೆ; ಅದೇ ಒಂದು ಊರಿನಲ್ಲಿ ದೇವಸ್ಥಾನ ಕಟ್ಟೋಕೆ ನಮ್ಮಂಥವರ ಬಳಿ ಬರ್ತೀರಾ’

Follow us on

Related Stories

Most Read Stories

Click on your DTH Provider to Add TV9 Kannada