ಆನ್​​​ಲೈನ್ ವಂಚನೆಗೊಳಗಾದವರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸೋಕಾಗಲ್ಲ ಕೇಸ್

ಬೆಂಗಳೂರು: ಇದು ಡಿಜಿಟಲ್ ಯುಗ. ಸ್ಮಾರ್ಟ್​ಫೋನ್​. ಗೂಗಲ್ ಪೇ. ಫೋನ್ ಪೇ. ಪೇಟಿಎಮ್​ನಲ್ಲೇ ವ್ಯವಹಾರ ಮುಗಿದೋಗುತ್ತೆ. ಕಾರ್ಡ್​​ ಗೀಚಿದ್ರೆ ಸಾಕು ಕಣ್ಣು ಮಿಟುಕಿಸೋದ್ರೊಳಗೆ ಹಣ ಖಾತೆಗೆ ಜಮೆ ಆಗುತ್ತೆ. ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೀತಿದ್ಯೋ ಸೈಬರ್ ಕಳ್ಳರು ಕೂಡ ಅಷ್ಟೇ ಆಕ್ಟೀವ್ ಆಗ್ತಿದ್ದಾರೆ. ಕಿಲಾಡಿಗಳ ಆಟಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಆನ್​​​ಲೈನ್ ವಂಚನೆಗೊಳಗಾದವರಿಗೆ ಕಾದಿದೆ ಬಿಗ್ ಶಾಕ್..! ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆ ಸೈಬರ್ ಕ್ರೈಂಗಳು ಕೂಡ ಹೆಮ್ಮರದಂತೆ ಬೆಳೀತಿದೆ. ಖದೀಮರು ಎಲ್ಲೋ ಕೂತ್ಕೊಂಡು ಬೇರೆವರ ಖಾತೆಯಲ್ಲಿರೋ […]

ಆನ್​​​ಲೈನ್ ವಂಚನೆಗೊಳಗಾದವರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸೋಕಾಗಲ್ಲ ಕೇಸ್
ಸೈಬರ್ ಕ್ರೈಮ್ ಪೊಲೀಸ್ ಠಾಣೆ
ಸಾಧು ಶ್ರೀನಾಥ್​

Updated on: Dec 11, 2019 | 7:14 AM

ಬೆಂಗಳೂರು: ಇದು ಡಿಜಿಟಲ್ ಯುಗ. ಸ್ಮಾರ್ಟ್​ಫೋನ್​. ಗೂಗಲ್ ಪೇ. ಫೋನ್ ಪೇ. ಪೇಟಿಎಮ್​ನಲ್ಲೇ ವ್ಯವಹಾರ ಮುಗಿದೋಗುತ್ತೆ. ಕಾರ್ಡ್​​ ಗೀಚಿದ್ರೆ ಸಾಕು ಕಣ್ಣು ಮಿಟುಕಿಸೋದ್ರೊಳಗೆ ಹಣ ಖಾತೆಗೆ ಜಮೆ ಆಗುತ್ತೆ. ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೀತಿದ್ಯೋ ಸೈಬರ್ ಕಳ್ಳರು ಕೂಡ ಅಷ್ಟೇ ಆಕ್ಟೀವ್ ಆಗ್ತಿದ್ದಾರೆ. ಕಿಲಾಡಿಗಳ ಆಟಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ.

ಆನ್​​​ಲೈನ್ ವಂಚನೆಗೊಳಗಾದವರಿಗೆ ಕಾದಿದೆ ಬಿಗ್ ಶಾಕ್..!
ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆ ಸೈಬರ್ ಕ್ರೈಂಗಳು ಕೂಡ ಹೆಮ್ಮರದಂತೆ ಬೆಳೀತಿದೆ. ಖದೀಮರು ಎಲ್ಲೋ ಕೂತ್ಕೊಂಡು ಬೇರೆವರ ಖಾತೆಯಲ್ಲಿರೋ ಹಣ ಖೋತಾ ಮಾಡ್ತಿದ್ದಾರೆ. ಆನ್​​ಲೈನ್​​ ವಂಚನೆಗೊಳಗಾದವರ ಕೇಸ್​ಗಳು ಕ್ಷಣಕ್ಕೊಂದು. ದಿನಕ್ಕೊಂದು ಪೊಲೀಸ್ ಠಾಣೆ ಮೆಟ್ಟಿಲೇರ್ತಿವೆ. ಮೋಸ ಹೋಗಿ ಸೈಬರ್​ ಕ್ರೈಂ ಠಾಣೆ ಮೆಟ್ಟಿಲೇರ್ತಿದ್ದ ಜನರಿಗೆ ಶಾಕಿಂಗ್ ವಿಷ್ಯವೊಂದು ಕಾದಿದೆ.

ಅದೇನಂದ್ರೆ, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಸಂಖ್ಯೆ ಮಿತಿ ಮೀರಿ ದಾಖಲಾಗಿವೆಯಂತೆ. ಈಗಾಗಲೇ ಪೊಲೀಸ್ ನಿಯಮದ ಪ್ರಕಾರ ಒಂದು ಠಾಣೆಯಲ್ಲಿ 1 ವರ್ಷದ ಅವಧಿಯಲ್ಲಿ 9ರಿಂದ 10 ಸಾವಿರ ಪ್ರಕರಣಗಳನ್ನ ದಾಖಲಿಸೋ ಅವಕಾಶವಿದೆ. ಆನ್​​ಲೈನ್​ ವಂಚನೆ ಕೇಸ್​ಗಳ ಸಂಖ್ಯೆ ಹೆಚ್ಚಾಗಿರೋದ್ರಿಂದ ಯಾವುದೇ ಕೇಸ್​​ಗಳನ್ನೂ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ತಿಲ್ಲ.

ಹೀಗಾಗಿ, ಈ ಡಿಸೆಂಬರ್ 2019ರ ಒಳಗಾಗಿ ವಂಚನೆಗೊಳಗಾದವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಾಧ್ಯವಿಲ್ಲ. ಆನ್​​ಲೈನ್ ವಂಚನೆಗೊಳಗಾದೋರು ತಮ್ಮ ತಮ್ಮ ಏರಿಯಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡ್ಬೇಕಂತೆ.

ಈ ಕುರಿತು ದೂರು ಸ್ವೀಕರಿಸುವಂತೆ ನಗರದ ಎಲ್ಲಾ ಪೊಲೀಸ್ ಠಾಣೆಗೂ ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಒಟ್ನಲ್ಲಿ, ಆನ್​ಲೈನ್ ವಂಚನೆ ಜಾಲಕ್ಕೆ ತುತ್ತಾಗೋರು ಸೈಬರ್ ಕ್ರೈಂ ಠಾಣೆ ಮೊರೆ ಹೋದ್ರೆ ಇದೀಗ ಹೊಸದೊಂದು ತಲೆನೋವು ಎದುರಾಗಿದೆ. 2020ಜನವರಿ ಬಳಿಕ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸ್ಬೋದಂತೆ.

Published On - 7:14 am, Wed, 11 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us