cyclone tauktae ಕೇರಳದಲ್ಲಿ ಇಬ್ಬರು ಬಲಿ, ಮುಂಬೈನಲ್ಲಿ ಆಸ್ಪತ್ರೆಯಿಂದ 580 ಕೊರೊನಾ ಸೋಂಕಿತರ ಸ್ಥಳಾಂತರ

|

Updated on: May 16, 2021 | 11:58 AM

ತೌಕ್ತೆ ಚಂಡಮಾರುತದ ಮುನ್ನೆಚ್ಚರಿಕಾ ಕ್ರಮವಾಗಿ ಜಂಬೊ ಕೇಂದ್ರಗಳಿಂದ 580 ಕೊರೊನಾ ಸೋಂಕಿತರನ್ನು ಸುರಕ್ಷಿತ ವಿವಿಧ ಆಸ್ಪತ್ರೆಗಳಿಗೆ ವರ್ಗಾಯಿಸಿರುವುದಾಗಿ ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ತಿಳಿಸಿದೆ.

cyclone tauktae ಕೇರಳದಲ್ಲಿ ಇಬ್ಬರು ಬಲಿ, ಮುಂಬೈನಲ್ಲಿ ಆಸ್ಪತ್ರೆಯಿಂದ 580 ಕೊರೊನಾ ಸೋಂಕಿತರ ಸ್ಥಳಾಂತರ
ತೌಕ್ತೆ ಚಂಡಮಾರುತ
Follow us on

ಕೊಚ್ಚಿ: ತೌಕ್ತೆ ಚಂಡಮಾರುತ ಕರಾವಳಿಯಿಂದ ಉತ್ತರದ ಕಡೆಗೆ ಹೊರಟಿದ್ದು ಭೀಕರ ಗಾಳಿ ಮತ್ತು ಭಾರೀ ಮಳೆಯಿಂದಾಗಿ ಕೇರಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ತೌಕ್ತೆ ಚಂಡಮಾರುತದ ಪ್ರಭಾವ ಭೀಕರವಾಗಿದೆ.

ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಂಭವಿಸಿದ್ದು ಅನೇಕ ಅನಾಹುತಗಳಾಗಿವೆ. ಕಂದಾಯ ಇಲಾಖೆ ಪ್ರಕಾರ 38 ಮನೆಗಳಿಗೆ ಹಾನಿಯಾಗಿದ್ದು ಅನೇಕ ತಗ್ಗು ಪ್ರದೇಶಗಳು, ರಸ್ತೆಗಳು ಮುಳುಗಿವೆ. ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ನೆಲಕಚ್ಚಿವೆ.

ಎರ್ನಾಕುಲಂ ಮತ್ತು ಕೋಜಿಕೋಡೆಯಲ್ಲಿ ಭಾರಿ ಮಳೆಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ವೈನಾಡ್, ಕೋಜಿಕೋಡೆ, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ಒಂಬತ್ತು ಜಿಲ್ಲೆಗಳು ರೆಡ್ ಅಲರ್ಟ್ನಲ್ಲಿವೆ. ಇಂದೂ ಕೂಡ ಭಾರಿ ಮಳೆ ಸಂಭವಿಸಲಿದೆ. ಆದರೆ ಐಎಂಡಿ ಎಲ್ಲಾ ರೆಡ್ ಅಲರ್ಡ್ ಎಚ್ಚರಿಕೆಯನ್ನು ಹಿಂತೆದುಕೊಂಡಿದೆ. ಮತ್ತು ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂಗಳಲ್ಲಿ ಮಾತ್ರ ಆರೆಂಟ್ ಅಲರ್ಟ್ ಘೋಷಿಸಲಾಗಿದೆ. 2094 ಜನರಿಗೆ 71 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಕೇರಳಾ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ತೌಕ್ತೆ ಚಂಡಮಾರುತದ ಪ್ರಭಾವದಿಂದಾಗಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆಯಾಗಿದ್ದು ಅನೇಕ ಮನೆಗಳು ಜಲಾವೃತವಾಗಿವೆ. ಇನ್ನು ಚಂಡಮಾರುತ ಮತ್ತಷ್ಟು ತೀವ್ರಗೊಳ್ಳಲಿದ್ದು ಮೇ 18ರ ಬೆಳಗ್ಗೆ ಗುಜರಾತ್ ಕರಾವಳಿಯನ್ನು ತಲುಪಲಿದೆ.

ತೌಕ್ತೆ ಚಂಡಮಾರುತದಿಂದಾಗಿ, ಕಳೆದ 24 ಗಂಟೆಗಳಲ್ಲಿ 3 ಕರಾವಳಿ ಜಿಲ್ಲೆಗಳು ಮತ್ತು 3 ಮಲ್ನಾಡ್ ಜಿಲ್ಲೆಗಳು ಸೇರಿದಂತೆ 6 ಜಿಲ್ಲೆಗಳಲ್ಲಿ ಸಂಭವಿಸಿದ ಭಾರಿ ಮಳೆಗೆ ಈವರೆಗೆ 4 ಜನರು ಪ್ರಾಣ ಕಳೆದುಕೊಂಡಿದ್ದಾರೆ. 73 ಗ್ರಾಮಗಳು ಪ್ರಭಾವಕ್ಕೆ ಒಳಗಾಗಿವೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ತಿಳಿಸಿದೆ.

ಗುಜರಾತ್ ಕರಾವಳಿಯತ್ತ ಚಂಡಮಾರುತ
ಗುಜರಾತ್ ಕರಾವಳಿಯಲ್ಲಿ ಮೇ 18ರ ಮಂಗಳವಾರ ಮುಂಜಾನೆ 150 ಕಿ.ಮೀ ವೇಗದಲ್ಲಿ ಭೂಕುಸಿತ ಸಂಭವಿಸುವ ಮುನ್ಸೂಚನೆ ಇದೆ. ಭವನಗರ ಜಿಲ್ಲೆಯ ಪೊರ್ಬಂದರ್ ಮತ್ತು ಮಾಹುವಾ ನಡುವೆ ಚಂಡಮಾರುತದ ಹಾದು ಹೋಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್ ಸೇರಿದಂತೆ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ಪ್ರಭಾವದಿಂದಾಗಿ ದಿನಕ್ಕೆ 100 ಮಿ.ಮೀ ಗಿಂತ ಹೆಚ್ಚಿನ ಮಳೆಯಾಗಲಿದೆ. ಚಂಡಮಾರುತವು ದೂರ ಹೋದ ನಂತರವೂ, ದಕ್ಷಿಣ ಭಾರತವು ಕಡಲತೀರದ ಗಾಳಿಯಿಂದಾಗಿ ಮುಂದಿನ ಐದು ದಿನಗಳಲ್ಲಿ ನಿರಂತರವಾಗಿ 20 ಮಿ.ಮೀ ಗಿಂತ ಹೆಚ್ಚು ಮಳೆಯಾಗಲಿದೆ.

580 ಕೊವಿಡ್ ಸೋಂಕಿತ ಸ್ಥಳಾಂತರ
ಇನ್ನು ತೌಕ್ತೆ ಚಂಡಮಾರುತದ ಮುನ್ನೆಚ್ಚರಿಕಾ ಕ್ರಮವಾಗಿ ಜಂಬೊ ಕೇಂದ್ರಗಳಿಂದ 580 ಕೊರೊನಾ ಸೋಂಕಿತರನ್ನು ಸುರಕ್ಷಿತ ವಿವಿಧ ಆಸ್ಪತ್ರೆಗಳಿಗೆ ವರ್ಗಾಯಿಸಿರುವುದಾಗಿ ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ತಿಳಿಸಿದೆ.

ಇದನ್ನೂ ಓದಿ: Cyclone Tauktae ಮೇ 18ರಂದು ಗುಜರಾತ್ ಕರಾವಳಿ ದಾಟಲಿದೆ ತೌಕ್ತೆ ಚಂಡಮಾರುತ

Published On - 11:56 am, Sun, 16 May 21