ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡರೆ ಮೊದಲು ಚಿಕಿತ್ಸೆ ಪಡೆಯಿರಿ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್

20 ಸಾವಿರ ಡೋಸ್ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡರೆ ಮೊದಲು ಚಿಕಿತ್ಸೆ ಪಡೆಯಿರಿ. ಬ್ಲ್ಯಾಕ್ ಫಂಗಸ್​​ನಿಂದ ಮೃತಪಟ್ಟ ಬಗ್ಗೆ ಮಾಹಿತಿ ಗೊತ್ತಿಲ್ಲ. ನಿಖರವಾದ ಅಂಕಿ-ಸಂಖ್ಯೆ ಈಗ ಹೇಳುವುದಕ್ಕೆ ಆಗಲ್ಲ. ಇದ್ಕಕಾಗಿಯೇ ಇಂದು ಒಂದು ಸಮಿತಿ ಮಾಡುತ್ತೇವೆ.

ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡರೆ ಮೊದಲು ಚಿಕಿತ್ಸೆ ಪಡೆಯಿರಿ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ
Follow us
sandhya thejappa
|

Updated on: May 16, 2021 | 12:37 PM

ಬೆಂಗಳೂರು: ಫಂಗಸ್ ಇನ್ಫೆಕ್ಷನ್​ನಿಂದ ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ. ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಸಾವುಗಳು ಕೂಡ ಆಗುತ್ತದೆ ಎಂದು ತಿಳಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ನಾಳೆಯಿಂದ ಬೌರಿಂಗ್​ನಲ್ಲಿ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಆರಂಭ ಮಾಡುತ್ತಿದ್ದೇವೆ. ಬಳಿಕ ರಾಜ್ಯದ ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಚಿಕಿತ್ಸೆ ನೀಡಲು ಪ್ರಾರಂಭಿಸುತ್ತೇವೆ. ಇದಕ್ಕೆ 7 ವಾರಗಳ ಕಾಲ ಚಿಕಿತ್ಸೆ ನೀಡಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ ಚಿಕಿತ್ಸೆಗಾಗಿ 2 ಲಕ್ಷದವರೆಗೆ ಖರ್ಚಾಗುತ್ತದೆ ಎಂದು ಹೇಳಿದರು.

20 ಸಾವಿರ ಡೋಸ್ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡರೆ ಮೊದಲು ಚಿಕಿತ್ಸೆ ಪಡೆಯಿರಿ. ಬ್ಲ್ಯಾಕ್ ಫಂಗಸ್​​ನಿಂದ ಮೃತಪಟ್ಟ ಬಗ್ಗೆ ಮಾಹಿತಿ ಗೊತ್ತಿಲ್ಲ. ನಿಖರವಾದ ಅಂಕಿ-ಸಂಖ್ಯೆ ಈಗ ಹೇಳುವುದಕ್ಕೆ ಆಗಲ್ಲ. ಇದ್ಕಕಾಗಿಯೇ ಇಂದು ಒಂದು ಸಮಿತಿ ಮಾಡುತ್ತೇವೆ. ಚಿಕಿತ್ಸೆ ನೀಡುವ ಸಂಬಂಧ ಸಮಿತಿಯಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

ವಿಪಕ್ಷ ನಾಯಕರ ಪತ್ರಗಳಿಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ. ಕೊವಿಡ್ ಪಾಸಿಟಿವಿಟಿ ದರ ಇಳಿಕೆ ಮಾಡುವುದು ಮುಖ್ಯ. ಕೊವಿಡ್ ಅಂಕಿ-ಸಂಖ್ಯೆ ಮುಖ್ಯವಲ್ಲ. ಬೆಂಗಳೂರಿನಲ್ಲಿ ಕೊವಿಡ್ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಇದೊಂದು ಸ್ವಲ್ಪ ಸಮಾಧಾನಕರವಾಗಿದೆ. ಇತರೆ ಜಿಲ್ಲೆಗಳಲ್ಲಿ ಕೊವಿಡ್ ಪ್ರಕರಣಗಳು ಕಡಿಮೆಯಾಗಿಲ್ಲ. ಕೊವಿಡ್ ಪಾಸಿಟಿವಿಟಿ ದರ ಶೇಕಡಾ 32ರಷ್ಟು ಇದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿದೆ. ಸರ್ಕಾರ ಸೂಚಿಸಿದ ಚಿಕಿತ್ಸಾ ನಿಯಮಗಳನ್ನು ಪಾಲಿಸಬೇಕು. ಐಸಿಎಂಆರ್, ಕೇಂದ್ರದ ಮಾರ್ಗಸೂಚಿ ನಾವು ಪಾಲಿಸುತ್ತೇವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಎಚ್ಚರ ವಹಿಸುವಂತೆ ಆರೋಗ್ಯ ಸಚಿವರಿಂದಲೇ ಕರೆ ಹೆಚ್ಚೆಚ್ಚು ಸ್ಟಿರಾಯ್ಡ್ ಬಳಸುವ ರೋಗಿಗಳು ಎಚ್ಚರವಾಗಿರಿ. ಮಧುಮೇಹದಿಂದ ಬಳಲುತ್ತಿರುವವರು, ಸ್ಟಿರಾಯ್ಡ್ ಬಳಸುವವರು ಹೆಚ್ಚು ಜವಾಬ್ದಾರರಾಗಿರಬೇಕು. ಕೊವಿಡ್ ಚಿಕಿತ್ಸೆಗೆ ಸ್ಟಿರಾಯ್ಡ್ ಹೆಚ್ಚು ಬಳಸುವುದರಿಂದಲೂ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಳ್ಳಬಹುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೂ ಬ್ಲ್ಯಾಕ್ ಫಂಗಸ್ನ ಆತಂಕವಿದೆ. ಹೀಗಾಗಿ ನಾಳೆ ನೇತ್ರ ತಜ್ಞರು, ಮಧುಮೇಹ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಮೇ 16ರ ಇಂದು ವಿಶ್ವ ಡೆಂಗಿ ದಿನಾಚರಣೆ. ಕೊವಿಡ್ ನಡುವೆ ಕೆಲವು ಬೇರೆ ಕಾಯಿಲೆಗಳೂ ಇವೆ. ವರ್ಷದಲ್ಲಿ 15ರಿಂದ 20 ಸಾವಿರ ಜನರಿಗೆ ಡೆಂಗಿ ಬರುತ್ತದೆ. ಮುಂಗಾರು ಆರಂಭವಾಗಿರುವುದರಿಂದ ಮುನ್ನೆಚ್ಚರಿಕೆ ಅಗತ್ಯ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಂತರೆ ಸೊಳ್ಳೆಗಳ ಸಂತಾನ ಹೆಚ್ಚಾಗುತ್ತದೆ. ಹಗಲು ವೇಳೆಯಲ್ಲಿ ಕಚ್ಚುವ ಸೊಳ್ಳೆಯಿಂದ ಡೆಂಗಿ ಬರುತ್ತದೆ. ಮಹಿಳೆಯರು, ಮಕ್ಕಳು ವಿಶೇಷವಾಗಿ ಕಾಳಜಿ ವಹಿಸಬೇಕು ಎಂದು ಸುಧಾಕರ್ ತಿಳಿಸಿದರು.

ಇದನ್ನೂ ಓದಿ

cyclone tauktae ಕೇರಳದಲ್ಲಿ ಇಬ್ಬರು ಬಲಿ, ಮುಂಬೈನಲ್ಲಿ ಆಸ್ಪತ್ರೆಯಿಂದ 580 ಕೊರೊನಾ ಸೋಂಕಿತರ ಸ್ಥಳಾಂತರ

ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೇ ಗರ್ಭಿಣಿಯರ ಪರದಾಟ; ತಾತ್ಕಾಲಿಕವಾಗಿ ಹೆರಿಗೆ ತಜ್ಞರನ್ನು ನೇಮಿಸುವಂತೆ ಜನರ ಆಗ್ರಹ

(If black fungus appears get treatment first k Sudhakar said)