Modi at Saudi: ಸೌದಿಯಲ್ಲಿ ಮೋದಿಯನ್ನು ಎಸ್ಕಾರ್ಟ್ ಮಾಡಿದ ಎಫ್-35 ಫೈಟರ್ ಜೆಟ್ಸ್
Saudi fighter jets escort PM Modi's plane at Jeddah: ಸೌದಿ ಅರೇಬಿಯಾಗೆ ಎರಡು ದಿನದ ಪ್ರವಾಸದಲ್ಲಿರುವ ನರೇಂದ್ರ ಮೋದಿ ಮಂಗಳವಾರ ಜೆದ್ದಾಗೆ ಹೋಗಿದ್ದಾರೆ. ಮೋದಿ ಪ್ರಯಾಣಿಸುತ್ತಿದ್ದ ವಿಮಾನವು ಸೌದಿ ವಾಯುಭಾಗ ಪ್ರವೇಶಿಸುತ್ತಿದ್ದಂತೆ ಎಫ್-35 ಯುದ್ಧವಿಮಾನಗಳು ಎಸ್ಕಾರ್ಟ್ ಮಾಡಿವೆ. ಭಾರತದ ಪ್ರಧಾನಿಗೆ ಸೌದಿ ನೀಡಿದ ಗೌರವದ ಪ್ರತೀಕವೆಂಬಂತೆ ಇದನ್ನು ಪರಿಗಣಿಸಬಹುದು.

ರಿಯಾಧ್, ಏಪ್ರಿಲ್ 22: ಸೌದಿ ಅರೇಬಿಯಾದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ (Narendra Modi’s Saudi Visit) ಪೂರ್ಣ ಪ್ರಮಾಣದಲ್ಲಿ ಗೌರವ ಮತ್ತು ಭದ್ರತೆ ನೀಡಲಾಗುತ್ತಿದೆ. ಇಂದು ಸೌದಿ ಅರೇಬಿಯಾ ನಾಡಿಗೆ ಭೇಟಿ ನೀಡಿದ ನರೇಂದ್ರ ಮೋದಿಗೆ ಅಲ್ಲಿಯ ಯುದ್ಧ ವಿಮಾನಗಳು ಸ್ವಾಗತ ಮಾಡಿವೆ. ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ವಿಮಾನವು ಜೆದ್ದಾ ಮೂಲಕ ಸೌದಿ ವಾಯುಭಾಗವನ್ನು ಪ್ರವೇಶಿಸುತ್ತಿದ್ದಂತೆಯೇ ಎಫ್-15 ಫೈಟರ್ಜೆಟ್ಗಳೂ ಜೊತೆಗೆ ಬಂದಿವೆ.
ಅಮೆರಿಕದ ಎಫ್-15 ಯುದ್ಧವಿಮಾನಗಳು ರಾಯಲ್ ಸೌದಿ ಏರ್ ಫೋರ್ಸ್ನ ಭಾಗವಾಗಿವೆ. ಮೋದಿ ವಿಮಾನವನ್ನು ಈ ಫೈಟರ್ ಜೆಟ್ಗಳು ಎಸ್ಕಾರ್ಟ್ ಮಾಡಿರುವುದು ಅತಿಥಿ ಸತ್ಕಾರದ ಒಂದು ಭಾಗವಾಗಿರಬಹುದು.
#WATCH | In a special gesture, fighter planes from Saudi Arabia escort Prime Minister Narendra Modi’s plane as it entered Saudi airspace to Jeddah. pic.twitter.com/Vhzxd6ir5p
— ANI (@ANI) April 22, 2025
2018ರಲ್ಲಿ ನರೇಂದ್ರ ಮೋದಿ ಅವರು ಪ್ಯಾಲೆಸ್ಟೀನ್ಗೆ ಹೋದಾಗ ಜೋರ್ಡಾನ್ನ ಹೆಲಿಕಾಪ್ಟರ್ನಲ್ಲಿ ತೆರಳಿದ್ದರು. ಆಗ ಇಸ್ರೇಲ್ ವಾಯುಪಡೆಗೆ ಸೇರಿದ್ದ ಹೆಲಿಕಾಪ್ಟರ್ಗಳು ಮೋದಿಗೆ ಜೊತೆಯಾಗಿ ಹಾರಿದ್ದವು.
ಇದನ್ನೂ ಓದಿ: ಇಂದಿರಾ ಬಳಿಕ ಈ ಸೌದಿ ನಗರಕ್ಕೆ ಭೇಟಿ ನೀಡಲಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ
ಚೀನಾ, ಫ್ರಾನ್ಸ್ ಅಧ್ಯಕ್ಷರಿಗೂ ಸೌದಿ ಫೈಟರ್ ಜೆಟ್ ಗೌರವ
ಈ ಹಿಂದೆಯೂ ಕೆಲ ಪ್ರಮುಖ ವಿಶ್ವ ಮುಖಂಡರು ಸೌದಿಗೆ ಭೇಟಿ ನೀಡಿದಾಗ ಅವರ ವಿಮಾನಗಳನ್ನು ಸೌದಿ ಫೈಟರ್ ಜೆಟ್ಗಳು ಎಸ್ಕಾರ್ಟ್ ಮಾಡಿದ ಉದಾಹರಣೆಗಳಿವೆ. 2022ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಸೌದಿಗೆ ತೆರಳಿದಾಗ ಅವರ ನಾಲ್ಕು ಸೌದಿ ಫೈಟರ್ ಜೆಟ್ಗಳು ಜೊತೆಗೆ ಹೋಗಿದ್ದವು.
2024ರಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ಅವರಿಗೂ ಇಂಥದ್ದೊಂದು ಸ್ವಾಗತ ನೀಡಲಾಗಿತ್ತು.
ಇದನ್ನೂ ಓದಿ: ಹಿಂದೂಫೋಬಿಯಾ ವಿರುದ್ಧ ಸಂಸತ್ನಲ್ಲಿ ಗೊತ್ತುವಳಿ; ಸ್ಕಾಟ್ಲ್ಯಾಂಡ್ ಇತಿಹಾಸದಲ್ಲಿ ಇದೇ ಮೊದಲು
ನರೇಂದ್ರ ಮೋದಿ 2 ದಿನ ಸೌದಿ ಭೇಟಿ
ನರೇಂದ್ರ ಮೋದಿ ಅವರು ಸೌದಿ ಅರೇಬಿಯಾಗೆ ಎರಡು ದಿನದ ಪ್ರವಾಸ ಕೈಗೊಂಡಿದ್ದಾರೆ. ನಿನ್ನೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಜೊತೆ ಮಹತ್ವದ ಮಾತುಕತೆಯಲ್ಲಿ ಪಾಲ್ಗೊಂಡು ಇವತ್ತು ಬೆಳಗ್ಗೆ ಅವರು ಸೌದಿಗೆ ಆಗಮಿಸಿದ್ದಾರೆ. ಮೊದಲ ಬಾರಿಗೆ ಅವರು ಜೆದ್ದಾಗೆ ಭೇಟಿ ನೀಡಿರುವುದು. 1982ರಲ್ಲಿ ಇಂದಿರಾ ಗಾಂಧಿ ಬಳಿಕ ಭಾರತದ ಪ್ರಧಾನಿಯೊಬ್ಬರು ಜೆದ್ದಾಗೆ ಬಂದಿರುವುದು ಇದೇ ಮೊದಲು.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Tue, 22 April 25