ಮಂಗಳೂರು, (ಜನವರಿ 17): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಡಹಗಲೇ ಐದು ಮಂದಿ ಆಗಂತುಕರ ತಂಡ ಫಿಯೆಟ್ ಕಾರಿನಲ್ಲಿ ಬಂದು ಬಂದೂಕು ತೋರಿಸಿ ಬ್ಯಾಂಕ್ ದರೋಡೆ ಮಾಡಿದೆ. ಉಳ್ಳಾಲ ತಾಲೂಕಿನ ಕೆ.ಸಿ.ರೋಡ್ ಶಾಕೆಯ ಕೋಟೆಕಾರು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿದೆ. ಹಾಡಹಗಲೇ 5 ಮಂದಿ ಆಗಂತುಕರು ಬ್ಯಾಂಕ್‌ಗೆ ನುಗ್ಗಿ ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ಚಿನ್ನ ಒಡವೆ, ನಗದುಗಳೆಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ. ಚಿನ್ನ ಹಾಗೂ ನಗದು ಸೇರಿದಂತೆ ಬರೋಬ್ಬರಿ 10ರಿಂದ 12 ಕೋಟಿ ರೂ ಹಣ ಎಗರಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನು ಇದೇ ಬ್ಯಾಂಕ್‌ನಲ್ಲಿ ಈ ಹಿಂದೆಯೂ ಸಹ ಕಳ್ಳತನವಾಗಿತ್ತು.
ನಾಲ್ಕೈದು ಚೀಲದಲ್ಲಿ ಹಣ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ. ಇನ್ನು ಸಿಸಿ ಕ್ಯಾಮರಾ ರಿಪೇರಿ ಮಾಡಲು ಬಂದವನ ಊಂಗುರವನ್ನು ಸಹ ದೋಚಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಪಕ್ಕಾ ಪ್ಲ್ಯಾನ್ ಮಾಡಿ ದರೋಡೆ ಮಾಡಿದ್ದಾರೆ. ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಪೊಲೀಸರ ಹೆಚ್ಚಿನ ಭದ್ರತೆಯಲ್ಲಿದ್ದರು. ಹಾಗೇ ಇಂದು ಶುಕ್ರವಾರ ಆದ ಕಾರಣ ಮುಸ್ಲಿಮರು ನಮಾಜ್ಗಾಗಿ ಮಧ್ಯಾಹ್ನ ಮಸೀದಿಗೆ ತೆರಳಿದ್ದಾರೆ. ಇನ್ನು ಬ್ಯಾಂಕ್ ಸಿಸಿ ಕ್ಯಾಮೆರಾ ಕೂಡ ಹಾಳಾಗಿದ್ದು, ಅದನ್ನು ಇಂದೇ ರಿಪೇರಿಗೆ ನೀಡಲಾಗಿತ್ತು. ಸಿಸಿ ಕ್ಯಾಮರಾ ರಿಪೇರಿಗೆ ಮಾಡುವ ವೇಳೆ ಅದರ ವೈಯರ್ ಕಟ್ ಮಾಡಿದ ತಕ್ಷಣವೇ ಈ ಕೃತ್ಯ ಎಸಗಿದ್ದಾರೆ. ಇನ್ನು ಇಡೀ ರಸ್ತೆಯ ಉದ್ದಕೂ ಒಂದೇ ಒಂದು ಸಿಸಿಟಿವಿ ಇಲ್ಲ. CCTV ಇಲ್ಲದನ್ನು ಗಮನಿಸಿಯೇ ಬ್ಯಾಂಕ್ ದರೋಡೆ ಮಾಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ಬೀದರ್ ಬಳಿಕ ಉಳ್ಳಾಲದಲ್ಲೂ ಹಾಡಹಗಲೇ ಬಂದೂಕು ತೋರಿಸಿ ಬ್ಯಾಂಕ್ ದರೋಡೆ
ಐದು ವರ್ಷಗಳ ಹಿಂದೆಯೇ ಇದೇ ಬ್ಯಾಂಕ್ ಕಳ್ಳತನವಾಗಿತ್ತು. ಗನ್,ತಲ್ವಾರ್, ಚಾಕು ತೋರಿಸಿ ದರೋಡೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ಮಾದರಿಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡಲಾಗಿದೆ. ಇನ್ನು ದರೋಡೆಕೋರರ ಪತ್ತೆ ಪೊಲೀಸರು ಎರಡು ತಂಡಗಳ ರಚನೆ ಮಾಡಲಾಗಿದೆ. ಇನ್ನು ಬ್ಯಾಂಕಿಗೆ ಒಬ್ಬ ಸೆಕ್ಯೂರಿಟಿ ಕೂಡ ಇಲ್ಲ. ಇನ್ನು ಸ್ಥಳೀಯರು ಬ್ಯಾಂಕ್ ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರು ಜಿಲ್ಲಾ ಪ್ರವಾಸ ಇರುವಾಗಲೇ ಈ ಕೃತ್ಯ ನಡೆದಿದೆ. ಹೀಗಾಗಿ ಈ ಬಗ್ಗೆ ಸಿಎಂ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ದರೋಡೆಕೋರರು ತಪ್ಪಿಸಿಕೊಂಡಿದ್ದಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳ ಮೇಲೆ ಗಂರ ಆಗಿದ್ದಾರೆ. ಅಲ್ಲದೇ ಎಲ್ಲಾ ಟೋಲ್, ಕೇರಳ ಗಡಿಯಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
Published On - 3:58 pm, Fri, 17 January 25