ನೀರಿಗಾಗಿ 40 ಅಡಿ ಆಳದ ಬಾವಿ ತೆಗೆದ ಒಂದೇ ಕುಟುಂಬದ 6 ಮಂದಿ! ಎಲ್ಲಿ?
ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಬಂತಡ್ಕ ಎಂಬಲ್ಲಿ ಲಾಕ್ಡೌನ್ ವೇಳೆ ಬಾವಿ ತೆಗೆದಿದ್ದಾರೆ. ಒಂದೇ ಕುಟುಂಬದ ಆರು ಮಂದಿ ಹಾಗೂ ನೆರೆ ಹೊರೆಯ ಐವರು ಸಹಾಯದಿಂದ ಕೇವಲ ಹನ್ನೆರಡು ದಿನಗಳಲ್ಲಿ ಸುಮಾರು 40 ಅಡಿ ಆಳದ ಬಾವಿ ತೋಡಲಾಗಿದೆ. ಬಾವಿಯಲ್ಲಿ ನೀರು ಬಂದಿದ್ದು ಎಲ್ಲರಿಗೂ ಖುಷಿ ತರಿಸಿದೆ. ಬಂತಡ್ಕದ ಜನತಾ ಕಾಲೋನಿಯಲ್ಲಿ ತೀವ್ರ ನೀರಿನ ಅಭಾವ ಕಾಡುತ್ತಿತ್ತು. ಇದರ ಶಾಶ್ವತ ಪರಿಹಾರ ಕಂಡುಕೊಳ್ಳಲು ಯುವಕರು ತಾವೇ ಬಾವಿ ತೋಡಿ ನೀರಿನ ಸಮಸ್ಯೆ ಪರಿಹರಿಸಿ ಕೊಂಡಿರುವುದಕ್ಕೆ […]
ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಬಂತಡ್ಕ ಎಂಬಲ್ಲಿ ಲಾಕ್ಡೌನ್ ವೇಳೆ ಬಾವಿ ತೆಗೆದಿದ್ದಾರೆ. ಒಂದೇ ಕುಟುಂಬದ ಆರು ಮಂದಿ ಹಾಗೂ ನೆರೆ ಹೊರೆಯ ಐವರು ಸಹಾಯದಿಂದ ಕೇವಲ ಹನ್ನೆರಡು ದಿನಗಳಲ್ಲಿ ಸುಮಾರು 40 ಅಡಿ ಆಳದ ಬಾವಿ ತೋಡಲಾಗಿದೆ. ಬಾವಿಯಲ್ಲಿ ನೀರು ಬಂದಿದ್ದು ಎಲ್ಲರಿಗೂ ಖುಷಿ ತರಿಸಿದೆ.
ಬಂತಡ್ಕದ ಜನತಾ ಕಾಲೋನಿಯಲ್ಲಿ ತೀವ್ರ ನೀರಿನ ಅಭಾವ ಕಾಡುತ್ತಿತ್ತು. ಇದರ ಶಾಶ್ವತ ಪರಿಹಾರ ಕಂಡುಕೊಳ್ಳಲು ಯುವಕರು ತಾವೇ ಬಾವಿ ತೋಡಿ ನೀರಿನ ಸಮಸ್ಯೆ ಪರಿಹರಿಸಿ ಕೊಂಡಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published On - 4:45 pm, Wed, 20 May 20