ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿಯಿಂದ ರಾಜೀವ್ ಗೌಡಗೆ ಆಶ್ರಯ: ಆರೋಪಿ ಎಸ್ಕೇಪ್ ಆಗಿದ್ದೆಲ್ಲಿಗೆ?
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ವಿಚಾರವಾಗಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರಾಜೀವ್ ಗೌಡ ಎಸ್ಕೇಪ್ ಆಗಿದ್ದ. ನ್ಯಾಯಾಲಯ ಕೂಡ ಜಾಮೀನು ನಿರಾಕರಿಸಿರುವ ಹಿನ್ನೆಲೆ ತಲೆಮರೆಸಿಕೊಂಡು ಆರೋಪಿ ಓಡಾಡುತ್ತಿದ್ದು, ಆತ ಮಂಗಳೂರಿನಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಸಹೋದರಿಗೆ ರಾಜೀವ್ ಗೌಡ ಕರೆ ಮಾಡಿದ್ದ ಹಿನ್ನೆಲೆ ಆಕೆಯ ವಿಚಾರಣೆಯನ್ನೂ ಪೊಲೀಸರು ನಡೆಸಿದ್ದರು. ಆರೋಪಿ ಮನೆಯಲ್ಲಿಯೂ ಶೋಧ ನಡೆದಿತ್ತು. ಆದ್ರೆ ಈತನಿಗೆ ತಲೆ ಮರೆಸಿಕೊಳ್ಳಲು ನೆರವಾಗಿದ್ದು ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿ ಎಂಬ ಆಘಾತಕಾರಿ ವಿಚಾರವೀಗ ಬಯಲಾಗಿದೆ.
ಮಂಗಳೂರು, ಜನವರಿ 26: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ ಸಂಬಂಧ ಆರೋಪಿ ರಾಜೀವ್ ಗೌಡ ತಲೆಮರೆಸಿಕೊಂಡಿದ್ದು, ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ. ಖಾಕಿ ತನಿಖೆ ವೇಳೆ ಆರೋಪಿ ಮಂಗಳೂರಿನಲ್ಲಿದ್ದ ಎನ್ನುವ ಮಾಹಿತಿ ಸಿಕ್ಕಿತ್ತಾದರೂ ಅದಾಗಲೇ ಆತ ಅಲ್ಲಿಂದಲೂ ಎಸ್ಕೇಪ್ ಆಗಿದ್ದ. ಕೇರಳ ಅಥವಾ ಗೋವಾಗೆ ರಾಜೀವ್ ಗೌಡ ಎಸ್ಕೇಪ್ ಅಗಿರಬಹುದು ಎನ್ನಲಾಗಿದ್ದು, ಈ ನಡುವೆ ಆರೋಪಿಗೆ ಆಶ್ರಯ ಕೊಟ್ಟಿದ್ದು ಓರ್ವ ಪ್ರತಿಷ್ಠಿತ ವ್ಯಕ್ತಿ ಎಂಬ ವಿಚಾರ ಗೊತ್ತಾಗಿದೆ. ರಾಜೀವ್ ಗೌಡ ಪಕ್ಕದ ರಾಜ್ಯಕ್ಕೆ ಎಸ್ಕೇಪ್ ಆಗಲು ಕೂಡ ಅವರೇ ನೆರವಾಗಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
