ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಯುವಕನಿಗೆ ನಿಫಾ ಲಕ್ಷಣ! ವರದಿಗೆ ಕಾಯುತ್ತಿರುವ ಆರೋಗ್ಯ ಇಲಾಖೆ

| Updated By: sandhya thejappa

Updated on: Sep 14, 2021 | 11:55 AM

ಗೋವಾದ ಲ್ಯಾಬ್​ನಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವಕನಿಗೆ ಜ್ವರ ಸೇರಿದಂತೆ ಕೆಲ ಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ.

ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಯುವಕನಿಗೆ ನಿಫಾ ಲಕ್ಷಣ! ವರದಿಗೆ ಕಾಯುತ್ತಿರುವ ಆರೋಗ್ಯ ಇಲಾಖೆ
ಸಾಂಕೇತಿಕ ಚಿತ್ರ
Follow us on

ಮಂಗಳೂರು: ಆಸ್ಪತ್ರೆಗೆ ದಾಖಲಾದ ಯುವಕನಿಗೆ ನಿಫಾ ವೈರಸ್ (Nipah Virus) ಲಕ್ಷಣ ಪತ್ತೆಯಾಗಿದೆ. ಜ್ವರ ಮತ್ತು ಕೆಲವು ಲಕ್ಷಣ ಪತ್ತೆಯಾದ ಹಿನ್ನೆಲೆ ಕಾರವಾರದ ಯುವಕ ಆಸ್ಪತ್ರೆಗೆ ದಾಖಲಾಗಿದ್ದ. ನಿಫಾ ವೈರಸ್ ಆತಂಕವಿದೆ ಎಂದು ಟೆಸ್ಟ್ ಮಾಡುವಂತೆ ಯುವಕ ಮನವಿ ಮಾಡಿದ್ದ. ಸದ್ಯ ಯುವಕನ ಸ್ಯಾಂಪಲ್ಸ್ ಪಡೆದು ಪರೀಕ್ಷೆಗೆ ರವಾನೆ ಮಾಡಲಾಗಿದೆ. ಬೆಂಗಳೂರಿನ ಲ್ಯಾಬ್​ಗೆ ಜಿಲ್ಲಾ ಆರೋಗ್ಯ ಇಲಾಖೆ ಸ್ಯಾಂಪಲ್ಸ್ ರವಾನೆ ಮಾಡಿದ್ದು, ವರದಿಗೆ ಕಾಯುತ್ತಿದೆ.

ಗೋವಾದ ಲ್ಯಾಬ್​ನಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವಕನಿಗೆ ಜ್ವರ ಸೇರಿದಂತೆ ಕೆಲ ಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ತನಗೆ ನಿಫಾದ ಆತಂಕವಿದೆ ಅಂತ ಹೇಳಿದ್ದ ಯುವಕ, ಟೆಸ್ಟ್ ಮಾಡಲು ಮನವಿ ಮಾಡಿದ್ದ.

ಯುವಕನಿಗೆ ನಿಫಾ ವೈರಸ್ ಲಕ್ಷಣ ಪತ್ತೆಯಾಗಿರುವ ವಿಚಾರದ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಾರವಾರದ ವ್ಯಕ್ತಿ ಗೋವಾದಲ್ಲಿ ಕೆಲಸ ಮಾಡುತ್ತಿದ್ದ. ಆರ್​ಟಿಪಿಸಿಆರ್​ ಟೆಸ್ಟ್ ಕಿಟ್ ತಯಾರಿಕಾ ಲ್ಯಾಬ್​ನಲ್ಲಿ ಕೆಲಸ ಮಾಡುತ್ತಿದ್ದ. ನಿಫಾ ಸ್ಯಾಂಪಲ್ ಟೆಸ್ಟ್ ಕೂಡ ಮಾಡಲಾಗುತ್ತಿತ್ತು. ಕಾರವಾರಕ್ಕೆ ಬೈಕ್​ನಲ್ಲಿ ಮಳೆಯಲ್ಲಿ ಬಂದಿದ್ದಾರೆ. ನಿಫಾ ಸೋಂಕಿನ ಶಂಕೆ ಇಲ್ಲದಿದ್ದರು ನಿರ್ಲಕ್ಷ್ಯ ಮಾಡಲು ಸಾಧ್ಯವಾಗದ ಕಾರಣ ಟೆಸ್ಟ್​ಗೆ ಕಳುಹಿಸಿದ್ದೇವೆ ಅಂತ ತಿಳಿಸಿದ್ದಾರೆ.

ಪುಣೆಯಿಂದ ರಿಪೋರ್ಟ್ ಕೂಡ ಬೇಗ ತರಿಸುವ ವ್ಯವಸ್ಥೆ ಆಗಿದೆ. ಅವನ ಮನೆಯವರನ್ನು ಐಸೋಲೇಶನ್​ನಲ್ಲಿ ಇಡಲಾಗಿದೆ. ಯುವಕ ಸಂಪರ್ಕ ಮಾಡಿದವರನ್ನು ಪತ್ತೆ ಹಚ್ಚಲಾಗಿದೆ. ಉಡುಪಿ ಮತ್ತು ಕಾರವಾರ ಜಿಲ್ಲಾಡಳಿತಕ್ಕೆ ಈ ಬಗ್ಗೆ ಅಲರ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ

Nipah Virus: ಕೊವಿಡ್​ಗಿಂತಲೂ ಅಪಾಯಕಾರಿಯಾಗಿರುವ ನಿಫಾ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?

Nipah Virus ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ: ರೋಗ ಲಕ್ಷಣಗಳೇನು? ತಡೆಯುವುದು ಹೇಗೆ?

(A young man admitted to a hospital in Mangalore has Has appeared Nipah Virus Symptoms)

Published On - 11:39 am, Tue, 14 September 21