ಚಪ್ಪಲಿ ಕಳುವಾಗಿದ್ದಕ್ಕೆ 112ಕ್ಕೆ ಕರೆ ಮಾಡಿ ದೂರು ನೀಡಿದ ಯುವಕ, ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು

| Updated By: ರಮೇಶ್ ಬಿ. ಜವಳಗೇರಾ

Updated on: Jul 19, 2023 | 2:58 PM

ಯುವಕನೋರ್ವ ತನ್ನ ಚಪ್ಪಲಿ ಕಳ್ಳತನವಾಗಿದೆ ಎಂದು 112ಗೆ ಕರೆ ಮಾಡಿ ದೂರು ನೀಡಿರುವ ವಿಚಿತ್ರ ಪ್ರಕರಣ ವರದಿಯಾಗಿದೆ. ಈ ಬಗ್ಗೆ ಇನ್ನಷ್ಟು ವಿವರ ಈ ಕೆಳಗಿನಂತಿದೆ ನೊಡಿ.

ಚಪ್ಪಲಿ ಕಳುವಾಗಿದ್ದಕ್ಕೆ 112ಕ್ಕೆ ಕರೆ ಮಾಡಿ ದೂರು ನೀಡಿದ ಯುವಕ, ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು
Follow us on

ಮಂಗಳೂರು, (ಜುಲೈ 19): 112 ಸಹಾಯವಾನಿ ಇರುವುದು ತುರ್ತು ಸೇವೆಗೆ. ಜಗಳ, ಕಳ್ಳತನ, ಅಪಘಾತ ಸೇರಿದಂತೆ ಇತರೆ ತುರ್ತು ಸೇವೆಗೆ ಅಂತಾನೆ ಪೊಲೀಸ್ (Police) ಇಲಾಖೆ 112 ಸಹಾಯವಾಣಿಯನ್ನು ಪ್ರಾರಂಭಿಸಿದೆ. ಆದ್ರೆ, ಇಲ್ಲೋರ್ವ ಯುವಕ ತನ್ನ ಚಪ್ಪಲಿ(footwear) ಕಳುವಾಗಿದೆ ಹುಡುಕಿಕೊಡಿ ಎಂದು 112ಗೆ ಕರೆ ಮಾಡಿದ್ದಾನೆ. ಹೌದು…ಅಚ್ಚರಿ ಎನ್ನಿಸಿದರೂ ಸತ್ಯ.  ಚಪ್ಪಲಿ ಕಳೆದುಕೊಂಡ ಯುವಕನೋರ್ವ ಪೊಲೀಸರಿಗೆ ದೂರು ನೀಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.  ಮಂಗಳೂರು(mangaluru) ನಗರದ ಶರವು ದೇವಳದ ಬಳಿಯ ಬಾಳಂಭಟ್ ಸಭಾ ಭವನದಲ್ಲಿ ಚಪ್ಪಲಿ ಕಳೆಕೊಂಡಿರುವ ಬಗ್ಗೆ ಯುವಕ 112ಗೆ ಕರೆ ಮಾಹಿತಿ ನೀಡಿದ್ದಾನೆ. ಕಾರ್ಯಕ್ರಮಕ್ಕೆ ಬಂದು ಹಿಂದಿರುಗುವ ವೇಳೆ ಚಪ್ಪಲಿ ಕಳ್ಳತನವಾಗಿದ್ದು, ದಯವಿಟ್ಟು ಹುಡುಕಿ ಕೊಡಿ  ಎಂದು ಪೊಲೀಸರಿಗೆ ಮನವಿ ಮಾಡಿದ್ದಾನೆ. ದೂರಿನ ಮೇರೆಗೆ ಕೂಡಲೇ ಸ್ಥಳಕ್ಕೆ ಪೊಲೀಸರು, ಸಿಸಿಟಿವಿ ಪರಿಶೀಲಿಸಿದ ವೇಳೆ ವ್ಯಕ್ತಿಯೊಬ್ಬ ಚಪ್ಪಲಿ ಧರಿಸಿ ಹೋಗುವ ದೃಶ್ಯ ಸೆರೆಯಾಗಿದೆ.

ಪ್ರಕರಣದ ವಿವರ

ಮಂಗಳೂರಿನ ಕೆಎಸ್‌ ರಾವ್‌ ರಸ್ತೆ ಬಳಿ ಇರುವ ಶರವು ದೇವಸ್ಥಾನದ ಬಾಳಂಭಟ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುವಕ ಭಾಗವಹಿಸಿದ್ದ. ಬಳಿಕ ಕಾರ್ಯಕ್ರಮ ಮುಗಿಸಿಕೊಂಡು ಸಭಾಂಗಣದಿಂದ ಆಚೆ ಬಂದಿದ್ದಾನೆ. ಆದ್ರೆ, ಚಪ್ಪಲಿ ಮಿಸ್‌ ಆಗಿದ್ದು ಯುವಕನ ಗಮನಕ್ಕೆ ಬಂದಿದೆ. ಕೂಡಲೇ ಯುವಕ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ತನ್ನ ಚಪ್ಪಲಿ ಕಳೆದು ಹೋಗಿದೆ ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾನೆ. ಕೂಡಲೇ ಸ್ಥಳಕ್ಕೆ 112 ವಾಹನ ಆಗಮಿಸಿ ಶರವು ದೇವಸ್ಥಾನದಲ್ಲಿರುವ ಸಿಸಿಟಿವಿ ಪರಿಶೀಲಿಸಿದ್ದು, ವ್ಯಕ್ತಿಯೋರ್ವ ಚಪ್ಪಲಿ ಹಾಕಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ