ಮಂಗಳೂರಿನಲ್ಲಿ ಕೇರಳ ವಿದ್ಯಾರ್ಥಿಗಳ ಬೀದಿ ಕಾಳಗ ಪ್ರಕರಣ: 8 ವಿದ್ಯಾರ್ಥಿಗಳು ಅರೆಸ್ಟ್, ನಾಲ್ವರು ಡ್ರಗ್ಸ್ ಸೇವಿಸಿರುವುದು ದೃಢ

ಗುಜ್ಜರಕೆರೆಯಲ್ಲಿ ಯೆನೇಪೋಯಾ ಹಾಸ್ಟೆಲ್ನಲ್ಲಿ ಕೇರಳ ವಿದ್ಯಾರ್ಥಿಗಳ ರಂಪಾಟ, ಅಸಭ್ಯ ವರ್ತನೆಗೆ ಜನ ಕಂಗಾಲಾಗಿದ್ದಾರೆ. ಪ್ರಕರಣ ಸಂಬಂಧ ಯೆನೇಪೋಯಾ ಹಾಸ್ಟೆಲ್ಗೆ ಮಂಗಳೂರು ಎಸ್ಪಿ ಎನ್. ಶಶಿಕುಮಾರ್ ಭೇಟಿ ನೀಡಿದ್ರು. ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಠಾಣೆ ಪೊಲೀಸರು 8 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಮಂಗಳೂರಿನಲ್ಲಿ ಕೇರಳ ವಿದ್ಯಾರ್ಥಿಗಳ ಬೀದಿ ಕಾಳಗ ಪ್ರಕರಣ: 8 ವಿದ್ಯಾರ್ಥಿಗಳು ಅರೆಸ್ಟ್, ನಾಲ್ವರು ಡ್ರಗ್ಸ್ ಸೇವಿಸಿರುವುದು ದೃಢ
ಮಂಗಳೂರು ಎಸ್ಪಿ ಎನ್. ಶಶಿಕುಮಾರ್

ಮಂಗಳೂರು: ಮಂಗಳೂರಿನಲ್ಲಿ ಕೇರಳ ವಿದ್ಯಾರ್ಥಿಗಳ ಬೀದಿ ಕಾಳಗ ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಠಾಣೆ ಪೊಲೀಸರು 8 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಮೊಹಮ್ಮದ್, ವಿಮಲ್, ಫಹಾದ್ ಮುನಾಫ್, ಶಾಹೀದ್, ಕಾನೆ ಜಾನ್ಸನ್, ಆದರ್ಶ್, ಮೊಹಮ್ಮದ್ ನಾಸೀಫ್, ತಾಹೀರ್‌ ಸೇರಿದಂತೆ 8 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. 8 ಜನರ ಪೈಕಿ ನಾಲ್ವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ನಿನ್ನೆ 9 ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಈಗ ಮತ್ತೆ 8 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಹಾಸ್ಟೆಲ್ನಲ್ಲಿ ಕೇರಳ ವಿದ್ಯಾರ್ಥಿಗಳ ಗ್ಯಾಂಗ್ವಾರ್ ಮಂಗಳೂರಿನ ಜಪ್ಪು ಮಾರ್ಕೆಟ್ನ ಗುಜ್ಜರಕೆರೆಯ ಯೆನೇಪೋಯಾ ಹಾಸ್ಟೆಲ್ನಲ್ಲಿ ಡಿಸೆಂಬರ್ 2ರ ರಾತ್ರಿ 2 ಗುಂಪಿನ ವಿದ್ಯಾರ್ಥಿಗಳ ನಡುವೆ ಗ್ಯಾಂಗ್ವಾರ್ ನಡೆದಿದೆ. ಹಾಸ್ಟೆಲ್ ವಿದ್ಯಾರ್ಥಿಯೊಬ್ಬ ಹುಡುಗಿ ಜೊತೆ ರೋಡಲ್ಲಿ ಮಾತಾಡ್ತಾ ನಿಂತಿದ್ದನಂತೆ. ಈ ವೇಳೆ ಹಾಸ್ಟೆಲ್ನಲ್ಲಿದ್ದ ಮತ್ತೊಂದು ವಿದ್ಯಾರ್ಥಿಗಳ ಗ್ಯಾಂಗ್ ಇವರಿಬ್ರ ಮೇಲೆ ಕಲ್ಲಿನಿಂದ ಅಟ್ಯಾಕ್ ಮಾಡಿದೆ. ಇಲ್ಲಿಂದ ಶುರುವಾದ ಜಗಳ ದೊಡ್ಡ ಗಲಾಟೆಗೆ ಕಾರಣವಾಗಿದೆ. ಇನ್ನು, ಗಲಾಟೆ ಯಾಕೆ ಮಾಡ್ತಿದ್ದೀರಾ ಅಂತಾ ಪ್ರಶ್ನಿಸಿದ್ದಕ್ಕೆ ಸ್ಥಳೀಯರ ಮೇಲೂ ಕೇರಳದ ಸ್ಟೂಡೆಂಟ್ಸ್ ದಾಳಿ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ಕಲ್ಲಿನಿಂದ ಅಟ್ಯಾಕ್ ಮಾಡಿ ದರ್ಪ ತೋರಿದ್ದಾರೆ.

ಗುಜ್ಜರಕೆರೆಯಲ್ಲಿ ಯೆನೇಪೋಯಾ ಹಾಸ್ಟೆಲ್ನಲ್ಲಿ ಕೇರಳ ವಿದ್ಯಾರ್ಥಿಗಳ ರಂಪಾಟ, ಅಸಭ್ಯ ವರ್ತನೆಗೆ ಜನ ಕಂಗಾಲಾಗಿದ್ದಾರೆ. ಪ್ರಕರಣ ಸಂಬಂಧ ಯೆನೇಪೋಯಾ ಹಾಸ್ಟೆಲ್ಗೆ ಮಂಗಳೂರು ಎಸ್ಪಿ ಎನ್. ಶಶಿಕುಮಾರ್ ಭೇಟಿ ನೀಡಿದ್ರು. ಈ ವೇಳೆ ಸ್ಥಳೀಯರು ಕೇರಳ ವಿದ್ಯಾರ್ಥಿಗಳ ಪುಂಡಾಟವನ್ನ ತೆರೆದಿಟ್ರು. ಕೂಡಲೇ ಹಾಸ್ಟೆಲ್ನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ರು. ಇತ್ತ, 2 ವಿದ್ಯಾರ್ಥಿ ಗುಂಪಿನವರೂ ದೂರು, ಪ್ರತಿದೂರು ನೀಡಿದ್ದು, ಪ್ರಕರಣ ಸಂಬಂಧ 9 ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯೆನೆಪೊಯಾ ಕಾಲೇಜು ಆಡಳಿತ ಮಂಡಳಿ ಬಾಡಿಗೆಗೆ ಬಿಲ್ಡಿಂಗ್ ಪಡೆದು ಕಳೆದೆರಡು ವರ್ಷದಿಂದ ಇಲ್ಲಿ ಹಾಸ್ಟೆಲ್‌ ನಡೆಸುತ್ತಿದೆ. ಲೇಡಿಸ್ ಹಾಸ್ಟೆಲ್, ಬಾಯ್ಸ್ ಹಾಸ್ಟೆಲ್ ಕೂಡ ಇದ್ದು ಕೆಲ ಕೇರಳ ವಿದ್ಯಾರ್ಥಿಗಳ ಪುಂಡಾಟ ಮಿತಿ ಮೀರುತ್ತಿದೆ.

ಇದನ್ನೂ ಓದಿ: ಹುಡುಗಿ ವಿಚಾರಕ್ಕೆ ಮಂಗಳೂರಿನಲ್ಲಿ ಕೇರಳ ವಿದ್ಯಾರ್ಥಿಗಳ ಬೀದಿ ಕಾಳಗ; ಮೂವರು ಪೊಲೀಸರಿಗೆ ಗಾಯ, 9 ವಿದ್ಯಾರ್ಥಿಗಳು ಅರೆಸ್ಟ್

Published On - 3:07 pm, Sat, 4 December 21

Click on your DTH Provider to Add TV9 Kannada