ಹುಡುಗಿ ವಿಚಾರಕ್ಕೆ ಮಂಗಳೂರಿನಲ್ಲಿ ಕೇರಳ ವಿದ್ಯಾರ್ಥಿಗಳ ಬೀದಿ ಕಾಳಗ; ಮೂವರು ಪೊಲೀಸರಿಗೆ ಗಾಯ, 9 ವಿದ್ಯಾರ್ಥಿಗಳು ಅರೆಸ್ಟ್
ಪ್ರೇಮ್ ಕುಮಾರ್ ಎಂಬ ವಿದ್ಯಾರ್ಥಿ ತನ್ನ ಸ್ನೇಹಿತೆ ಅಭಿರಾಮಿಯನ್ನು ಮೀಟ್ ಮಾಡಲು ಬಂದಿದ್ದ. ಅದನ್ನು ನೋಡಿ ಸಿನಾನ್ ಸೇರಿ ಏಳು ಜನರ ತಂಡ ಗಜ್ಜರಕೆರೆಯಲ್ಲಿ ನಿನ್ನೆ ತಡರಾತ್ರಿ ಹಲ್ಲೆ ಮಾಡಿದ್ದಾರೆ. ಕಲ್ಲು ತೂರಿ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಹಲ್ಲೆ ನಡೆದಿದೆ.
ಮಂಗಳೂರು: ಹುಡುಗಿ ವಿಚಾರಕ್ಕೆ ಮಂಗಳೂರಿನಲ್ಲಿ ಕೇರಳ ವಿದ್ಯಾರ್ಥಿಗಳ ಬೀದಿ ಕಾಳಗ ನಡೆದಿದೆ. ನಡು ರಸ್ತೆಯಲ್ಲಿ ವಿದ್ಯಾರ್ಥಿಗಳು ಮಾರಾಮಾರಿ ಮಾಡಿಕೊಂಡಿದ್ದಾರೆ. ಬಿಡಿಸಲು ಹೋಗಿದ್ದ ಪೊಲೀಸರ ಮೇಲೆಯೂ ಹಲ್ಲೆ ನಡೆದಿದೆ.
ಪ್ರೇಮ್ ಕುಮಾರ್ ಎಂಬ ವಿದ್ಯಾರ್ಥಿ ತನ್ನ ಸ್ನೇಹಿತೆ ಅಭಿರಾಮಿಯನ್ನು ಮೀಟ್ ಮಾಡಲು ಬಂದಿದ್ದ. ಅದನ್ನು ನೋಡಿ ಸಿನಾನ್ ಸೇರಿ ಏಳು ಜನರ ತಂಡ ಗಜ್ಜರಕೆರೆಯಲ್ಲಿ ನಿನ್ನೆ ತಡರಾತ್ರಿ ಹಲ್ಲೆ ಮಾಡಿದ್ದಾರೆ. ಕಲ್ಲು ತೂರಿ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಹಲ್ಲೆ ನಡೆದಿದೆ. ಹೊಡೆದಾಟದಲ್ಲಿ ಮೂವರು ಪೊಲೀಸರಿಗೆ ಗಾಯಗಳಾಗಿವೆ. 9 ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯೇನಪೋಯ ಡಿಗ್ರಿ ಕಾಲೇಜಿನ ಹಾಸ್ಟೆಲ್ ಪರಿಸರದಲ್ಲಿ ಈ ಘಟನೆ ನಡೆದಿದೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಹಾಗು ಸ್ಥಳೀಯರೊಂದಿಗೆ ಪರಿಸ್ಥಿತಿ ಅವಲೋಕಿಸಿದ್ದಾರೆ. ಹುಡುಗರ ವರ್ತನೆ ಸರಿ ಇಲ್ಲ. ಹಾಸ್ಟೆಲ್ ಇಲ್ಲಿಂದ ಈ ಕೂಡಲೇ ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಪರಿಸರದಲ್ಲಿ ಕೇರಳ ವಿದ್ಯಾರ್ಥಿಗಳ ಪುಂಡಾಟಿಕೆ ಮಿತಿಮೀರುತ್ತಿರುವ ಬಗ್ಗೆ ಗುಜ್ಜರ ಕೆರೆ ನಿವಾಸಿಗಳು ಆರೋಪ ಮಾಡಿದ್ದಾರೆ. ಯೇನಪೋಯ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್ ಈ ಕೂಡಲೇ ಸ್ಥಳಾಂತರಿಸುವಂತೆ ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ.
ಇನ್ನು ಈ ಕೇಸ್ ಸಂಬಂಧ 2 ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದೇವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಈಗಾಗಲೇ ಐದಾರು ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದಿದ್ದೇವೆ. ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲು ಹೋದಾಗ ಪೊಲೀಸರು ಮತ್ತು ಸ್ಥಳೀಯರ ಮೇಲೆ ಕಲ್ಲು ತೂರಿದ್ದಾರೆ. ಈ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ. ನಮ್ಮ ಪೊಲೀಸ್ ಸಿಬ್ಬಂದಿಗೂ ಸಣ್ಣ ಪುಟ್ಟ ಏಟು ಬಿದ್ದಿದೆ. ಇಲ್ಲಿನ ವಾಸ್ತವಾಂಶ ತಿಳಿದು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ರು.
ಇದನ್ನೂ ಓದಿ: ಕತ್ರಿನಾ-ವಿಕ್ಕಿ ಮದುವೆ ಕದ್ದು ನೋಡಲು ಡ್ರೋನ್ ಬಳಸಿದರೆ ಕಾದಿದೆ ಶಿಕ್ಷೆ; ಶೂಟ್ ಮಾಡಲು ನಿರ್ಧಾರ
Published On - 12:13 pm, Fri, 3 December 21