ದಕ್ಷಿಣ ಕನ್ನಡ, ಜು.09: ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರ ಹಿನ್ನಲೆ ಮಂಗಳೂರು ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ(Dr. Bharath Shetty Y) ವಿರುದ್ಧ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ಗೆ ದೂರು ನೀಡಲಾಗಿದೆ. ಎಂಎಲ್ಸಿ ಐವನ್ ಡಿಸೋಜಾ(Ivan D’Souza) ನೇತೃತ್ವದ ನಿಯೋಗ, ಇಂದು(ಜು.09) ಕಮಿಷನರ್ ಅವರನ್ನು ಭೇಟಿಯಾಗಿ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲು ಒತ್ತಾಯಿಸಿದರು.
ಮಂಗಳೂರಿನ ಕಾವೂರಿನಲ್ಲಿ ನಿನ್ನೆ ನಡೆದಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ್ದ ಶಾಸಕ ಭರತ್ ಶೆಟ್ಟಿ, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ. ರಾಹುಲ್ ಗಾಂಧಿ ಶಿವನ ಫೋಟೋ ಹಿಡಿದು ನಿಂತಿದ್ದ. ಈ ಹುಚ್ಚನಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾನೆ ಎಂದು ಗೊತ್ತಿಲ್ಲ ಎಂದಿದ್ದರು. ಈ ಹಿನ್ನಲೆ ಐವನ್ ಡಿಸೋಜಾ ನೇತೃತ್ವದ ನಿಯೋಗ ಭರತ್ ಶೆಟ್ಟಿ ಅವರನ್ನು ಬಂಧಿಸಲು ಕಮಿಷನರ್ಗೆ ದೂರು ನೀಡಿದೆ.
ಶಾಸಕ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ನಿನ್ನೆ ನಡೆದ ಪ್ರತಿಭಟನಾ ಸಭೆಯಲ್ಲಿ ಕಿಡಿಕಾರಿದ್ದರು. ‘ಹಿಂದೂಗಳ ಬಗ್ಗೆ ಏನು ಮಾತನಾಡಿದ್ರೂ ಕೇಳ್ತಾರೆ ಎಂಬ ಭಾವನೆ ರಾಹುಲ್ ಗಾಂಧಿಗೆ ಇರಬಹುದು. ಅವನು ಅಲ್ಲಿ ಬೊಗಳುವ ಸಂದರ್ಭ ಇಲ್ಲಿನ ಸ್ಥಳೀಯ ನಾಯಕರು ಬಾಲ ಬಿಚ್ಚಲು ಶುರು ಮಾಡಿದ್ದಾರೆ. ‘ಬಾಯಿಗೆ ಬಂದ ಹಾಗೆ ರಾಹುಲ್ ಗಾಂಧಿ ಬೊಗಳುತ್ತಿದ್ದಾನೆ. ಆತ ದೊಡ್ಡ ಹುಚ್ಚ, ರಾಹುಲ್ ಗಾಂಧಿಗೆ ಸಂಸತ್ತಿನೊಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಿಬೇಕು ಎಂದಿದ್ದರು. ಈ ಹೇಳಿಕೆ ವಿರುದ್ದ ಇದೀಗ ದೂರು ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ