ಮಂಗಳೂರು: ನಮ್ಮ ದೇಶದಲ್ಲಿ ಕೆಲವರು ಹಿಂದುತ್ವದ ಬಗ್ಗೆ ಚರ್ಚೆ ಮಾಡುತ್ತಾರೆ. ನಾನು ಹಿಂದು, ಆದರೆ ನನಗೆ ಹಿಂದುತ್ವ ಬೇಕಿಲ್ಲ ಅಂತಾರೆ. ಆ ಮನುಷ್ಯನಿಗೆ ಅವನ ರಕ್ತಾನೇ ಗೊತ್ತಿಲ್ಲ, ಅಂಥವರಿಗೆಲ್ಲ ಹಿಂದುತ್ವ. ನಿನಗೆ ಬೇಕೋ ಬೇಡವೂ ಯಾರಿಗೆ ಬೇಕು, ನಿನಗೆ ಬೇಡ ಅಂತ ನಾವು ಪರಿಗಣನೆ ಮಾಡಿ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸಂಸದ ಅನಂತ ಕುಮಾರ್ ಹೆಗಡೆ (Anantkumar Hegde) ಪರೋಕ್ಷ ವಾಗ್ದಾಳಿ ಮಾಡಿದರು. ಪುತ್ತೂರಿನಲ್ಲಿ ಆಯೋಜಿಸಿದ್ದ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅವನು ಹಿಂದು ಅಲ್ಲ ಅಂತ ನಾವು ತೆಗೆದಿಟ್ಟಾಗಿದೆ. ಹಿಂದೂ ಅಂತ ಹೇಳಿಸಿಕೊಳ್ಳಲು ಕೆಲವು ಯೋಗ್ಯತೆಗಳಿವೆ. ಆಡಂಬರದ ಬದುಕು ಒಪ್ಪದಿರೋದು ಮತ್ತು ಸತ್ಯದ ಬದುಕು ಹಿಂದುತ್ವ. ಈ ಹಿಂದುತ್ವದ ಬಗ್ಗೆ ಇಂಥ ಕಮಂಗಿಗಳಿಗೆ ಏನು ಅರ್ಥ ಆಗಬೇಕು ಎಂದು ಕಿಡಿಕಾರಿದರು.
ಜಾತಿಯ ಗೂಡು ಬಿಟ್ಟು ಹೊರಗೆ ಬರಲು ಸಾಧ್ಯವಿಲ್ಲದವ್ರೆಲ್ಲ ಹಿಂದುತ್ವದ ಬಗ್ಗೆ ಚರ್ಚೆ ಮಾಡ್ತಾರೆ. ಪುಸ್ತಕ ಓದಲು ಯೋಗ್ಯತೆ ಇಲ್ಲದವ್ರೆಲ್ಲಾ ಹಿಂದುತ್ವದ ಬಗ್ಗೆ ಚರ್ಚೆ ಮಾಡ್ತಾರೆ. ದೇವಸ್ಥಾನಕ್ಕೆ ಹೋಗುವಾಗ ಹೇಗೆ ಹೋಗಬೇಕು ಅಂತ ಗೊತ್ತಿಲ್ಲದವರೆಲ್ಲಾ ಹಿಂದುತ್ವದ ಬಗ್ಗೆ ಚರ್ಚೆ ಮಾಡ್ತಾರೆ. ಕುತ್ತಿಗೆಗೆ ಹಾಕುವ ಶಾಲಿನಲ್ಲಿ ಹಿಂದುತ್ವ ಕಾಣಬಾರದು.
ಇದನ್ನೂ ಓದಿ: ಇಸ್ಲಾಂ ಈ ಜಗತ್ತಿಗೆ ಅಂಟಿದ ಶಾಪ: ಸಂಸದ ಅನಂತಕುಮಾರ ಹೆಗಡೆ ವಿವಾದಾತ್ಮಕ ಪೋಸ್ಟ್
ಹಣೆಗೆ ಇಟ್ಟಿರೋ ತಿಲಕದಲ್ಲಿ ಹಿಂದುತ್ವ ಕಾಣಬಾರದು, ನಮ್ಮ ಬದುಕಿನಲ್ಲಿ ಕಾಣಬೇಕು. ನನ್ನ ನಾಲಗೆ, ನನ್ನ ಬದುಕು, ನನ್ನ ವಿಚಾರದಲ್ಲಿ ಕಾಣುವುದು ನಿಜವಾದ ಹಿಂದುತ್ವ. ಒಳಗಡೆ ಒಂದು, ಹೊರಗಡೆ ಒಂದು ಇರೋದನ್ನ ಹಿಂದುತ್ವ ಎನ್ನಲು ಸಾಧ್ಯವಿಲ್ಲ. ಸುಳ್ಳು ಹೇಳುವುದು, ಅಸತ್ಯದ ಮಾತು ಹಿಂದುತ್ವ ಅಲ್ಲ ಎಂದು ಅನಂತ ಕುಮಾರ್ ಹೆಗಡೆ ಹೇಳಿದರು.
ಸರ್ಕಾರದಲ್ಲಿ ಇರುವ ಸಚಿವರದು ಕಳ್ಳರ ಕೂಟ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಚಿಕ್ಕಬಳ್ಳಾಫುರದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಪ್ರತ್ರಿಕ್ರಿಯೆ ನೀಡಿದ್ದು, ಈಗ ಕಾಂಗ್ರೆಸ್ನವರು ಬಸ್ ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಹೋದ ಕಡೆ ಗಂಜಲು ಹಾಕಿ ತೊಳೆಯಬೇಕು. ಇಲ್ಲಾಂದ್ರೆ ಆ ಪಾಪ ಹೋಗಲ್ಲ.
ಜನರಿಗೆ ಮರಳು ಮಾಡಿ ಓಟು ಪಡೆದ್ರು. ಅಧಿಕಾರಕ್ಕೆ ಬಂದ ಮೇಲೆ ಜನರನ್ನು ಮರೆತರು. ಹಿಂದೆ ರಾಜ್ಯವನ್ನು ಲೂಟಿ ಮಾಡಿವರು ಕಾಂಗ್ರೆಸ್ನವರು. ಸಿದ್ದರಾಮಯ್ಯನವರದು ದರೋಡೆಕೊರರ ಕೂಟ ಅದು. ಅವರಿಗೆ ಚೆನ್ನಾಗಿ ಅನುಭವ ಇದೆ. ಸಿದ್ದರಾಮಯ್ಯನವರದು ಒಳ್ಳೆ ಕೂಟ ಆಗಿದ್ರೆ ಯ್ಯಾಕೆ 17 ಜನ ಹೊರಗಡೆ ಬಂದ್ರು ಎಂದು ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:16 pm, Thu, 12 January 23