ಮಂಗಳೂರು: ಬಪ್ಪನಾಡು ದುರ್ಗಾ ಪರಮೇಶ್ವರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ..!
ಕರಾವಳಿಯ ಭಾಗದಲ್ಲಿ 800 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಮುಲ್ಕಿಯ ಬಪ್ಪನಾಡು ದುರ್ಗಾ ಪರಮೇಶ್ವರಿ ದೇಗುಲ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕುವಂತೆ ಮುಜರಾಯಿ ಇಲಾಖೆಗೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.
ಮಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ಸಾಕಷ್ಟು ಸದ್ದು ಮಾಡಿದ್ದ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಈಗ ಮತ್ತೆ ಶುರುವಾಗಿದೆ. ಯುಗಾದಿ (Yugadi) ಹಬ್ಬದಂದು ಹಲಾಲ್ ಕಟ್ (Halal Cut) -ಜಟ್ಕಾ ಕಟ್ ಶುರುವಾಗಿತ್ತು. ಈಗ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ (Ban on Muslim Traders) ಪ್ರಾರಂಭವಾಗಿದೆ. ಕರಾವಳಿಯ ಭಾಗದಲ್ಲಿ 800 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಮುಲ್ಕಿಯ ಬಪ್ಪನಾಡು ದುರ್ಗಾ ಪರಮೇಶ್ವರಿ ದೇಗುಲ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕುವಂತೆ ಮುಜರಾಯಿ ಇಲಾಖೆಗೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.
ಬೆಂಗಳೂರಿನಲ್ಲಿ 18 ಜಟ್ಕಾ ಕಟ್ ಶಾಪ್ ಓಪನ್
ಈ ಬಾರಿಯ ಯುಗಾದಿ ಹಬ್ಬದಂದು 18 ಜಟ್ಕಾ ಕಟ್ ಅಂಗಡಿಗಳು ಓಪನ್ ಆಗಿದ್ದವು. ಹಲಾಲ್ ಬಾಯ್ಕಾಟ್ ಅಭಿಯಾನದ ಹಿನ್ನೆಲೆ ರಾಜಸ್ಥಾನದ ಅಜ್ಮೇರ್ ನಿಂದ 200, ಬಾಸವನಬಾಗೇವಾಡಿ, ಮಧುಗಿರಿಯಿಂದ 400. ಒಟ್ಟು 600 ಕುರಿ ಮತ್ತು ಮೇಕೆಗಳು ರಾಜಧಾನಿಗೆ ಬಂದಿದ್ದವು. ಕಳೆದ ಬಾರಿ ನಾಲ್ಕು ಜಟ್ಕಾ ಕಟ್ ಶಾಪ್ಗಳನ್ನು ತೆರೆಯಲಾಗಿತ್ತು. ಈ ಬಾರಿ ಹದಿನೆಂಟು ಅಂಗಡಿಗಳನ್ನು ತೆರೆಯಲಾಗಿದೆ. ಕಮ್ಮನಹಳ್ಳಿ, ಇಟ್ಟಮಡು, ದಾಸರಹಳ್ಳಿ, ಸಂಜಯ್ ನಗರ, ಗೆದ್ದಲಹಳ್ಳಿ, ಯಲಹಂಕ, ಇಂದಿರಾನಗರ, ಟ್ಯಾನರಿ ರಸ್ತೆ, ಹೊರಮಾವು, ಅನ್ನಪೂರ್ಣೇಶ್ವರಿನಗರ ಸೇರಿದಂತೆ 18 ಅಂಗಡಿಗಳನ್ನು ತೆರೆಯಲಾಗಿತ್ತು.
ಕಳೆದ ಬಾರಿಯಂತೆ ಈ ಬಾರಿಯು ಮುಸ್ಲಿಂ ವ್ಯಾಪಾರಿಗಳಿಗೆ ಠಕ್ಕರ್ ಕೊಡಲು 12 ಸಾವಿರ ಕೆಜಿ ಜಟ್ಕಾ ಕಟ್ ಮಾಂಸ ಕಟ್ ಮಾಡಲಾಗಿತ್ತು. ಕಳೆದ ಬಾರಿಯಂತೆ ಈ ಬಾರಿಯು ಆನ್ಲೈನ್ ಮತ್ತು ಡೋರ್ ಡೆಲಿವರಿ ವ್ಯವಸ್ಥೆ ಮಾಡಲಾಗಿತ್ತು. ಹಿಂದೂಪರ ಸಂಘಟನೆಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದವು. 2 ಕೆಜಿ ಮಟನ್, 2 ಕೆಜಿ ಚಿಕನ್, 6 ಮೊಟ್ಟೆ 1999 ರೂ ಕಾಂಬೋ ನೀಡಲಾಗುತ್ತು. ಹಿಂದವೀ ಮೀಟ್ ಮಾರ್ಟ್ 1200 ಸಾವಿರ ಕೆಜಿ ಜಟ್ಕಾ ಕಟ್ ರೆಡಿ ಮಾಡಿತ್ತು. ಗುಡ್ಡೆ ಮಾಂಸ ಕೆಜಿ- 650, ಕೆಜಿ ಮಟನ್- 700, ಚಿಕನ್- 130 ರಿಂದ 140 ರುಪಾಯಿಗೆ ಮಾರಾಟ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ