AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್​ಎಸ್​ಎಸ್​ ಎಚ್ಚರ, ನಾವು ಮರಳಿ ಬರುತ್ತೇವೆ’ ರಸ್ತೆ ಮೇಲೆ ಬರೆದು RSSಗೆ ವಾರ್ನಿಂಗ್ ಕೊಟ್ಟ ಪಿಎಫ್​ಐ

‘ಚಡ್ಡಿಗಳೇ ಎಚ್ಚರ, ನಾವು ಮರಳಿ ಬರುತ್ತೇವೆ' ಎಂದು ಕೆಲ ಕಿಡಿಗೇಡಿಗಳು ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ರಸ್ತೆ ಮೇಲೆ ಬರದು ಆರ್​ಎಸ್​ಎಸ್​ಗೆ ಎಚ್ಚರಿಕೆ ನೀಡಿದ್ದಾರೆ.

‘ಆರ್​ಎಸ್​ಎಸ್​ ಎಚ್ಚರ, ನಾವು ಮರಳಿ ಬರುತ್ತೇವೆ' ರಸ್ತೆ ಮೇಲೆ ಬರೆದು RSSಗೆ ವಾರ್ನಿಂಗ್ ಕೊಟ್ಟ ಪಿಎಫ್​ಐ
ರಸ್ತೆ ಮೇಲೆ ಬರೆದು RSSಗೆ ವಾರ್ನಿಂಗ್ ಕೊಟ್ಟ ಪಿಎಫ್​ಐ
TV9 Web
| Edited By: |

Updated on:Oct 04, 2022 | 12:24 PM

Share

ಬಂಟ್ವಾಳ: ದೇಶದ ಅನೇಕ ಕಡೆ ದಾಳಿ ನಡೆಸಿ ಪಿಎಫ್​ಐ(PFI) ಮುಖಂಡರನ್ನು ಬಂಧಿಸಲಾಗಿದ್ದು ದಿನದಿಂದ ದಿನಕ್ಕೆ ಪಿಎಫ್​ಐ ಸಂಬಂಧ ಅನೇಕ ಸಂಗತಿಗಳು ಬಹಿರಂಗವಾಗುತ್ತಿದೆ. ಇದರ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪಿಎಫ್​ಐ ಸಂಘಟನೆ ಪರವಾಗಿ ಕೆಲ ಕಿಡಿಗೇಡಿಗಳು RSSಗೆ ವಾರ್ನಿಂಗ್​ ಕೊಟ್ಟಿದ್ದಾರೆ.

‘ಚಡ್ಡಿಗಳೇ ಎಚ್ಚರ, ನಾವು ಮರಳಿ ಬರುತ್ತೇವೆ’ ಎಂದು ಕೆಲ ಕಿಡಿಗೇಡಿಗಳು ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ರಸ್ತೆ ಮೇಲೆ ಬರದು ಆರ್​ಎಸ್​ಎಸ್​ಗೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಸ್ಥಳೀಯರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಆರಂಭಿಸಿದ್ದಾರೆ. ಬಂಟ್ವಾಳ ಭಾಗದಲ್ಲಿ ಪಿಎಫ್ಐ ಸಂಘಟನೆ ಸಕ್ರಿಯವಾಗಿತ್ತು. ಪಿಎಫ್​ಐನಲ್ಲಿ ಸಕ್ರಿಯವಾಗಿದ್ದವರೇ ಎಚ್ಚರಿಕೆ ಬರಹ ಬರೆದಿರೋ ಮಾಹಿತಿ ಇದ್ದು ಸ್ಪ್ರೇ ಪೈಂಟ್ ಬಳಸಿ ತಡರಾತ್ರಿ ರಸ್ತೆಯಲ್ಲಿ ಬರಹ ಬರೆಯಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಆರ್ಥಿಕ ಹಿಂಜರಿತದ ಸಂಕೇತವೇ? ಆಫರ್​ ಲೆಟರ್​ ಕೊಟ್ಟ ಮೇಲೆ ಉದ್ಯೋಗಕ್ಕೆ ಹೋದಾಗ ನಿಮಗೆ ಅರ್ಹತೆ ಇಲ್ಲ ಎಂದು ಹೊರಗಟ್ಟುತ್ತಿವೆ ಐಟಿ ಕಂಪನಿಗಳು

ಐ ಶ್ರೆಡ್ಡರ್ ಆ್ಯಪ್​ ಮೂಲಕ ದಾಖಲೆ ನಾಶ

ಕೆಜಿ ಹಳ್ಳಿ ಪಿಎಫ್ಐ​ ಕಾರ್ಯಕರ್ತರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಐ ಶ್ರೆಡ್ಡರ್ ಆ್ಯಪ್ ಬಳಸಿ ಒಂದೇ ಒಂದು ಕ್ಲಿಕ್ ಮೂಲಕ ಇಡೀ ದಾಖಲೆ, ಡೇಟಾವನ್ನು ನಾಶ ಮಾಡಲಾಗಿದೆ. ಈ ಆ್ಯಪ್ ಬಳಸಿ ಬಂಧಿತರು ಆರೋಪಿಗಳ ಇಂಟರ್ ಲಿಂಕ್ ನ ದಾಖಲೆ ನಾಶ ಮಾಡಿದ್ದಾರೆ.

ಮೂರು ಹಂತಲ್ಲಿ ದಾಖಲೆ ನಾಶ

  1. ಮೊಬೈಲ್ ನಲ್ಲಿರುವ ದಾಖಲೆಗಳನ್ನು ಆಯ್ಕೆ ಮಾಡುವುದು..(choose your data)
  2. ಆಯ್ಕೆ ಬಳಿಕ ಪ್ರಕ್ರಿಯೆ ಮಾದರಿ (choose a method)
  3. ದಾಖಲೆಗಳ ನಾಶದ ಪ್ರಕ್ರಿಯೆ ಆರಂಭ (start the erusure) ಆಯ್ಕೆ ಮಾಡಿ ಕೂತಲ್ಲೆ ಮೊಬೈಲ್​ ಮೂಲಕ ಆ್ಯಪ್ ಓಪನ್ ಮಾಡಿ ಇಡೀ ಡೇಟಾವನ್ನು ನಾಶ ಮಾಡಲಾಗಿದೆ.

ಬಂಧಿತರ ಮೊಬೈಲ್ ರಿಟ್ರಿವ್ ವೇಳೆ ಪೊಲೀಸರಿಗೆ ದೊಡ್ಡ ಲೀಡ್ ಸಿಕ್ಕಿದೆ. ತನಿಖೆ ವೇಳೆ ಸಿಕ್ಕ ಎಲ್ಲಾ ಮೊಬೈಲ್ ಗಳ ಡೇಟಾ ಬಹುತೇಕ ರಿಟ್ರೀವ್ ಮಾಡಲಾಗಿದೆ. ಸದ್ಯ ಸಿಕ್ಕ ಎಲ್ಲಾ ಡೇಟಾಗಳ ಮಾಹಿತಿಯನ್ನು  ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಸದ್ಯ ಅಕ್ಟೋಬರ್ 17ರವರೆಗೂ ಆರೋಪಿಗಳು ನ್ಯಾಯಾಂಗ ಬಂಧನ ಹಿನ್ನಲೆ ಈ ಸಮಯದಲ್ಲಿ ಸಂಪೂರ್ಣ ಪೇಪರ್ ವರ್ಕ್ ಮಾಡಲು ಸೂಚಿಸಲಾಗಿದೆ. ಈಗಾಗಲೇ ಪೊಲೀಸರು ಆರೋಪಿಗಳ ಹೇಳಿಕೆ ಪಡೆದಿದ್ದಾರೆ. ಮತ್ತೊಂದೆಡೆ ಸಂಗ್ರಹಿಸಲ್ಪಟ್ಟ ಡೇಟಾಗಳ ಪರಿಶೀಲನೆ ನಡೆಯುತ್ತಿದೆ. ಕೊನೆಗೆ ಹೇಳಿಕೆ ಹಾಗೂ ಡೇಟಾಗಳ ತಾಳೆ ಹಾಕಲಾಗುತ್ತೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:42 am, Tue, 4 October 22

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ