ಸೈಬರ್​ ಕ್ರೈಂ: ಮಂಗಳೂರು ಪೊಲೀಸ್​ ಕಮಿಷನರ್ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ

| Updated By: ವಿವೇಕ ಬಿರಾದಾರ

Updated on: Oct 26, 2024 | 1:33 PM

ಸೈಬರ್​ ವಂಚಕರು ವಂಚನೆಗೆ ಒಂದಲ್ಲ ಒಂದು ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ಇದೀಗ ವಂಚಕರು ಯಾವುದೇ ಭಯವಿಲ್ಲದೆ, ಮಂಗಳೂರು ಪೊಲೀಸ್ ಆಯುಕ್ತ ​​​​ಅನುಪಮ್ ಅಗರ್ವಾಲ್ ಅವರ ಹೆಸರಿನಲ್ಲಿ ಫೇಸ್​ಬುಕ್​ನಲ್ಲಿ ನಕಲಿ ಖಾತೆ ತೆರೆದಿದ್ದಾರೆ.

ಸೈಬರ್​ ಕ್ರೈಂ: ಮಂಗಳೂರು ಪೊಲೀಸ್​ ಕಮಿಷನರ್ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ
ಫೇಸ್​ಬುಕ್ ನಕಲಿ ಖಾತೆ
Follow us on

ಮಂಗಳೂರು, ಅಕ್ಟೋಬರ್​ 26: ಸೈಬರ್​ ವಂಚಕರು (Cyber Crime) ಮಂಗಳೂರು ಪೊಲೀಸ್ ಕಮಿಷನರ್ (Mangalore Police Commissioner) ​ಹೆಸರಿನಲ್ಲಿ ನಕಲಿ ಫೇಸ್​​​ಬುಕ್ (Facebook)​​​​​​ ಖಾತೆ ತೆರೆದಿದ್ದಾರೆ. ಸೈಬರ್​ ವಂಚಕರು ಮಂಗಳೂರು ಪೊಲೀಸ್ ಆಯುಕ್ತ ​​​​ಅನುಪಮ್ ಅಗರ್ವಾಲ್ ಅವರ ಹೆಸರಿನಲ್ಲಿ ಫೇಸ್​ಬುಕ್​ನಲ್ಲಿ ನಕಲಿ ಖಾತೆ ತೆರೆದು, ಫ್ರೆಂಡ್​ ರಿಕ್ವೆಸ್ಟ್ ಕಳುಹಿಸುತ್ತಿದ್ದರು. ಬಳಿಕ, ಮೆಸೆಂಜರ್​ ಮುಖಾಂತ ಸಂದೇಶ ಕಳುಹಿಸಿ​ ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದರು.

ಈ ವಿಚಾರ ತಿಳಿದ ಮಂಗಳೂರು ಪೊಲೀಸ್ ಆಯುಕ್ತ ​​​​ ಅನುಪಮ್ ಅಗರ್ವಾಲ್ ಅವರು ವಂಚಕರ ವಿರುದ್ಧ ಮಂಗಳೂರು ಸೆನ್​ ​ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ “ತಮ್ಮ ಹೆಸರಲ್ಲಿ ಬರುವ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬೇಡಿ” ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: “ಸಹಕರಿಸು, ಇಲ್ಲ 24 ತುಂಡು ಮಾಡುವೆ”, ಬೆದರಿಕೆ ನೊಂದು ಯುವತಿ ಆತ್ಮಹತ್ಯೆಗೆ ಯತ್ನ

ವಿಡಿಯೋ ಕಾಲ್​​ ಮುಖಾಂತರ ಸೈಬರ್​ ವಂಚನೆ

ಧಾರವಾಡ: ಸೈಬರ್​ ವಂಚಕರು ವಿಡಿಯೋ ಕರೆ ಮಾಡಿ ಹೆದರಿಸಿ ಅಮಾಯಕರಿಂದ ಹಣ ವಸೂಲಿ ಮಾಡಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ. ರಮೇಶ್​ ನೂಲ್ವಿ ಹಣ ಕಳೆದುಕೊಂಡ ಸಂತ್ರಸ್ತ.
ಪೊಲೀಸ್ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ರಮೇಶ್​ ನೂಲ್ವಿ ಎಂಬುವರಿಗೆ ವಿಡಿಯೋ ಕರೆ ಮಾಡಿದ್ದಾನೆ. ಆತ ಪೊಲೀಸ್ ಠಾಣೆಯಲ್ಲಿ ಕುಳಿತು ಮಾತನಾಡುತ್ತಿರುವಂತೆ ಠಾಣೆಯ ಸೆಟ್ ಕೂಡ ಇರುತ್ತದೆ. ನಿಮ್ಮ ಮೇಲೆ ಭೂ ಅಕ್ರಮ ಹಣ ವರ್ಗಾವಣೆ, ಡ್ರಗ್ಸ್ ಸಾಗಾಣಿಕೆ ಕೇಸು ದಾಖಲಾಗಿದ್ದು, ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿದೆ ಎಂದು ಹೇಳಿದ್ದಾನೆ. ಅಲ್ಲದೇ, ನೀವು ಕೂಡಲೇ ಮುಂಬೈ ಕ್ರೈಮ್ ಬ್ರ್ಯಾಂಚ್​ಗೆ ಹಾಜರಾಗಬೇಕು ಅಂತ ರಮೇಶ್​ ಅವರಿಗೆ ಹೇಳಿದ್ದಾನೆ. ಅಲ್ಲದೇ ನಕಲಿ ವಾರೆಂಟ್ ಪ್ರತಿಯನ್ನು ಕೂಡ ಕಳಿಸಿದ್ದಾನೆ.

ಇದನ್ನು ನೋಡಿದ ರಮೇಶ ಭಯಗೊಂಡು, ಆರೋಪಿ ಕೇಳಿದ ಖಾತೆಗೆ 3 ಲಕ್ಷ ರೂ. ಕೂಡಲೇ ವರ್ಗಾವಣೆ ಮಾಡಿದ್ದಾರೆ. ಬಳಿಕ, ರಮೇಶ್​ ಅವರಿಗೆ ಇವರೆಲ್ಲ ನಕಲಿ ಅಧಿಕಾರಿಗಳು ಎಂಬುವುದು ಗೊತ್ತಾಗಿದೆ. ಕೂಡಲೇ ಧಾರವಾಡದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂಥ ಮೋಸಕ್ಕೆ ಬಲಿಯಾಗಬೇಡಿ ಅಂತ ಧಾರವಾಡ ಎಸ್ಪಿ ಡಾ. ಗೋಪಾಲ ಬ್ಯಾಕೋಡ್ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ