Sign In

By signing in or creating an account, you agree with Associated Broadcasting Company's Terms & Conditions and Privacy Policy.

Daiva Narthakas: ದೈವ ನರ್ತಕರಿಗೆ ಸೌಲಭ್ಯ ಘೋಷಣೆಯಾಗಿ 2 ತಿಂಗಳಾದರೂ ಅನುಷ್ಠಾನಕ್ಕೆ ಗೈಡ್​ಲೈನ್ಸ್ ಪ್ರಕಟವಾಗಿಲ್ಲ

ವೃದ್ಧಾಪ್ಯ ಪಿಂಚಣಿ ರದ್ದುಪಡಿಸಿ, ಹೊಸ ಪಿಂಚಣಿಗೆ ಅರ್ಜಿ ಸಲ್ಲಿಸುವ ವಿಧಾನ ಸರಳವಾಗಿಲ್ಲ. ಇದು ಫಲಾನುಭವಿಗಳಲ್ಲಿ ಸಮಸ್ಯೆ ಉಂಟು ಮಾಡಿದೆ.

Daiva Narthakas: ದೈವ ನರ್ತಕರಿಗೆ ಸೌಲಭ್ಯ ಘೋಷಣೆಯಾಗಿ 2 ತಿಂಗಳಾದರೂ ಅನುಷ್ಠಾನಕ್ಕೆ ಗೈಡ್​ಲೈನ್ಸ್ ಪ್ರಕಟವಾಗಿಲ್ಲ
ಕರಾವಳಿಯ ದೈವ ನರ್ತಕImage Credit source: facebook.com/balagakumar345
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 26, 2023 | 12:27 PM

ಬೆಂಗಳೂರು: ಕನ್ನಡ ಸಿನಿಮಾ ‘ಕಾಂತಾರ’ (Kantara Movie) ಸೂಪರ್​ಹಿಟ್ ಆದ ನಂತರ ರಾಜ್ಯದಲ್ಲಿ ದೈವನರ್ತಕರು (Daiva Nartakas) ಮತ್ತು ದೈವಗಳ ಬಗ್ಗೆ ಆಸಕ್ತಿ ಮೂಡಿದೆ. ಇದೇ ಹೊತ್ತಿನಲ್ಲಿ ಕರ್ನಾಟಕ ಸರ್ಕಾರವೂ 60 ವರ್ಷ ದಾಟಿದ ದೈವನರ್ತಕರಿಗೆ ಮಾಸಿಕ ಗೌರವಧನ ನೀಡುವ ಯೋಜನೆಯನ್ನು ಪ್ರಕಟಿಸಿತು. ಯೋಜನೆ ಪ್ರಕಟವಾಗಿ 2 ತಿಂಗಳಾದರೂ ಈವರೆಗೆ ಮಾರ್ಗದರ್ಶಿ ಸೂತ್ರಗಳು ಪ್ರಕಟವಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ‘ಫಲಾನುಭವಿಗಳ ಮಾಹಿತಿ ಸಂಗ್ರಹದಲ್ಲಿ ತೊಡಕುಂಟಾಗಿದೆ. ಸರಿಯಾಗಿ ಮಾಹಿತಿ ಸಿಗುತ್ತಿಲ್ಲ’ ಎಂದು ಹೇಳಿದ್ದಾರೆ.

ಪ್ರಸ್ತುತ ದೈವನರ್ತಕರನ್ನು ಜಾನಪದ ಕಲಾವಿದರ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರ ಬದುಕಿನ ಕುರಿತು ಯಾವುದೇ ಪ್ರತ್ಯೇಕ ಸಮೀಕ್ಷೆಗಳು ನಡೆದಿಲ್ಲ. ಮಾಸಾಶನಕ್ಕೆ ಅರ್ಜಿ ಹಾಕುವ ವಿಧಾನವನ್ನು ಸರ್ಕಾರ ಸರಳಗೊಳಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಕೇವಲ ಇಬ್ಬರಿಗೆ ಮಾತ್ರ ಈವರೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ ಎಂದು ದೈವನರ್ತಕರೊಬ್ಬರು ಹೇಳಿದರು. ಈ ಕುರಿತು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ದಿನಪತ್ರಿಕೆಗೆ ಪ್ರತಿಕ್ರಿಯಿಸಿರುವ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಮತ್ತು ದೈವಾರಾಧನೆಯ ಬಗ್ಗೆ ಅಧ್ಯಯನ ಮಾಡಿರುವ ದಯಾನಂದ ಜಿ.ಕತ್ತಲ್​ಸಾರ್, ‘60 ವರ್ಷ ದಾಟಿದ ದೈವಾರಾಧಕರ ಸಂಖ್ಯೆ ಕೇವಲ 1,000 ಇದೆ. ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ತಲುಪಬೇಕು ಎಂದಾದಲ್ಲಿ ಗರಿಷ್ಠ ವಯೋಮಿತಿಯನ್ನು 55 ವರ್ಷಕ್ಕೆ ಇಳಿಸಬೇಕು’ ಎಂದು ಸಲಹೆ ಮಾಡಿದ್ದಾರೆ.

ಹಲವು ಕಲಾವಿದರು ಈಗಾಗಲೇ ವೃದ್ಧಾಪ್ಯ ಪಿಂಚಣಿ (ಸಂಧ್ಯಾ ಸುರಕ್ಷಾ ₹1,000) ಪಡೆಯುತ್ತಿದ್ದಾರೆ. ಅವರು ಈ ಹೊಸ ಗೌರವಧನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಒಂದು ವೇಳೆ ಹೊಸದಾಗಿ ಪಿಂಚಣಿಗೆ ಅರ್ಜಿ ಹಾಕಬೇಕೆಂದರೆ ಹಿಂದಿನ ಪಿಂಚಣಿಯಿಂದ ಹೊರಬರಬೇಕೆಂಬ ನಿಯಮವಿದೆ. ವೃದ್ಧಾಪ್ಯ ಪಿಂಚಣಿ ರದ್ದುಪಡಿಸಿ, ಹೊಸ ಪಿಂಚಣಿಗೆ ಅರ್ಜಿ ಸಲ್ಲಿಸುವ ವಿಧಾನ ಸರಳವಾಗಿಲ್ಲ.

ಎಲ್ಲ ಅರ್ಜಿದಾರರಿಗೆ ಗೌರವಧನ ಒದಗಿಸಲು ತನ್ನ ಬಳಿ ಅಗತ್ಯ ಹಣಕಾಸು ಲಭ್ಯವಿಲ್ಲ ಎಂದು ಸರ್ಕಾರವೂ ಈ ಮೊದಲು ಸ್ಪಷ್ಟಪಡಿಸಿತ್ತು. ಬಹುತೇಕ ದೈವನರ್ತಕರು ಅನಕ್ಷರಸ್ಥರು ಮತ್ತು ಬಡವರಾಗಿದ್ದಾರೆ. ಹೀಗಾಗಿ ಆನ್​ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸುವುದು ಅವರಿಗೆ ಕಷ್ಟವಾಗುತ್ತಿದೆ. ಗ್ರಾಮ ಪಂಚಾಯಿತಿ ಅಥವಾ ಪಿಡಿಒಗಳ ಮೂಲಕ ಮಾಸಿಕ ಗೌರವಧನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವುದು ಒಳ್ಳೆಯದು. ಈ ವಿಷಯವನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್ ಅವರ ಗಮನಕ್ಕೆ ತರಲಾಗಿದೆ. ಅವರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ದೈವ ನರ್ತಕರಿಗೆ 2 ಸಾವಿರ ರೂ. ಮಾಸಾಶನ ನೀಡಲು ನಿರ್ಧಾರ: ಸಚಿವ ಸುನಿಲ್ ಕುಮಾರ್

ದಕ್ಷಿಣ ಕನ್ನಡ ಜಿಲ್ಲೆಯ ಮತ್ತಷ್ಟು ಮಾಹಿತಿ ಇಲ್ಲಿ ಕ್ಲಿಕ್ ಮಾಡಿ

Published On - 12:23 pm, Thu, 26 January 23

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ