ದಕ್ಷಿಣ ಕನ್ನಡ: ಸುಳ್ಯ ಪೇಟೆಯಲ್ಲಿ ಏಕಾಏಕಿ ಭೂಕುಸಿತ, ತಪ್ಪಿದ ಭಾರೀ ಅನಾಹುತ

| Updated By: Ganapathi Sharma

Updated on: Nov 03, 2023 | 10:50 PM

ದಿಢೀರ್ ಭೂಕುಸಿತವಾಗಿದ್ದರಿಂದ ಸುಳ್ಯದ ಜನತೆ ಬೆಚ್ಚಿ ಬಿದ್ದಿದೆ. ಘಟನಾ ಸ್ಥಳಕ್ಕೆ ಮೆಸ್ಕಾ ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ಕಂಬ ತೆರವುಗೊಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಭೂಕುಸಿತ ಉಂಟಾದ ಭಾಗಕ್ಕೆ ಯಾರೂ ಹೋಗದಂತೆ ತಡೆದಿದ್ದಾರೆ.

ದಕ್ಷಿಣ ಕನ್ನಡ: ಸುಳ್ಯ ಪೇಟೆಯಲ್ಲಿ ಏಕಾಏಕಿ ಭೂಕುಸಿತ, ತಪ್ಪಿದ ಭಾರೀ ಅನಾಹುತ
ವಿದ್ಯುತ್ ಕಂಬ ಹಾಗೂ ಟ್ರಾನ್ಸ್​​ಫಾರ್ಮರ್ ವಾಲಿರುವುದು ಹಾಗೂ ಧರಾಶಾಯಿಯಾಗಿರುವುದು
Follow us on

ಮಂಗಳೂರು, ನವೆಂಬರ್ 3: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ (Sullia) ಶುಕ್ರವಾರ ರಾತ್ರಿ ಏಕಾಏಕಿ ಭೂಕುಸಿತ (Landslide) ಸಂಭವಿಸಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಸುಳ್ಯ ಪೇಟೆಯಲ್ಲಿರುವ ‘ಪರಿವಾರಕಾನ ಉಡುಪಿ ಗಾರ್ಡನ್’ ಹೋಟೆಲ್ ಬಳಿ ಭೂಕುಸಿತ ಸಂಭವಿಸಿದೆ. ಭೂಕುಸಿತವಾದ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್​ಫಾರ್ಮರ್ ಇತ್ತು. ಭುಕುಸಿತವಾದ ಬೆನ್ನಲ್ಲೇ ಟ್ರಾನ್ಸ್​ಫಾರ್ಮರ್ ಧರಾಶಾಯಿಯಾಗಿದೆ. ಅದೃಷ್ಟವಶಾತ್ ವಿದ್ಯುತ್ ಕಂಬ ಹಾಗೂ ಟ್ರಾನ್ಸ್​ಫಾರ್ಮರ್ ಬೀಳುವ ಸಂದರ್ಭ ಪವರ್ ಕಟ್ ಆಗಿದ್ದ ಕಾರಣ ದುರಂತ ತಪ್ಪಿದೆ.

ದಿಢೀರ್ ಭೂಕುಸಿತವಾಗಿದ್ದರಿಂದ ಸುಳ್ಯದ ಜನತೆ ಬೆಚ್ಚಿ ಬಿದ್ದಿದೆ. ಘಟನಾ ಸ್ಥಳಕ್ಕೆ ಮೆಸ್ಕಾ ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ಕಂಬ ತೆರವುಗೊಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಭೂಕುಸಿತ ಉಂಟಾದ ಭಾಗಕ್ಕೆ ಯಾರೂ ಹೋಗದಂತೆ ತಡೆದಿದ್ದಾರೆ.

ಇದನ್ನೂ ಓದಿ: ಬಾವಿಯಲ್ಲಿ ವಿವಾಹಿತ ಮಹಿಳೆಯ ಮೃತದೇಹ ಪತ್ತೆ: ಪತಿಯೇ ಕೊಲೆಗೈದಿರುವ ಶಂಕೆ

ಈ ಮಧ್ಯೆ, ಸುಳ್ಯವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶುಕ್ರವಾರ ಮಳೆಯಾಗಿದೆ.

ನೆರೆಯ ಕೊಡಗು ಜಿಲ್ಲೆಯಲ್ಲಿಯೂ ಶುಕ್ರವಾರ ಸಂಜೆ ಹಾಗೂ ರಾತ್ರಿ ಭಾರೀ ಮಳೆಯಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ಸುತ್ತಮುತ್ತ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ. ಮಡಿಕೇರಿ‌ ನಗರ, ಮೇಕೇರಿ, ಕಗ್ಗೋಡ್ಲು, ತಾಳತ್ಮನೆ ಸುತ್ತಮುತ್ತ ಮಳೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ