ಮಂಗಳೂರು: ಅಪ್ಪನೇ ಮಗನ ಮೇಲೆ ಫೈರಿಂಗ್ ಮಾಡಿದ ಘಟನೆ ಅಕ್ಟೋಬರ್ 5 ರಂದು ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಸಮೀಪ ನಡೆದಿತ್ತು. ಗುಂಡಿನ ದಾಳಿಗೆ ಒಳಗಾದ ಬಾಲಕ ಸುಧೀಂದ್ರ ಪ್ರಭು (14) ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಗಾಯಾಳು ಬಾಲಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಂದೆ ರಾಜೇಶ್ ಪ್ರಭು, ಮಗನ ಮೇಲೆ ಗುಂಡು ಹಾರಿಸಿದ್ದರು.
ವೇತನದ ವಿಚಾರಕ್ಕೆ ಮಾಲೀಕ ರಾಜೇಶ್ ಪ್ರಭು ಬಳಿ ಇಬ್ಬರು ಸಿಬ್ಬಂದಿಗಳು ಜಗಳ ಮಾಡಿದ್ದರು. ಚಂದ್ರು ಮತ್ತು ಅಶ್ರಫ್ ಎಂಬ ಸಿಬ್ಬಂದಿ ರಾಜೇಶ್ ಜೊತೆ ಗಲಾಟೆ ಮಾಡಿದ್ದರು. ಈ ವೇಳೆ ರಾಜೇಶ್ ಪುತ್ರ ಸುಧೀಂದ್ರ ಪ್ರಭು ಸಿಬ್ಬಂದಿ ಜೊತೆ ಜಗಳಕ್ಕೆ ಇಳಿಯುತ್ತಾನೆ. ಆಗ ರಾಜೇಶ್ ಕೈಯಲ್ಲಿದ್ದ ಲೈಸೆನ್ಸ್ ರಿವಾಲ್ವರ್ನಿಂದ ಅಚಾನಕ್ ಆಗಿ ಗುಂಡು ಹಾರಿದೆ.
ಈ ಪರಿಣಾಮ ಮಗ ಸುಧೀಂದ್ರ ತಲೆ ಭಾಗಕ್ಕೆ ಗಂಭೀರ ಗಾಯವಾಗುತ್ತದೆ. ಕಚೇರಿ ಹೊರಭಾಗದ ಸಿಸಿಟಿವಿಯಲ್ಲಿ ಚಲನವಲನಗಳು ಸೆರೆಯಾಗಿದ್ದು, ಘಟನೆ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ರಾಜೇಶ್ ಪ್ರಭು ಮಾಹಿತಿ ನೀಡಿದ್ದಾರೆ. ವೈಷ್ಣವಿ ಖಾರ್ಗೋ ಲಿಮಿಟೆಡ್ ಕಂಪನಿ ಮಾಲೀಕ ರಾಜೇಶ್ ಪ್ರಭು ಅನ್ನು ನಿನ್ನೆ (ಅಕ್ಟೋಬರ್ 7) ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:
ಬೆಂಗಳೂರಿನಲ್ಲಿ ಶೂಟೌಟ್; ರೌಡಿಶೀಟರ್ ಬಬ್ಲಿ ಹತ್ಯೆ ಆರೋಪಿಗಳ ಮೇಲೆ ಗುಂಡು, ಹತ್ತು ರೌಡಿಗಳು ಅಂದರ್
ಮಂಗಳೂರಿನಲ್ಲಿ ಮಗನ ಮೇಲೆ ಅಪ್ಪನಿಂದ ಫೈರಿಂಗ್ ಪ್ರಕರಣ; ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆ
Published On - 10:24 am, Fri, 8 October 21