ಮಂಗಳೂರಿನಲ್ಲಿ ಮಗನ ಮೇಲೆ ಅಪ್ಪನಿಂದ ಫೈರಿಂಗ್ ಪ್ರಕರಣ; ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆ
ಸುಧೀಂದ್ರ ಪ್ರಭು ಮತ್ತು ಇಬ್ಬರು ಸಿಬ್ಬಂದಿ ಮಧ್ಯೆ ಕಚೇರಿ ಹೊರಗೆ ಹೊಡೆದಾಟ ನಡೆಯುತ್ತದೆ. ಆಗ ಕಚೇರಿ ಒಳಗಿಂದ ತನ್ನ ಲೈಸೆನ್ಸ್ ರಿವಾಲ್ವರ್ ಹಿಡಿದು ರಾಜೇಶ್ ಹೊರಬರುತ್ತಾರೆ. ರಿವಾಲ್ವರ್ ಹಿಡಿದು ಸಿಬ್ಬಂದಿ ಮೇಲೆ ಕೈ ಹಾಕಿ ಪರಸ್ಪರ ಹೊಡೆದಾಟ ನಡೆಸುತ್ತಾರೆ.
ಮಂಗಳೂರು: ಅಪ್ಪನೇ ತನ್ನ ಮಗನ ಮೇಲೆ ಫೈರಿಂಗ್ ಮಾಡಿದ್ದ ಘಟನೆ ನಿನ್ನೆ (ಅ.5) ಮಂಗಳೂರಿನ ಮಾರ್ಗನ್ಸ್ ಗೇಟ್ ಬಳಿಯ ವೈಷ್ಣವಿ ಕಾರ್ಗೋ ಸಂಸ್ಥೆಯಲ್ಲಿ ನಡೆದಿತ್ತು. ವೇತನದ ವಿಚಾರಕ್ಕೆ ಮಾಲೀಕ ರಾಜೇಶ್ ಪ್ರಭು ಬಳಿ ಇಬ್ಬರು ಸಿಬ್ಬಂದಿ ಜಗಳ ಮಾಡಿದ್ದರು. ಚಂದ್ರು ಮತ್ತು ಅಶ್ರಫ್ ಎಂಬ ಸಿಬ್ಬಂದಿ ರಾಜೇಶ್ ಜೊತೆ ಗಲಾಟೆ ಮಾಡಿದ್ದರು. ಈ ವೇಳೆ ರಾಜೇಶ್ ಪುತ್ರ ಸುಧೀಂದ್ರ ಪ್ರಭು ಸಿಬ್ಬಂದಿ ಜೊತೆ ಜಗಳಕ್ಕೆ ಇಳಿಯುತ್ತಾನೆ. ಆಗ ರಾಜೇಶ್ ಕೈಯಲ್ಲಿದ್ದ ಲೈಸೆನ್ಸ್ ರಿವಾಲ್ವರ್ನಿಂದ ಅಚಾನಕ್ ಆಗಿ ಗುಂಡು ಹಾರಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿ ಸಾವು ಬದುಕಿನ ಮಧ್ಯೆ ಪುತ್ರ ಸುಧೀಂದ್ರ ಹೋರಾಡುತ್ತಿದ್ದಾನೆ.
ಸುಧೀಂದ್ರ ಪ್ರಭು ಮತ್ತು ಇಬ್ಬರು ಸಿಬ್ಬಂದಿ ಮಧ್ಯೆ ಕಚೇರಿ ಹೊರಗೆ ಹೊಡೆದಾಟ ನಡೆಯುತ್ತದೆ. ಆಗ ಕಚೇರಿ ಒಳಗಿಂದ ತನ್ನ ಲೈಸೆನ್ಸ್ ರಿವಾಲ್ವರ್ ಹಿಡಿದು ರಾಜೇಶ್ ಹೊರಬರುತ್ತಾರೆ. ರಿವಾಲ್ವರ್ ಹಿಡಿದು ಸಿಬ್ಬಂದಿ ಮೇಲೆ ಕೈ ಹಾಕಿ ಪರಸ್ಪರ ಹೊಡೆದಾಟ ನಡೆಸುತ್ತಾರೆ. ಈ ವೇಳೆ ಅಚಾನಕ್ ಆಗಿ ಕೈಯ್ಯಲ್ಲಿದ್ದ ರಿವಾಲ್ವರ್ನಿಂದ ಗುಂಡು ಹಾರುತ್ತದೆ. ಈ ಪರಿಣಾಮ ಮಗ ಸುಧೀಂದ್ರ ತಲೆ ಭಾಗಕ್ಕೆ ಗಂಭೀರ ಗಾಯವಾಗುತ್ತದೆ. ಕಚೇರಿ ಹೊರಭಾಗದ ಸಿಸಿಟಿವಿಯಲ್ಲಿ ಚಲನವಲನಗಳು ಸೆರೆಯಾಗಿದ್ದು, ಘಟನೆ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ರಾಜೇಶ್ ಪ್ರಭು ಮಾಹಿತಿ ನೀಡಿದ್ದಾರೆ.
ವೇತನ ಕೇಳಿದ ವಿಚಾರದಲ್ಲಿ ನೌಕರರ ಜತೆ ವಾಗ್ವಾದ ನಡೆದಿತ್ತು. ಈ ವೇಳೆ ಅಪ್ಪ ಮಗನ ಮೇಲೆ ಅಚಾನಕ್ ಆಗಿ ಗುಂಡು ಹಾರಿಸಿದ್ದಾರೆ. ಗಂಭೀರ ಗಾಯಗೊಂಡಿರುವ ಸುಧೀಂದ್ರನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ
ಮಂಗಳೂರು: ಮಗನ ಮೇಲೆ ಅಪ್ಪನಿಂದಲೇ ಫೈರಿಂಗ್
ಬಂದರು ವಿಸ್ತರಣೆಗೆ ಮಿನುಗಾರರಿಂದ ವಿರೋಧ; ಸ್ಥಳೀಯವಾಗಿ ಮತ್ತೊಮ್ಮೆ ಪರಿಶೀಲನೆಗೆ ಮುಂದಾದ ಪರಿಸರ ಇಲಾಖೆ