AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರಾಡಿಘಾಟ್ ಬಂದ್ ಬೆನ್ನಲ್ಲೇ ಚಾರ್ಮಾಡಿಘಾಟ್ನಲ್ಲಿ ಹೈ ಅಲರ್ಟ್; ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ

ಹೆದ್ದಾರಿ ಪಕ್ಕದ ಗಿಡಗಂಟಿ, ಮಣ್ಣು ತೆರವುಗೊಳಿಸಲಾಗುತ್ತಿದೆ. ಹಾಗೂ ಜೆಸಿಬಿ ಮೂಲಕ ಅಪಾಯಕಾರಿ ಕಲ್ಲು ತೆರವು ಮಾಡಲಾಗುತ್ತಿದೆ. ಘಾಟ್ ರಸ್ತೆಯ ಹಳ್ಳಗಳಲ್ಲಿ ನೀರು ನಿಲ್ಲದಂತೆ ಸರಾಗ ಹರಿವಿಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಶಿರಾಡಿಘಾಟ್ ಬಂದ್ ಬೆನ್ನಲ್ಲೇ ಚಾರ್ಮಾಡಿಘಾಟ್ನಲ್ಲಿ ಹೈ ಅಲರ್ಟ್; ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ
ಚಾರ್ಮಾಡಿ ಘಾಟ್
TV9 Web
| Edited By: |

Updated on: Jul 18, 2022 | 3:27 PM

Share

ಮಂಗಳೂರು: ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿ 75 ಬಂದ್ ಮಾಡಲಾಗಿದೆ. ಆದ್ರೆ ಶಿರಾಡಿಘಾಟ್(Shiradi Ghat)ನ ಪರ್ಯಾಯ ಮಾರ್ಗದಲ್ಲಿ ಲಘು ವಾಹನಗಳು ಸಂಚರಿಸಲು ಅವಕಾಶ ನೀಡಿ ಹಾಸನ ಡಿಸಿ ಆರ್ ಗಿರೀಶ್(R Girish) ಆದೇಶ ಹೊರಡಿಸಿದ್ದಾರೆ. ಈಗ ಶಿರಾಡಿಘಾಟ್ ಬಂದ್ ಬೆನ್ನಲ್ಲೇ ಚಾರ್ಮಾಡಿಘಾಟ್ನಲ್ಲಿ(Charmadi Ghat) ಹೈ ಅಲರ್ಟ್ ಕೈಗೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಚಾರ್ಮಾಡಿಘಾಟ್ನಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಆದ್ರೆ ಘಾಟ್‌ನಲ್ಲಿ ವಾಹನದಟ್ಟಣೆ ಹಿನ್ನೆಲೆಯಲ್ಲಿ ರಸ್ತೆ ಬದಿ ಕ್ಲೀನಿಂಗ್ ಕೆಲಸ ಮಾಡಿಸಲಾಗುತ್ತಿದೆ.

ಹೆದ್ದಾರಿ ಪಕ್ಕದ ಗಿಡಗಂಟಿ, ಮಣ್ಣು ತೆರವುಗೊಳಿಸಲಾಗುತ್ತಿದೆ. ಹಾಗೂ ಜೆಸಿಬಿ ಮೂಲಕ ಅಪಾಯಕಾರಿ ಕಲ್ಲು ತೆರವು ಮಾಡಲಾಗುತ್ತಿದೆ. ಘಾಟ್ ರಸ್ತೆಯ ಹಳ್ಳಗಳಲ್ಲಿ ನೀರು ನಿಲ್ಲದಂತೆ ಸರಾಗ ಹರಿವಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಅಪಾಯಕಾರಿ ಮರ, ಬಂಡೆಗಳನ್ನು ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರದಿಂದ ತುರ್ತು ಕೆಲಸ ನಡೆಯುತ್ತಿದೆ. ಶಿರಾಡಿ ಘಾಟ್ ಭಾಗಶಃ ಬಂದ್ ಆಗಿರೋ ಹಿನ್ನೆಲೆ ವಾಹನಗಳು ಚಾರ್ಮಾಡಿಯತ್ತ ಮುಖ ಮಾಡಿವೆ. ಬಸ್ಸು, ಲಾರಿ ಸೇರಿ ಭಾರೀ ಘನ ವಾಹನಗಳ ಸಂಚಾರ ಹಿನ್ನೆಲೆ ಚಾರ್ಮಾಡಿಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

ಉಕ್ಕಿ ಹರಿಯುತ್ತಿದೆ ನೇತ್ರಾವತಿ ನದಿ

ಇನ್ನು ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಧಾರಾಕಾರ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ಭಾರಿ ನೀರಿನ ಹರಿವಿನ ಮಧ್ಯೆಯೂ ಭಕ್ತರು ತೀರ್ಥ ಸ್ನಾನ ಮಾಡುತ್ತಿದ್ದಾರೆ. ಅಪಾಯ ಲೆಕ್ಕಿಸದೆ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಏಳಿಸುತ್ತಿದ್ದಾರೆ. ಸದ್ಯ ಬಿದಿರಿನ ಕೋಲಿನ ತಡೆ ಕಟ್ಟಿ ನದಿಗೆ ಇಳಿಯದಂತೆ ನಿರ್ಬಂಧ ಹೇರಲಾಗಿದೆ. ಸ್ನಾನ ಘಟ್ಟದ ಮೆಟ್ಟಿಲುಗಳಿಗೆ ಭಾರೀ ಪ್ರಮಾಣದ ನದಿ ನೀರು ಬಡಿಯುತ್ತಿದೆ.

ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಕುಸಿದ ತಡೆಗೋಡೆಗಳು

ಚಿಕ್ಕಮಗಳೂರು: ಮಳೆಯಿಂದ ಕಳಪೆ ಕಾಮಗಾರಿಯ‌ ದರ್ಶನ ಬಯಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 173ರಲ್ಲಿ ತಡೆಗೋಡೆಗಳು ಕುಸಿದಿವೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಹೆದ್ದಾರಿಯ ಮಧ್ಯೆ ಹಳ್ಳ ಬಿದ್ದಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ರಸ್ತೆ ಅಗಲೀಕರಣ ಮಾಡಲಾಗಿತ್ತು. ರಸ್ತೆ ಅಗಲೀಕರಣಕ್ಕೆ ಜನಸಾಮಾನ್ಯರ ಕೋಟಿ ಕೋಟಿ ಹಣ ಸುರಿಯಲಾಗಿತ್ತು. ಚಾರ್ಮಾಡಿ ಘಾಟ್ ಗೆ ಸಂಪರ್ಕ ಕಲ್ಪಿಸುವ‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ ನಡೆದಿದ್ದು VNR ಸಂಸ್ಥೆಯ ಕರ್ಮಕಾಂಡವನ್ನು ವರುಣ ಬಯಲು ಮಾಡಿದೆ. ಕಳಪೆ ಕಾಮಗಾರಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.