AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ರಾಷ್ಟ್ರ ಹೇಳಿಕೆ; ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್​ಗೆ ಸಂಕಷ್ಟ

ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು​ ನೂತನ ಸಂಸತ್ತಿನಲ್ಲಿ ಮೊದಲ ಬಜೆಟ್​ ಮಂಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂಸದ ಡಿಕೆ ಸುರೇಶ್​ ಮಾತನಾಡುವಾಗ, ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಎಂಬ ಹೇಳಿಕೆ ನೀಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಡಿಕೆ ಸುರೇಶ್​ ಅವರಿಗೆ ಸಂಕಷ್ಟ ಎದುರಾಗಿದೆ.

ಪ್ರತ್ಯೇಕ ರಾಷ್ಟ್ರ ಹೇಳಿಕೆ; ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್​ಗೆ ಸಂಕಷ್ಟ
ಬಿಜೆಪಿ ಮುಖಂಡ ವಿಕಾಸ್​ ಪಿ, ಸಂಸದ ಡಿಕೆ ಸುರೇಶ್​
ಅಶೋಕ್​ ಪೂಜಾರಿ, ಮಂಗಳೂರು
| Updated By: ಕಿರಣ್ ಹನುಮಂತ್​ ಮಾದಾರ್|

Updated on:Feb 02, 2024 | 5:46 PM

Share

ದಕ್ಷಿಣ ಕನ್ನಡ, ಫೆ.02: ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್(DK Suresh) ಪ್ರತ್ಯೇಕ ರಾಷ್ಟ್ರದ ಹೇಳಿಕೆ ವಿಚಾರ ರಾಷ್ಟ್ರ ಮಟ್ಟದಲ್ಲಿ ವಿವಾದಕ್ಕೀಡಾಗಿದೆ. ಕೂಡಲೇ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೀಗ ಈ ಹೇಳಿಕೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸುವಂತೆ ಬಿಜೆಪಿ ಮುಖಂಡ ವಿಕಾಸ್.ಪಿ ಎಂಬವವರು ಮಂಗಳೂರಿನ 2ನೇ JMFC ನ್ಯಾಯಾಲಯಕ್ಕೆ ಸೆಕ್ಷನ್ 124 ಎ ಅಡಿ ಕ್ರಮ ಕೈಗೊಳ್ಳುವಂತೆ ದೂರು ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಎಫ್​ಐಆರ್ ದಾಖಲಿಸಿ ತನಿಖೆ ನಡೆಸಲು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಠಾಣಾಧಿಕಾರಿಯವರಿಗೆ ಆದೇಶಿಸುವಂತೆ ಮನವಿ ಸಲ್ಲಿಸಿದ್ದಾರೆ.

ಡಿ.ಕೆ ಸುರೇಶ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆಂಬ ಭರವಸೆಯಿದೆ

ಈ ಕುರಿತು ಮಾತನಾಡಿದ ಬಿಜೆಪಿ ಮುಖಂಡ ವಿಕಾಸ್.ಪಿ ‘ಡಿ.ಕೆ ಸುರೇಶ್ ದೇಶ ವಿರೋಧಿ, ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲು ಮಂಗಳೂರು ಆಯುಕ್ತರಿಗೆ ಹಾಗೂ ಉತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಹಾಗೇ ಮಂಗಳೂರು ನ್ಯಾಯಾಲಯದಲ್ಲೂ ವಿನಂತಿ ಮಾಡಿದ್ದೇವೆ. ಡಿ.ಕೆ ಸುರೇಶ್ ಸಂಸದರಾಗಿದ್ದರೂ ಸಹ ಭಾರತವನ್ನು ವಿಭಜಿಸಬೇಕೆಂದಿದ್ದಾರೆ. ಈ ಮೂಲಕ ಪ್ರತ್ಯೇಕವಾದಿ ಶಕ್ತಿಗಳಿಗೆ ಕುಮ್ಮಕ್ಕು ಕೊಡುವ ಮೂಲಕ ದೇಶದ ಸಂವಿಧಾನಕ್ಕೆ ಅಗೌರವ ತೋರಿಸಿದ್ದಾರೆ. ಇದರಿಂದ ಪ್ರತ್ಯೇಕವಾದಿಗಳಿಗೂ ಡಿ.ಕೆ ಸುರೇಶ್ ಅವರಿಗೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದರು.

ಇದನ್ನೂ ಓದಿ:Mallikarjun Kharge: ದೇಶ ಒಡೆಯುವ ಮಾತು ಸಹಿಸಲ್ಲ: ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ

ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ

ಭಾರತದ ನ್ಯಾಯಾಂಗ ವ್ಯವಸ್ಥೆ, ನ್ಯಾಯಾಧೀಶರ ಮೇಲೆ ಸಂಪೂರ್ಣ ನಂಬಿಕೆಯಿದೆ. ಹೀಗಾಗಿಯೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಡಿ.ಕೆ ಸುರೇಶ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆಂಬ ಭರವಸೆ ಇದೆ. ಇದೇ 7ನೇ ತಾರೀಖಿಗೆ ಡೇಟ್ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಡಿ.ಕೆ ಸುರೇಶ್ ತಮ್ಮ ಜವಾಬ್ದಾರಿ ಮರೆತು ಈ ರೀತಿ ಮಾಡಿದ್ದಾರೆ. ಕಾಂಗ್ರೆಸ್ ಈ ಹಿಂದೆ ಭಾರತವನ್ನು ತುಂಡು ಮಾಡಿದ್ದನ್ನು ಮುಂದುವರಿಸುವ ಗುತ್ತಿಗೆಯನ್ನು ಸುರೇಶ್ ತೆಗೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಪ್ರತ್ಯೇಕ ರಾಷ್ಟ್ರದ ಹೇಳಿಕೆ; ಸಂಸದ ಸ್ಥಾನದಿಂದ ಡಿ.ಕೆ ಸುರೇಶ್ ಅನರ್ಹಗೊಳಿಸುವಂತೆ ಪತ್ರ

ಸಂಸದ ಡಿ.ಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಬಗ್ಗೆ ಹೇಳಿಕೆ ವಿಚಾರಕ್ಕೆ ವಿಧಾನಪರಿಷತ್​ನ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಕೂಡಲೇ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ಪತ್ರ ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Fri, 2 February 24