ಮಂಗಳೂರಿನಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ: ಜಿ ಪರಮೇಶ್ವರ್

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಂಗಳೂರಿನಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ. ಕಳೆದ ಚುನಾವಣೆ ಹೊತ್ತಲ್ಲಿ ನಾನು ನೂರು ಜನರನ್ನು ಸಂಪರ್ಕಿಸಿದ್ದೆ. ಮಂಗಳೂರು ಮೊದಲು ಶಾಂತಿಯಿಂದ ಇತ್ತು, ಈಗ ಇಲ್ಲ ಎಂದು ಹೇಳಿದ್ದಾಗಿ ತಿಳಿಸಿದರು.

ಮಂಗಳೂರಿನಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ: ಜಿ ಪರಮೇಶ್ವರ್
ಮಂಗಳೂರಿನಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ ಎಂದ ಗೃಹಸಚಿವ ಜಿ ಪರಮೇಶ್ವರ್
Edited By:

Updated on: Feb 17, 2024 | 1:45 PM

ಮಂಗಳೂರು, ಫೆ.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G Parameshwara) ಹೇಳಿದ್ದಾರೆ. ಮಂಗಳೂರಿನಲ್ಲಿ (Mangaluru) ಮಾತನಾಡಿದ ಅವರು, ಜನರು ಶಾಂತಿಯಿಂದ ಬದುಕುವ ಕಡೆಗೆ ನಾವು ಗಮನ ಹರಿಸುತ್ತೇವೆ. ಧರ್ಮ ಹಾಗೂ ಜಾತಿಗಳ ಹೆಸರಿನಲ್ಲಿ ರಾಜಕಾರಣ ಆಗಬಾರದು ಎಂದರು.

ಈ ಭಾಗದಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ. ಕಳೆದ ಚುನಾವಣೆ ಹೊತ್ತಲ್ಲಿ ನಾನು ನೂರು ಜನರನ್ನು ಸಂಪರ್ಕಿಸಿದ್ದೆ. ಮಂಗಳೂರು ಮೊದಲು ಶಾಂತಿಯಿಂದ ಇತ್ತು, ಈಗ ಇಲ್ಲ ಎಂದಿದ್ದರು. ಮಕ್ಕಳೆಲ್ಲರೂ ಈಗ ಊರು ಬಿಟ್ಟು ಬೇರೆ ಕಡೆ ಹೋಗಿದ್ದಾರೆ ಅಂತ ಹೇಳಿದ್ದಾರೆ. ಕಲುಷಿತ ವಾತಾವರಣದಿಂದ ಬೇರೆ ಕಡೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾರೆ. ಧರ್ಮ ನಂಬಿಕೆಗಳನ್ನು ಅನುಸರಿಸುವಾಗ ಶಾಂತಿಯಿಂದ ಇರಬೇಕು. ಇಡೀ‌ ಸಮುದಾಯಕ್ಕೆ ವಿಷ ಬೀಜ ಬಿತ್ತುವ ಕೆಲಸ ಆಗಬಾರದು ಎಂದರು.

ಇದನ್ನೂ ಓದಿ: ಡಿಕೆ ಸುರೇಶ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಸ್ಪರ್ಧಿಸಿದರೂ ಚಿಂತಿಲ್ಲ: ಮಂಗಳೂರಿನಲ್ಲಿ ಡಿಕೆ ಶಿವಕುಮಾರ್ ಖಡಕ್ ನುಡಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತಿಗೆ ನನ್ನ ಸಹಮತ ಇದೆ. ಯಾರಿಗೆ ಅಭಿವೃದ್ಧಿ ಅವಶ್ಯಕತೆ ಇದೆಯೋ ಅವರಿಗೆ ಅನುದಾನ ಕೊಡಲಾಗುತ್ತದೆ. ಎಸ್​ಸಿ ಎಸ್​ಟಿ ಹಿಂದುಳಿದ ಕಾರಣ ಅವರಿಗೆ ಅನುದಾನ ಕೊಡುತ್ತೇವೆ. ಮುಸ್ಲಿಮರು ಹಿಂದುಳಿದವರಾಗಿರುವ ಕಾರಣ ಸ್ವಲ್ಪ ಹೆಚ್ಚು ಕೊಟ್ಟರೆ ತಪ್ಪೇನು ಎಂದು ಪ್ರಶ್ನಿಸಿದರು.

ಪ್ರತಿಭಟನೆ ಬೇರೆ ಹಂತಕ್ಕೆ ಹೋಗಬಾರದು

ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯ ವಿವಾದ ಪ್ರಕರಣದ ಬಗ್ಗೆ ಮಾತನಾಡಿದ ಪರಮೇಶ್ವರ್, ಶಿಕ್ಷಕಿ ಏನು ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ, ತನಿಖೆ ಆಗಲಿ. ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ನೇಮಿಸಿ ತನಿಖೆ ಆಗುತ್ತದೆ. ಪೊಲೀಸ್ ಇಲಾಖೆ ಕಾನೂನು ರಕ್ಷಣೆ ಮಾಡುವ ಕೆಲಸ ಮಾಡುತ್ತದೆ. ಪ್ರತಿಭಟನೆ ಮಾಡಿದರೆ ತಪ್ಪಿಲ್ಲ, ಆರೆ ಬೇರೆ ಹಂತಕ್ಕೆ ಹೋಗಬಾರದು. ಪೊಲೀಸರು ಅನುಮತಿ ಕೊಟ್ಟರೆ ಪ್ರತಿಭಟನೆ ಮಾಡಲಿ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ