ಮಳಲಿ ಮಸೀದಿ ವಿವಾದ; ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಂದೂಡಿಕೆ
ಮಳಲಿ ಎಂಬಲ್ಲಿ ಇರುವ ಜುಮ್ಮಾ ಮಸೀದಿ (Jumma Masjid) ನವೀಕರಣದ ಸಂದರ್ಭದಲ್ಲಿ ದೇವಾಲಯದ ಮಾದರಿ ರಚನೆ ಪತ್ತೆಯಾಗಿತ್ತು. ಇದರಿಂದ ಈ ಮಸೀದಿಯು ಹಿಂದೂ ದೇಗುಲವಾಗಿತ್ತು ಎನ್ನುವ ವಿಚಾರ ಹೊಸ ಚರ್ಚೆಗೆ ಗ್ರಾಸವಾಗಿತ್ತು. ಈ ವಿವಾದ ಎಪ್ರಿಲ್ 22, 2022 ರಂದು ಕೋರ್ಟ್ ಮೆಟ್ಟಿಲೇರಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಮುಂದೂಡಿದೆ.
ದಕ್ಷಿಣ ಕನ್ನಡ, ಫೆ.17: ಮಂಗಳೂರು ಸಮೀಪದ ಮಳಲಿ ಎಂಬಲ್ಲಿ ಇರುವ ಜುಮ್ಮಾ ಮಸೀದಿ (Jumma Masjid) ನವೀಕರಣದ ಸಂದರ್ಭದಲ್ಲಿ ದೇವಾಲಯದ ಮಾದರಿ ರಚನೆ ಪತ್ತೆಯಾಗಿತ್ತು. ಇದರಿಂದ ಈ ಮಸೀದಿಯು ಹಿಂದೂ ದೇಗುಲವಾಗಿತ್ತು ಎನ್ನುವ ವಿಚಾರ ಹೊಸ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲ, ಈ ವಿವಾದ ಎಪ್ರಿಲ್ 22, 2022 ರಂದು ಕೋರ್ಟ್ ಮೆಟ್ಟಿಲೇರಿತ್ತು. ಮಳಲಿ ಮಸೀದಿ ವಿವಾದದಲ್ಲಿ ಉತ್ಖನನ ಮಾಡಿ ಸರ್ವೇಗೆ ವಿಶ್ವ ಹಿಂದೂ ಪರಿಷತ್ (Vishva Hindu Parishad) ಸಲ್ಲಿಸಿತ್ತು. ಈ ಅರ್ಜಿ ವಿಚಾರ ಕುರಿತು ಇಂದು(ಫೆ.17) ಮಂಗಳೂರು ಕೋರ್ಟ್ನಲ್ಲಿ ಮತ್ತೆ ಅರ್ಜಿ ವಿಚಾರಣೆ ನಡೆಸಲಾಗಿದೆ. ಬಳಿಕ ಈ ವಿಚಾರಣೆಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಮತ್ತೆ ಸೋಮವಾರಕ್ಕೆ ಮುಂದೂಡಿದೆ.
ವಿವಾದಿತ ಮಳಲಿ ಮಸೀದಿಯ ಉತ್ಖನನ ಮಾಡಿ ಸರ್ವೇ ನಡೆಸಲು ಮನವಿ ಮಾಡಿದ್ದ ವಿಎಚ್ಪಿ
ವಿವಾದಿತ ಮಳಲಿ ಮಸೀದಿಯ ಸರ್ವೇ ನಡೆಸುವ ಸಲ್ಲಿಸದ್ದ ಅರ್ಜಿ ವಿಚಾರವಾಗಿ ಇಂದು ಮತ್ತೆ ಮಸೀದಿ ಪರ ವಕೀಲರು ವಿಶ್ವ ಹಿಂದೂ ಪರಿಷತ್ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೈ ಕೋರ್ಟ್ ತೀರ್ಪಿನ ಪ್ರತಿ ತಲುಪಿದ ಬಳಿಕ ವಾದ ಮಂಡನೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಈಗಾಗಲೇ ಹೈಕೋರ್ಟ್ನಿಂದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ನಿರ್ದೇಶನ ತಲುಪಿದ್ದು, ಮಳಲಿ ಮಸೀದಿ ಜಾಗ ವಕ್ಫ್ ಆಸ್ತಿ ಹೌದಾ? ಅಥವಾ ಅಲ್ಲವಾ ಎಂದು ನಿರ್ಧರಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ.
ಇದನ್ನೂ ಓದಿ:ಮಳಲಿ ಮಸೀದಿ ವಿವಾದ; ಅಧಿಕೃತವಾಗಿ ಕಾನೂನು ಹೋರಾಟಕ್ಕೆ ಇಳಿದ ವಕ್ಫ್ ಬೋರ್ಡ್
ಈಗಾಗಲೇ ತೀರ್ಪು ಪ್ರಕಟಿಸಿ ಆದೇಶ ಮಾಡಿರೋ ರಾಜ್ಯ ಹೈಕೋರ್ಟ್
ಇನ್ನು ಈಗಾಗಲೇ ತೀರ್ಪನ್ನು ಪ್ರಕಟಿಸಿ ರಾಜ್ಯ ಹೈಕೋರ್ಟ್ ಆದೇಶ ಮಾಡಿತ್ತು. ಅದರೆ, ಹೈಕೋರ್ಟ್ ಆದೇಶ ಪ್ರತಿ ತಲುಪದ ಹಿನ್ನೆಲೆ ಮಸೀದಿ ಪರ ವಕೀಲರಿಂದ ವಾದ ಮಂಡನೆಗೆ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಕೋರ್ಟ್ ಮುಂದಿನ ವಿಚಾರಣೆಯನ್ನು ಮತ್ತೆ ಸೋಮವಾರಕ್ಕೆ ಮುಂದೂಡಿದೆ. ಸೋಮವಾರ ಮಸೀದಿ ಪರ ವಾದ ಮಂಡಿಸದೇ ಇದ್ದರೆ, ಆದೇಶ ಮಾಡುವುದಾಗಿ ನ್ಯಾಯಾಧೀಶರು ಸೂಚಿಸಿದ್ದಾರೆ. ಇನ್ನು ವಿಎಚ್ಪಿ ಪರ ಧನಂಜಯ್ ಎಂಬವವರು ಈ ಅರ್ಜಿ ಸಲ್ಲಿಸಿದ್ದರು. ಮೇ.25, 2022 ರಂದು ವಿಎಚ್ಪಿಯಿಂದ ವಿವಾದ ಸಂಬಂಧ ತಾಂಬೂಲ ಪ್ರಶ್ನೆ ಇಡಲಾಗಿತ್ತು. ತಾಂಬೂಲ ಪ್ರಶ್ನೆಯಲ್ಲಿ ದೈವ ಸಾನಿಧ್ಯ ಇರುವುದು ಪತ್ತೆಯಾಗಿತ್ತು. ಆದರೆ, ಕಾನೂನು ಹೋರಾಟದ ಫಲಿತಾಂಶಕ್ಕಾಗಿ ವಿಶ್ವ ಹಿಂದೂ ಪರಿಷತ್ ಕಾಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ