ಅಲ್ಲಾ ಬಗ್ಗೆ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ: ಅವರ ಮಾತಿಗೂ ಮೆದುಳಿಗೂ ಕನೆಕ್ಷನ್ ಇಲ್ಲ ಎಂದ ಖಾದರ್

|

Updated on: Mar 14, 2023 | 1:19 PM

ಅಲ್ಲಾಹನಿಗೆ ಕಿವಿ ಕೇಳಿಸಲ್ವಾ ಎಂಬ ಕೆ.ಎಸ್​ ಈಶ್ವರಪ್ಪ((KS Eshwarappa) ವಿವಾದಾತ್ಮಕ ಹೇಳಿಕೆ ವಿಚಾರ ‘ಈಶ್ವರಪ್ಪ ಮಾತಿಗೂ ಮೆದುಳಿಗೂ ಕನೆಕ್ಷನ್ ಇಲ್ಲ. ಈ ಹಿಂದೆಯೇ ಈ ಮಾತನ್ನ ಕಾಂಗ್ರೆಸ್​ ನಾಯಕರು ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಯು.ಟಿ ಖಾದರ್(U. T. Khader) ಹೇಳಿದ್ದಾರೆ.

ಅಲ್ಲಾ ಬಗ್ಗೆ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ: ಅವರ ಮಾತಿಗೂ ಮೆದುಳಿಗೂ ಕನೆಕ್ಷನ್ ಇಲ್ಲ ಎಂದ ಖಾದರ್
ಕೆ.ಎಸ್​ ಈಶ್ವರಪ್ಪ, ಯು.ಟಿ ಖಾದರ್​
Follow us on

ಮಂಗಳೂರು: ಅಲ್ಲಾಹನಿಗೆ ಕಿವಿ ಕೇಳಿಸಲ್ವಾ ಎಂಬ ಕೆ.ಎಸ್​ ಈಶ್ವರಪ್ಪ((KS Eshwarappa) ವಿವಾದಾತ್ಮಕ ಹೇಳಿಕೆ ವಿಚಾರ ‘ಈಶ್ವರಪ್ಪ ಮಾತಿಗೂ ಮೆದುಳಿಗೂ ಕನೆಕ್ಷನ್ ಇಲ್ಲ. ಈ ಹಿಂದೆಯೇ ಈ ಮಾತನ್ನ ಕಾಂಗ್ರೆಸ್​ ನಾಯಕರು ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಯು.ಟಿ ಖಾದರ್(U. T. Khader) ಹೇಳಿದ್ದಾರೆ. ಹೈಕಮಾಂಡ್ ಮೆಚ್ಚಿಸಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈಶ್ವರಪ್ಪನಿಗೆ ಈ ಚುನಾವಣೆಯಲ್ಲಿ ಸೀಟು ಇಲ್ಲ ಎಂದು ಅವರ ನಾಯಕರು ಹೇಳಿದ್ದಾರೆ. ಇದರಿಂದ ಅಸ್ತವ್ಯಸ್ಥಗೊಂಡು ಈ ರೀತಿಯ ಹೇಳಿಕೆ‌ ನೀಡಿದ್ದಾರೆ. ಚುನಾವಣೆ ಸಂದರ್ಭ ಭಾವನಾತ್ಮಕ ಹೇಳಿಕೆಗಳು ಬೇಡ, ಪ್ರತಿಯೊಂದು ಧರ್ಮಕ್ಕೂ ಅವರದ್ದೇ ಆದ ಮೌಲ್ಯವಿದೆ. ಒಂದು ಧರ್ಮವನ್ನು ಅಪಹಾಸ್ಯ ಅವಹೇಳನ ಮಾಡಿದ್ರೆ ಯಾವ ಧರ್ಮಕ್ಕೂ ಏನು ಆಗಲ್ಲ. ಆದರೆ ಹೇಳಿದವನ ನೀಚತನ, ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಮಂಗಳೂರಿನಲ್ಲಿ ವಿಪಕ್ಷ ನಾಯಕ ಯು.ಟಿ.ಖಾದರ್ ತೀರುಗೆಟು ನೀಡಿದ್ದಾರೆ.

ನಿನ್ನೆ(ಮಾ.13) ಮಂಗಳೂರಿನ ಕಾವೂರಿನ ಶಾಂತಿನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಷಣ ಮಾಡ್ತಿದ್ದ ಕೆ.ಎಸ್.ಈಶ್ವರಪ್ಪ, ‘ಮಸೀದಿಗಳಲ್ಲಿ ಕೂಗುವ ಆಜಾನ್​ ಬಗ್ಗೆ ವಿವಾದಾತ್ಮಕ ಹೇಳಿಕೆ‌ ನೀಡಿದ್ದರು. ನಾನು ಎಲ್ಲಿ ಹೋದರೂ ಇದೊಂದು ತಲೆನೋವು. ಮೈಕ್‌ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಎಂದು ಆಜಾನ್‌ ಬಗ್ಗೆ ವಿವಾದಾತ್ಮಕ ಹೇಳಿಕೆ‌ ನೀಡಿದ್ದರು. ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಕೆ.ಎಸ್.ಈಶ್ವರಪ್ಪ ಭಾಷಣ ಮಾಡುತ್ತಿದ್ದರು. ಈ ವೇಳೆ ಸ್ಥಳೀಯ ಮಸೀದಿಯಿಂದ ಆಜಾನ್‌ ಕೇಳಿ ಬಂದಿದೆ. ಇದರಿಂದ ಸಿಡಿಮಿಡಿಗೊಂಡ ಈಶ್ವರಪ್ಪ ಆಜಾನ್ ಬಗ್ಗೆ ವಿವಾದಾತ್ಮಕ ಹೇಳಿಕೆ‌ ನೀಡಿದ್ದರು.

ಇದನ್ನೂ ಓದಿ:ಕೇರಳದಲ್ಲಿ ಕಮಲ ಅರಳಿಸಲು ಮಾಸ್ಟರ್ ಪ್ಲಾನ್; ಮುಸ್ಲಿಂ,ಕ್ರೈಸ್ತ ಸಮುದಾಯದ ಓಲೈಕೆಗೆ ಬಿಜೆಪಿ ಸಜ್ಜು

ಈಶ್ವರಪ್ಪ ಹೇಳಿಕೆ ವಿರುದ್ಧ ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದ್ದಿನ್​ ಆಕ್ರೋಶ

ಮಂಗಳೂರು: ಈಶ್ವರಪ್ಪ ಹೇಳಿಕೆ ವಿರುದ್ಧ ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದ್ದಿನ್​ ಆಕ್ರೋಶ ವ್ಯಕ್ತಡಿಸಿದ್ದಾರೆ. 2 ನಿಮಿಷದ ಆಜಾನ್​ನಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ ಎಂದು ಈಶ್ವರಪ್ಪ ಹೇಳ್ತಾರೆ. ಆದರೆ ಮೂರು ಘಂಟೆ ಅದೇ ಸ್ಥಳದಲ್ಲಿ ಬಿಜೆಪಿ ಸಮಾವೇಶ ಮಾಡಿದಾಗ ಯಾರಿಗೂ ತೊಂದರೆ ಆಗಿಲ್ವಾ ? ಪಾಪ ಇವರಿಗೆ ಮಕ್ಕಳ ಬಗ್ಗೆ ಬಹಳ‌ ಕಾಳಜಿಯಿದೆ. ಪ್ರಧಾನಿ ಮೋದಿಯವರೇ ಆಜಾನ್ ಸಂದರ್ಭ ಭಾಷಣ ನಿಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಇವರು ಪ್ರಧಾನಿಯನ್ನು ನೋಡಿ‌ ಇನ್ನಾದರೂ ಕಲಿಯಲಿ ಎಂದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ