ಕೃಷ್ಣನ ಶಾಪದಿಂದ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಅವಕಾಶ ಕಳೆದುಕೊಂಡರು, ನಿಮಗೆ ಒಳ್ಳೇದಾಗಬೇಕಿದ್ರೆ ಕೃಷ್ಣಮಠಕ್ಕೆ ಬನ್ನಿ ಎಂದ ಈಶ್ವರಪ್ಪ
ಕೃಷ್ಣನ ಶಾಪದಿಂದಲೇ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶ ಕಳೆದುಕೊಂಡರು. ಸಿದ್ದರಾಮಯ್ಯನವರೇ ಕೃಷ್ಣಮಠಕ್ಕೆ ಬನ್ನಿ ನಿಮಗೆ ಒಳ್ಳೇದಾಗುತ್ತೆ. ನಿಮಗೆ ಒಳ್ಳೆದಾಗಲಿ ಅನ್ನೋ ಉದ್ದೇಶದಿಂದ ಹೇಳುತ್ತಿದ್ದೇನೆ. -ಕೆಎಸ್ ಈಶ್ವರಪ್ಪ
ಉಡುಪಿ: ಕೃಷ್ಣನ ಶಾಪದಿಂದ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡರು. ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಹಲವು ಬಾರಿ ಉಡುಪಿಗೆ ಬಂದಿದ್ದರು. ಆದರೆ ಒಮ್ಮೆಯೂ ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಿಲ್ಲ ಎಂದು ಉಡುಪಿ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಬಹಳ ಸಲ ಉಡುಪಿಗೆ ಬಂದಿದ್ದರು. ಒಮ್ಮೆಯೂ ಕೃಷ್ಣ ಮಠಕ್ಕೆ ಅವರು ಭೇಟಿ ಕೊಟ್ಟಿಲ್ಲ. ಭಕ್ತ ಕನಕದಾಸರ ಪುತ್ಥಳಿ ಕೃಷ್ಣ ಮಠದಲ್ಲಿದೆ. ಕನಕನಿಗೂ ಕೃಷ್ಣನಿಗೆ ವಿಶೇಷವಾದ ಸಂಬಂಧ ಇದೆ. ಕೃಷ್ಣನ ಸ್ಪೂರ್ತಿ ಕನಕನಿಗೆ ಸಿಕ್ಕಿತ್ತು. ಇಂತಹ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಭೇಟಿ ಕೊಟ್ಟಿಲ್ಲ? ಮುಖ್ಯಮಂತ್ರಿ ಆಗಿದ್ದಾಗ ಕೃಷ್ಣ ಮಠಕ್ಕೆ ಬಂದಿಲ್ಲ. ಕೃಷ್ಣನ ಶಾಪದಿಂದಲೇ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶ ಕಳೆದುಕೊಂಡರು. ಸಿದ್ದರಾಮಯ್ಯನವರೇ ಕೃಷ್ಣಮಠಕ್ಕೆ ಬನ್ನಿ ನಿಮಗೆ ಒಳ್ಳೇದಾಗುತ್ತೆ. ನಿಮಗೆ ಒಳ್ಳೆದಾಗಲಿ ಅನ್ನೋ ಉದ್ದೇಶದಿಂದ ಹೇಳುತ್ತಿದ್ದೇನೆ. ಕೃಷ್ಣಮಠಕ್ಕೆ ಬಂದು ನಿಮ್ಮ ಪಾಪ ಕಳೆದುಕೊಳ್ಳಿ. ಸಿದ್ದರಾಮಯ್ಯ ಮೇಲೆಯ ಪ್ರೀತಿಯಿಂದ ಈ ಮಾತು ಹೇಳುತ್ತಿದ್ದೇನೆ. ರಾಜಕೀಯ ಉದ್ದೇಶದಿಂದ ಈ ರೀತಿ ಹೇಳಿಲ್ಲ. ಪ್ರೀತಿ ಇಲ್ಲದೆ ಇದ್ರೆ ರಾಜಕೀಯ ಮಾಡಕ್ಕೆ ಸಾಧ್ಯವಿಲ್ಲ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸಪ್ರೆಸ್ವೇ ಟೋಲ್ ಸಂಗ್ರಹಕ್ಕೆ ಭಾರೀ ವಿರೋಧ, ಟೋಲ್ ಧ್ವಂಸ ಎಚ್ಚರಿಕೆ
ದೇಶದ್ರೋಹ ಮಾಡುವ ವ್ಯಕ್ತಿಗಳನ್ನು ದ್ವೇಷಿಸಬೇಕು. ದೇಶದ್ರೋಹ, ಧರ್ಮ ದ್ರೋಹಿಗಳನ್ನು ದ್ವೇಷಿಸಬೇಕು. ಸಿದ್ದರಾಮಯ್ಯ ಎಲ್ಲಾ ಕಡೆ ದೇವಸ್ಥಾನಕ್ಕೆ ಹೋಗ್ತಾರೆ ಕೃಷ್ಣ ಮಠಕ್ಕೆ ಬರಲ್ಲ. ಮಠಗಳಿಗೆ ಹಣವನ್ನು ಕೊಡ್ತಾರೆ. ಮುಖ್ಯಮಂತ್ರಿ ಆಗಿದ್ದಾಗ ನನಗೂ ಹಣ ಕೊಟ್ಟಿದ್ದಾರೆ. ನಾನು ಮಂತ್ರಿಯಾಗಿದ್ದಾಗ ಅವರ ಬೇಡಿಕೆಗಳಿಗೂ ಸ್ಪಂದಿಸಿದ್ದೇನೆ. ನಮ್ಮಿಬ್ಬರ ನಡುವೆ ಸ್ನೇಹವಿದೆ ಚೆನ್ನಾಗಿದ್ದೇವೆ. ಪಕ್ಷದ ವಿಚಾರ ಬಂದಾಗ, ಮೋದಿನ ಟೀಕೆ ಮಾಡಿದಾಗ ನಾನು ಯಾವ ಭಾಷೆ ಬಳಸಿದ್ದೇನೆ ನಿಮಗೆ ಗೊತ್ತು, ಮೋದಿಯನ್ನು ನರಹಂತಕ ಎಂದು ಕರೆದರೆ ಬಿಡ್ತೀವಾ? ಎಂದರು.
ಕಾಂಗ್ರೆಸ್ನ ಭ್ರಷ್ಟಾಚಾರ ಜನರಿಗೆ ಮನವರಿಕೆಯಾಗಿದೆ
ಈ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಉಡುಪಿ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಮೋದಿಯಂತಹ ವಿಶ್ವನಾಯಕನ ನೇತೃತ್ವ ಸಿಕ್ಕಿದ್ದು ನಮ್ಮ ಪುಣ್ಯ. ಕೇಂದ್ರ, ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸವೇ ನಮಗೆ ಶ್ರೀರಕ್ಷೆ. ಕಾಂಗ್ರೆಸ್ನ ಭ್ರಷ್ಟಾಚಾರ ಜನರಿಗೆ ಮನವರಿಕೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಇಡಿ ದಾಳಿ ಮಾಡಿತ್ತು. ರೇಡ್ ವೇಳೆ ಸಾವಿರಾರು ಕೋಟಿ ರೂ. ಸಿಕ್ಕಿದ್ದನ್ನು ಜನ ಮರೆತಿಲ್ಲ. ಅರ್ಕಾವತಿ ಕೇಸ್ನಲ್ಲಿ ಸಿದ್ದರಾಮಯ್ಯರಿಂದ $8,000 ಕೋಟಿ ಲೂಟಿ ಮಾಡಲಾಗಿದೆ. ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಹಾಕಿದ್ದಾರೆ. ದೇಶ ರಕ್ಷಣೆ, ಸಂಸ್ಕೃತಿಗೋಸ್ಕರ ಬಿಜೆಪಿ ರಾಜಕೀಯ ಮಾಡ್ತಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ