Linga Mudra Stone: ಉಡುಪಿಯಲ್ಲಿ 400 ವರ್ಷಗಳಷ್ಟು ಹಳೆಯದಾದ ‘ಲಿಂಗ ಮುದ್ರೆ’ ಕಲ್ಲು ಪತ್ತೆ!

ಕಲ್ಲಿನ ಮೇಲಿನ ಸಂದೇಶವು ಸೂರ್ಯ ಮತ್ತು ಚಂದ್ರರಿರುವವರೆಗೂ ಅಂದಿನ ರಾಜನ ಸಾಮ್ರಾಜ್ಯವು ಜೀವಿಸುತ್ತದೆ ಎಂದು ಸೂಚಿಸುತ್ತದೆ

Linga Mudra Stone: ಉಡುಪಿಯಲ್ಲಿ 400 ವರ್ಷಗಳಷ್ಟು ಹಳೆಯದಾದ 'ಲಿಂಗ ಮುದ್ರೆ' ಕಲ್ಲು ಪತ್ತೆ!
Linga Mudra StoneImage Credit source: News Karnataka
Follow us
ನಯನಾ ಎಸ್​ಪಿ
|

Updated on: Mar 14, 2023 | 5:38 PM

ಉಡುಪಿ: ಕರ್ನಾಟಕದ ಉಡುಪಿ (Udupi) ಜಿಲ್ಲೆಯಲ್ಲಿ ಸೂರ್ಯ, ಚಂದ್ರ, ಶಿವಲಿಂಗ (Shivalinga) ಮತ್ತು ನಂದಿಯ ಶಾಸನಗಳಿರುವ ‘ಲಿಂಗ ಮುದ್ರೆ’ ಕಲ್ಲು ಪತ್ತೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ (ಮಾರ್ಚ್ 13) ತಿಳಿಸಿದ್ದಾರೆ. ಕುಂದಾಪುರ (Kundapura) ತಾಲೂಕಿನ ಬಸ್ರೂರು (Basrur) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಶೋಕ ಉದ್ಯಾನವನದಲ್ಲಿ ಸಮತಟ್ಟು ಕೆಲಸವಾಗುತ್ತಿರುವಾಗ ಸುಮಾರ 400 ವರ್ಷಗಳಷ್ಟು ಹಳೆಯದಾದ ಕಲ್ಲು ಪತ್ತೆಯಾಗಿದೆ. ಸ್ಥಳೀಯರ ಸಹಾಯದಿಂದ ಇದನ್ನು ಹೊರ ತೆಗೆಯಲಾಗಿದೆ.

ಈ ವಿಷಯವನ್ನು ಇತಿಹಾಸಕಾರರೊಬ್ಬರ ಗಮನಕ್ಕೆ ತರಲಾಯಿತು. ಕಲ್ಲಿನ ಮೇಲಿನ ಸಂದೇಶವು ಸೂರ್ಯ ಮತ್ತು ಚಂದ್ರರಿರುವವರೆಗೂ ಅಂದಿನ ರಾಜನ ಸಾಮ್ರಾಜ್ಯವು ಜೀವಿಸುತ್ತದೆ ಎಂದು ಸೂಚಿಸುತ್ತದೆ ಎಂದು ಇತಿಹಾಸ ಸಂಶೋಧಕ ಪ್ರೊ. ಟಿ. ಮುರುಗೇಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಹಿಂದಿನ ಶತಮಾನದಲ್ಲಿ ಶೈವರು ಶಿವನನ್ನು, ವೈಷ್ಣವರು ವಿಷ್ಣುವನ್ನು ಮತ್ತು ಜೈನರು ತೀರ್ಥಂಕರರನ್ನು ಪೂಜಿಸುವುದು ಸಾಮಾನ್ಯವಾಗಿತ್ತು. ಶೈವರು ತಮ್ಮ ಭೂ ಗಡಿಯಲ್ಲಿ ಲಿಂಗ ಮುದ್ರೆಯ ಕಲ್ಲುಗಳನ್ನು ಸ್ಥಾಪಿಸಿದರೆ ವೈಷ್ಣವರು ವಾಮನಮುದ್ರೆ ಕಲ್ಲುಗಳನ್ನು ಹಾಕುತ್ತಿದ್ದರು ಮತ್ತು ಜೈನರು ಮುಕ್ಕೊಡೆ ಕಲ್ಲುಗಳನ್ನು ಹಾಕುತ್ತಿದ್ದರು. ಇದು ಅವರ ನೆಲದ ಗಡಿಗಳನ್ನು ಗುರುತಿಸುವ ಮಾರ್ಗವಾಗಿತ್ತು. ಇದಕ್ಕೆ ಅನುಗುಣವಾಗಿ ಬಸ್ರೂರಿನಲ್ಲಿ ದೊರೆತ ಲಿಂಗ ಮುದ್ರೆಯ ಕಲ್ಲುಗಳನ್ನು ಗಡಿ ಗುರುತಿಸಲು ಇಡಲಾಗಿದೆ.” ” ಎಂದು ಪ್ರೊ. ಮುರುಗೇಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಲ್ಲಾ ಬಗ್ಗೆ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ: ಅವರ ಮಾತಿಗೂ ಮೆದುಳಿಗೂ ಕನೆಕ್ಷನ್ ಇಲ್ಲ ಎಂದ ಖಾದರ್

ಇತಿಹಾಸದ ಶಿಲಾ ಶಾಸನಗಳು, ಯುದ್ಧ ಸ್ಮಾರಕಗಳು, ಗಡಿಗಲ್ಲುಗಳನ್ನು ಸಂರಕ್ಷಿಸಲು ಸಾರ್ವಜನಿಕರ ಸಹಕಾರ ಮತ್ತು ಬೆಂಬಲ ಅಗತ್ಯವಾಗಿದ್ದು, ನಮ್ಮ ನೆಲದ ಇತಿಹಾಸದಲ್ಲಿ ದಾಖಲೆಯನ್ನು ನಮೂದಿಸಬೇಕು ಎಂದು ಮುರುಗೇಶಿ ಹೇಳಿದರು.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ