ಚರ್ಚ್​​ಗೆ ದೇಣಿಗೆ ನೀಡಿಲ್ಲವೆಂದು ಬಂಟ್ವಾಳದಲ್ಲಿ ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ ಫಾದರ್

| Updated By: ಸಾಧು ಶ್ರೀನಾಥ್​

Updated on: Mar 02, 2024 | 2:47 PM

Bantwala Church Father attack couple: ಗ್ರೆಗರಿ ಮೊಂತೆರೋ (79) ಮತ್ತು ಅವರ ಪತ್ನಿ ಫಿಲೋಮಿನಾ(72) ಹಲ್ಲೆಗೊಳಗಾದ ವೃದ್ಧ ದಂಪತಿ. ಸದರಿ ಪಾದ್ರಿ ಆ ವೃದ್ಧರನ್ನು ಕಾಲಿನಿಂದ ಒದೆಯುತ್ತಿರುವ, ಕತ್ತಿನ ಪಟ್ಟಿ ಹಿಡಿದು ಎಳೆದಾಡುತ್ತಿರುವ ದೃಶ್ಯಗಳು ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚರ್ಚ್​​ಗೆ ದೇಣಿಗೆ ನೀಡಿಲ್ಲವೆಂದು ಬಂಟ್ವಾಳದಲ್ಲಿ ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ ಫಾದರ್
ಚರ್ಚ್​​ಗೆ ದೇಣಿಗೆ ನೀಡಿಲ್ಲವೆಂದು ವೃದ್ಧ ದಂಪತಿ ಮೇಲೆ ಹಲ್ಲೆ
Follow us on

ಮಂಗಳೂರು, ಮಾರ್ಚ್​​ 2: ಕ್ರೈಸ್ತರ ಚರ್ಚ್ ಧರ್ಮಗುರುವೊಬ್ಬರು (church Father) ಹಾಡಹಗಲೇ ವೃದ್ಧ ದಂಪತಿಯ (couple) ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಹಲ್ಲೆ (attack) ಮಾಡುತ್ತಿರುವ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ (Bantwala) ಪುಣಚದ ಎರ್ಮೆತ್ತಡ್ಕ ಎಂಬಲ್ಲಿ ಘಟನೆ ನಡೆದಿದೆ. ಮೊನ್ನೆ ಗುರುವಾರ (ಫೆಬ್ರವರಿ 29 ರಂದು) ಬೆಳಗ್ಗೆ ಈ ಘಟನೆ ನಡೆದಿದೆ.

ಮನೆಲ ಚರ್ಚ್ ನ ಧರ್ಮಗುರು ಫಾದರ್​ ನೆಲ್ಸನ್ ಓಲಿವೆರಾ ಹಲ್ಲೆ ನಡೆಸಿದ ಪಾದ್ರಿ ಎಂದು ತಿಳಿದುಬಂದಿದೆ. ಗ್ರೆಗರಿ ಮೊಂತೆರೋ (79) ಮತ್ತು ಅವರ ಪತ್ನಿ ಫಿಲೋಮಿನಾ(72) ಹಲ್ಲೆಗೊಳಗಾದ ವೃದ್ಧ ದಂಪತಿ. ಸದರಿ ಪಾದ್ರಿ ಆ ವೃದ್ಧರನ್ನು ಕಾಲಿನಿಂದ ಒದೆಯುತ್ತಿರುವ, ಕತ್ತಿನ ಪಟ್ಟಿ ಹಿಡಿದು ಎಳೆದಾಡುತ್ತಿರುವ ದೃಶ್ಯಗಳು ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Also Read: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ, ಸರ್ಕಾರವೇ ಭರಿಸಲಿದೆ ಚಿಕಿತ್ಸಾ ವೆಚ್ಚ

ಮನೆ ಶುದ್ದಗೊಳಿಸುವ ನಿಮಿತ್ತ ಫಾದರ್ ನೆಲ್ಸನ್ ಓಲಿವೆರಾ ಅವರು ಗ್ರೆಗರಿ ಮೊಂತೆರೋ ಮನೆಗೆ ಭೇಟಿ ನೀಡಿದ್ದರಂತೆ. ಆ ವೇಳೆ ದಂಪತಿ ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದಿರುವ ಬಗ್ಗೆ ಚರ್ಚೆಯಾಗಿದೆ. ಮಾತಿಗೆ ಮಾತು ಬೆಳೆದು ವೃದ್ಧ ದಂಪತಿಯನ್ನು ಎಳೆತಂದು ಫಾದರ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Sat, 2 March 24