Grenade: ಇಳಂತಿಲ ಗ್ರಾಮದ ಬಳಿ ದಾರಿಯಲ್ಲಿ 5 ಗ್ರೆನೇಡ್‌ಗಳು ಪತ್ತೆ, ಉಪ್ಪಿನಂಗಡಿ ಠಾಣೆ ಪೊಲೀಸರಿಂದ ತನಿಖೆ ಶುರು

| Updated By: ಆಯೇಷಾ ಬಾನು

Updated on: Nov 10, 2021 | 10:54 AM

ಇಳಂತಿಲ ಗ್ರಾಮದ ದಾರಿಯಲ್ಲಿ ಐದು ಗ್ರಾನೈಡ್ ಪತ್ತೆಯಾಗಿದೆ. ಭೂಸೇನಾ ರೆಜಿಮೆಂಟ್‌ನಲ್ಲಿ SCO ಆಗಿ ನಿವೃತ್ತಿ ಆಗಿರುವ ಜಯಕುಮಾರ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಗ್ರೆನೇಡ್ ವಶಕ್ಕೆ ಪಡೆದಿದ್ದಾರೆ.

Grenade: ಇಳಂತಿಲ ಗ್ರಾಮದ ಬಳಿ ದಾರಿಯಲ್ಲಿ 5 ಗ್ರೆನೇಡ್‌ಗಳು ಪತ್ತೆ, ಉಪ್ಪಿನಂಗಡಿ ಠಾಣೆ ಪೊಲೀಸರಿಂದ ತನಿಖೆ ಶುರು
ಇಳಂತಿಲ ಗ್ರಾಮದ ಬಳಿ ದಾರಿಯಲ್ಲಿ 5 ಗ್ರೆನೇಡ್‌ಗಳು ಪತ್ತೆ
Follow us on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಬಳಿ ದಾರಿಯಲ್ಲಿ 5 ಗ್ರೆನೇಡ್‌ಗಳು ಪತ್ತೆಯಾಗಿವೆ. ಉಪ್ಪಿನಂಗಡಿ ಠಾಣೆ ಪೊಲೀಸರು ಗ್ರೆನೇಡ್‌ ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇಳಂತಿಲ ಗ್ರಾಮದ ದಾರಿಯಲ್ಲಿ ಐದು ಗ್ರಾನೈಡ್ ಪತ್ತೆಯಾಗಿದೆ. ಭೂಸೇನಾ ರೆಜಿಮೆಂಟ್‌ನಲ್ಲಿ SCO ಆಗಿ ನಿವೃತ್ತಿ ಆಗಿರುವ ಜಯಕುಮಾರ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಗ್ರೆನೇಡ್ ವಶಕ್ಕೆ ಪಡೆದಿದ್ದಾರೆ. ಮೊದಲಿಗೆ ಜಯಕುಮಾರ್ ದಾರಿಯಲ್ಲಿ ಹೋಗುವಾಗ ದಾರಿಯಲ್ಲಿ ಗ್ರಾನೈಡ್ಗಳು ಪತ್ತೆಯಾಗಿವೆ. ಬಳಿಕ ತಕ್ಷಣವೇ ಅವುಗಳನ್ನು ಮನೆಯ ಅಂಗಳದ ಬಳಿ ಇಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ಮೇಲೆ ಸ್ಥಳಕ್ಕೆ ಪೊಲೀಸರು ಬಂದು ಗ್ರಾನೈಡ್ ವಶಕ್ಕೆ‌ ಪಡೆದಿದ್ದಾರೆ. ಸದ್ಯ ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಇಳಂತಿಲ ಗ್ರಾಮದಲ್ಲಿ ಪತ್ತೆಯಾಗಿದ್ದ 5 ಹ್ಯಾಂಡ್ ಗ್ರೆನೇಡ್​ಗಳನ್ನು ಬಾಂಬ್ ಸ್ಕ್ವಾಡ್ ನಿಷ್ಕ್ರಿಯಗೊಳಿಸಿದೆ. ನೆಲ್ಯಾಡಿಯ ನಿರ್ಜನ ಪ್ರದೇಶದಲ್ಲಿ ಹ್ಯಾಂಡ್ ಗ್ರೆನೇಡ್ ನಿಷ್ಕ್ರಿಯಗೊಳಿಸಲಾಗಿದೆ. ಹ್ಯಾಂಡ್ ಗ್ರೆನೇಡ್‌ನಲ್ಲಿ ಡಿಟೊನೇಟರ್ ಫಿಕ್ಸ್ ಆಗದ ಹಿನ್ನೆಲೆ ಗ್ರೆನೇಡ್‌ಗಳನ್ನು ನಿಷ್ಕ್ರಿಯ ಮಾಡುವಾಗ ಸ್ಫೋಟಗೊಂಡಿಲ್ಲ. 1979ರಿಂದ 1983 ಮಧ್ಯೆ ಉತ್ಪಾದನೆಯಾಗಿರುವ ಗ್ರೆನೇಡ್ ಇದಾಗಿದ್ದು ಸೇನೆಯಲ್ಲಿ ಬಳಸಲಾಗುವ ಗ್ರೆನೇಡ್ ಇಳಂತಿಲಕ್ಕೆ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಎಂದಿಗೂ ಮುಗಿಯದ ಪುನೀತ್​ ರಾಜ್​ಕುಮಾರ್​ ನೆನಪು; ಇಲ್ಲಿವೆ ಅತಿ ಅಪರೂಪದ ಫೋಟೋಗಳು

Published On - 11:10 am, Sun, 7 November 21