ಬಾಲಕಿ ಮೇಲೆ ಅತ್ಯಾಚಾರ, ಬ್ಲಾಕ್​ಮೇಲೆ ಆರೋಪ; ಶಿಕ್ಷಕ ಮತ್ತು ಆತನ ಪತ್ನಿಯ ಬಂಧನ

| Updated By: guruganesh bhat

Updated on: Aug 08, 2021 | 4:12 PM

ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಮೊಬೈಲ್ ಮೂಲಕ ಫೋಟೋ ತೆಗೆಯುತ್ತಿದ್ದ. ಫೋಟೋ ತೋರಿಸಿ ಮನೆಯಿಂದ ಹಣ ತರುವಂತೆ ಬೆದರಿಸುತ್ತಿದ್ದ. 2018ರಿಂದಲೂ ಈ ಕೃತ್ಯವೆಸಗುತ್ತಿದ್ದ ಎಂಬ ಆರೋಪ ಸರ್ಕಾರಿ ಶಾಲಾ ಶಿಕ್ಷಕನ ಮೇಲೆ ಕೇಳಿಬಂದಿದೆ.

ಬಾಲಕಿ ಮೇಲೆ ಅತ್ಯಾಚಾರ, ಬ್ಲಾಕ್​ಮೇಲೆ ಆರೋಪ; ಶಿಕ್ಷಕ ಮತ್ತು ಆತನ ಪತ್ನಿಯ ಬಂಧನ
ರೇಪ್​ ವಿರುದ್ಧ ಪ್ರತಿಭಟನೆ
Follow us on

ಮಂಗಳೂರು: ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ರಾಯಚೂರು ಮೂಲದ ಸರ್ಕಾರಿ ಶಿಕ್ಷಕ ಮತ್ತು ಕೃತ್ಯಕ್ಕೆ ಸಹಕರಿಸಿದ್ದ ಆತನ ಪತ್ನಿಯನ್ನು ಪೊಲೀಸರ ವಶಕ್ಕೆ ಪಡೆದುಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ಶಿಕ್ಷಕ ಬಳಿಕ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಮೊಬೈಲ್ ಮೂಲಕ ಫೋಟೋ ತೆಗೆಯುತ್ತಿದ್ದ. ಫೋಟೋ ತೋರಿಸಿ ಮನೆಯಿಂದ ಹಣ ತರುವಂತೆ ಬೆದರಿಸುತ್ತಿದ್ದ. 2018ರಿಂದಲೂ ಈ ಕೃತ್ಯವೆಸಗುತ್ತಿದ್ದ ಎಂಬ ಆರೋಪ ಸರ್ಕಾರಿ ಶಾಲಾ ಶಿಕ್ಷಕನ ಮೇಲೆ ಕೇಳಿಬಂದಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವಿದ್ಯಾರ್ಥಿನಿ ದೂರು ನೀಡಿದ್ದರಿಂದ ಆರೋಪಿ ಶಿಕ್ಷಕ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: 

Eta Variant: ದಕ್ಷಿಣ ಕನ್ನಡದಲ್ಲಿ ಕೊರೊನಾ ರೂಪಾಂತರಿ ಇಟಾ ವೈರಾಣು ಪತ್ತೆ; ಕತಾರ್​ನಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು

ಮಂಗಳೂರು: ದೂರು ನೀಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಪೊಲೀಸ್ ಹೆಡ್ ಕಾನ್​ಸ್ಟೇಬಲ್ ಬಂಧನ

(Government school teacher and his wife detained by police with rape and blackmail on a minor girl in Kadaba Dakshina Kannada)

Published On - 4:01 pm, Sun, 8 August 21