Dharmasthala:‘ಸಂಭ್ರಮಗಳ ಸಂಗಮ’ಕ್ಕೆ ಸಾಕ್ಷಿಯಾದ ಧರ್ಮಸ್ಥಳದ ಹೆಗ್ಗಡೆ ದಂಪತಿ

ಹೆಗ್ಗಡೆ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ ಸಂಭ್ರಮ, ಹೆಗ್ಗಡೆಯವರು ರಾಜ್ಯ ಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಖುಷಿಯೊಂದಿಗೆ ಎಪ್ಪತ್ತೈದನೇ ವರ್ಷದ ಹುಟ್ಟು ಹಬ್ಬದ ಅಮೃತ ಮಹೋತ್ಸವ, ಒಟ್ಟು ನಾಲ್ಕು ಸಂಭ್ರಮಗಳ ಸಂಗಮಕ್ಕೆ ಸಾಕ್ಷಿಯಾಗಿತ್ತು.

Dharmasthala:‘ಸಂಭ್ರಮಗಳ ಸಂಗಮ’ಕ್ಕೆ ಸಾಕ್ಷಿಯಾದ ಧರ್ಮಸ್ಥಳದ ಹೆಗ್ಗಡೆ ದಂಪತಿ
ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆImage Credit source: ಶಶಿಧರ ನಾಯ್ಕ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 29, 2022 | 8:22 PM

ಧರ್ಮಸ್ಥಳ: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಗತಕಾಲದ ವೈಭವವನ್ನು  ಹೊಂದಿರುವ ಧರ್ಮಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಲು ಕಣ್ಣುಗಳೆರಡು ಸಾಲದು. ಅಲ್ಲಿ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು (Dr. D. Virendra Heggade) ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆಯವರ (Dr. Hemavathi v. Heggade) ವೈವಾಹಿಕ ಜೀವನದ ಸುವರ್ಣ ಮಹೋತ್ಸವದ ಸಂಭ್ರಮ. ಈ ಸಂಭ್ರಮಗಳ ಸಂಗಮ ನೋಡಲು ವಿವಿಧ ರೀತಿಯಲ್ಲಿ ವರ್ಣಿಸಿದರೆ ಅತಿಶೋಕ್ತಿಯಾಗದು. ಎತ್ತ ನೋಡಿದರೂ ಸಂಭ್ರಮಾಚರಣೆಯ ವೈಭವ ನಯನಮನೋಹರವಾಗಿತ್ತು. ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ನಾಡಿನ ಪವಿತ್ರ ಕ್ಷೇತ್ರದ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ ಸಂಭ್ರಮಗಳ ಸಂಗಮಕ್ಕೆ ಹೊಸ ಮೆರುಗನ್ನು ನೀಡಿತ್ತು.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆಯವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ ಸಂಭ್ರಮ, ಹೆಗ್ಗಡೆಯವರು ರಾಜ್ಯ ಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಖುಷಿಯೊಂದಿಗೆ ಎಪ್ಪತ್ತೈದನೇ ವರ್ಷದ ಹುಟ್ಟು ಹಬ್ಬದ ಅಮೃತ ಮಹೋತ್ಸವ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍ಗೆ ಭಾಜನರಾಗಿರುವ ಡಾ. ಹೇಮಾವತಿ ವಿ. ಹೆಗ್ಗಡೆಯವರ ಸಾಧನೆಯ ಹಾದಿ. ಈ ನಾಲ್ಕು ಸಂಭ್ರಮಗಳ ಸಂಗಮಕ್ಕೆ ಸಾಕ್ಷಿಯಾಗಿದ್ದು ಪುಣ್ಯ ಕ್ಷೇತ್ರ ಧರ್ಮಸ್ಥಳ. ದೇವಾಲಯದ ಸಿಬ್ಬಂದಿ ವರ್ಗ, ಊರಿನ ಸಮಸ್ತ ನಾಗರಿಕರೂ ಸೇರಿದಂತೆ ನಾಡಿನ ಭಕ್ತವೃಂದದವರೆಲ್ಲರೂ ಒಗ್ಗೂಡಿ ‘ಸಂಭ್ರಮಗಳ ಸಂಗಮ’ ವೆಂಬ ಸುಂದರ ಕಾರ್ಯಕ್ರಮವನ್ನು ಆಯೋಜಿಸಿ ಹೆಗ್ಗಡೆ ದಂಪತಿಗಳಿಗೆ ಶ್ರದ್ಧಾ ಭಕ್ತಿಯಿಂದ ಗೌರವ ಸಲ್ಲಿಸಿದರು.

ಬೀಡಿನಿಂದ ಆರಂಭವಾದ ಭವ್ಯ ಮೆರವಣಿಗೆಯಲ್ಲಿ ಕ್ಷೇತ್ರದ ಗಜಪಡೆ ವಿಶೇಷ ಆಕರ್ಷಣೆಯಾಗಿತ್ತು. ಕರಾವಳಿಯ ಪ್ರಸಿದ್ಧ ಹುಲಿ ಕುಣಿತ, ಕೇರಳದ ಸಿಂಗಾರಿ ಮೇಳ, ಯಕ್ಷಗಾನ, ಲಂಬಾಣಿ ನೃತ್ಯ, ಕೋಲಾಟ, ನಾಸಿಕ್ ಬ್ಯಾಂಡ್ ಸೇರಿದಂತೆ ನಾಡಿನ ಅರವತ್ತಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ತಮ್ಮದೇ ಶೈಲಿಯ ಪ್ರತಿಭಾ ಪ್ರದರ್ಶನದ ಮೂಲಕ ಹೆಗ್ಗಡೆ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿದರು. ಖುಷಿಯ ಕ್ಷಣಗಳೊಂದಿಗೆ ದೇವಾಲಯದ ಸಿಬ್ಬಂದಿ ವರ್ಗ ಹಾಗೂ ಊರಿನ ನಾಗರಿಕರು ತಮ್ಮದೇ ಗುಂಪಿನಲ್ಲಿ ಒಂದೇ ತೆರನಾದ ಉಡುಗೆ-ತೊಡುಗೆಗಳನ್ನು ತೊಟ್ಟು ಶಿಸ್ತಿನಲ್ಲಿ ಹೆಜ್ಜೆ ಹಾಕಿ ಮೆರವಣಿಗೆಗೆ ವಿಶೇಷ ಕಳೆ ತುಂಬಿದರು. ಹೆಗ್ಗಡೆಯವರ ನಿವಾಸ ಬೀಡಿನಿಂದ ಪುಷ್ಪಾಲಂಕೃತ ವಾಹನದಲ್ಲಿ ಅಮೃತವರ್ಷಿಣಿ ಸಭಾಂಗಣದವರೆಗೆ ಹೆಗ್ಗಡೆ ದಂಪತಿಯನ್ನು ಅದ್ಧೂರಿ ಮೆರವಣಿಗೆಯಲ್ಲಿ ಕರೆತರಲಾಯಿತು.

ಬಳಿಕ ಎಪ್ಪತ್ತೈದನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಖಾವಂದರ ಬದುಕಿನ ಕುರಿತಾದ ಕಿರುಚಿತ್ರ, ಡಾ. ಹೇಮಾವತಿ ವಿ ಹೆಗ್ಗಡೆಯವರ ಜೀವನ ಮತ್ತು ಸಾಧನೆಯ ಕುರಿತಾದ ಕಿರುಚಿತ್ರ ಮತ್ತು ಹೆಗ್ಗಡೆ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ ಸಂಭ್ರಮದ ಸುಂದರ ಕ್ಷಣಗಳನ್ನು ದೃಶ್ಯಾಂಭಿನಂದನದ ಮೂಲಕ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಸಮಸ್ತ ನಾಗರಿಕರಿಂದ ಮತ್ತು ದೇವಾಲಯದ ಸಿಬ್ಬಂದಿ ವರ್ಗದವರಿಂದ ಪೂಜ್ಯ ಹೆಗ್ಗಡೆಯವರಿಗೆ ‘ಪೌರ ಸನ್ಮಾನ’ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದರು.

ಇದನ್ನು ಓದಿ:ಧರ್ಮಸ್ಥಳ ಸಂಘದಿಂದ ಮಾನವೀಯ ಕಾರ್ಯ, ಅಂಧರ ಬದುಕಿಗೆ ನೆಲೆ ಕಲ್ಪಿಸಿಕೊಟ್ಟು ತೋರಿದ ವಾತ್ಸಲ್ಯಕ್ಕೆ ಶ್ಲಾಘನೆ!

‘ಪೌರ ಸನ್ಮಾನ’ ಸ್ವೀಕರಿಸಿ ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಮಾತನಾಡಿದರು. ಧರ್ಮಸ್ಥಳಕ್ಕೆ ಆಗಮಿಸುವ ಪ್ರತಿಯೊಬ್ಬರೂ ನಮ್ಮ ಕ್ಷೇತ್ರವೆಂಬ ಭಾವನೆಯಿಂದ ಗಾಂಭೀರ್ಯದಿಂದ ವರ್ತಿಸುತ್ತಾರೆ. ಛಾವಡಿಯಲ್ಲಿ ಪ್ರತಿನಿತ್ಯ ವಿಭಿನ್ನ ವಿಚಾರಗಳ ಚರ್ಚೆ ಆಗುತ್ತದೆ. ಹೀಗಾಗಿ ಎಲ್ಲ ನಾವು ಸ್ವೀಕರಿಸುವ ರೀತಿಯಲ್ಲಿ ಭಿನ್ನವಾಗಿರುತ್ತದೆ ಎಂದರು.

ಕ್ಷೇತ್ರದಲ್ಲಿ ಬೀಡು, ದೇವಸ್ಥಾನ ಮತ್ತು ಊರವರು ಎಲ್ಲ ಒಂದೇ ಸೂತ್ರದಲ್ಲಿ ಬೆಸೆದಂತೆ ಒಗ್ಗಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇದು ಗೌರವ ಹಾಗೂ ಹೆಮ್ಮೆ ತರುವ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು. ಕ್ಷೇತ್ರದ ಸ್ವಾಮಿಯ ಅನುಗ್ರಹ ಹಾಗೂ ಖಾವಂದರ ಸಹಕಾರದೊಂದಿಗೆ ಜೀವನ ಕಷ್ಟ ಸುಖಗಳನ್ನು ಬದುಕಿನ ಬುಟ್ಟಿಯಲ್ಲಿ ತುಂಬಿಕೊಂಡಿದ್ದೇವೆ ಎಂದು ಡಾ. ಹೇಮಾವತಿ ವಿ. ಹೆಗ್ಗಡೆ ಹೇಳಿದರು.

ಯಾರು ಕುರ್ಚಿಯ ಬಗ್ಗೆ ವ್ಯಾಮೋಹ ಹೊಂದಿಲ್ಲದೆ ನಾಯಕತ್ವದ ಅರ್ಹತೆಯನ್ನು ಪಡೆದುಕೊಂಡಿರುತ್ತಾರೋ, ಅವರೇ ನಿಜವಾದ ನಾಯಕ. ಅಂತಹ ನಾಯಕತ್ವದ ಗುಣ ಖಾವಂದರಲ್ಲಿ ಇದೆ ಎಂದು ಚಿತ್ರನಟ ರಮೇಶ್ ಅರವಿಂದ್ ಹೇಳಿದರು. ಖಾವಂದರು ಲಕ್ಷಾಂತರ ಭಕ್ತರಿಗೆ ಅನ್ನದಾನ, ಅಭಯದಾನ, ಔಷಧಿದಾನ ಹಾಗೂ ಮಕ್ಕಳಿಗೆ ವಿದ್ಯಾದಾನವನ್ನು ನೀಡಿ ಸೇವೆಗೈಯುತ್ತಿದ್ದಾರೆ. ತನ್ನ ಜೀವನವನ್ನೇ ಸಮಾಜಸೇವೆಗಾಗಿ ಮೀಸಲಿಟ್ಟು ವೈಯಕ್ತಿಕ ಬದುಕಿನಲ್ಲೂ ಯಶಸ್ಸು ಕಂಡಿದ್ದಾರೆ ಎಂದು ಕೊಂಡಾಡಿದರು.

ಮಣಿಪಾಲದ ದಿವ್ಯಶ್ರೀ ಮತ್ತು ಬಳಗದವರ ಕಾವ್ಯಾಭಿವಂದನಾ ಮತ್ತು ಧರ್ಮಸ್ಥಳದ ಬಾಹುಬಲಿ ಸೇವಾ ಸಮಿತಿಯವರ ಆರತಿ ಹಾಡು, ಮಂಗಳ ಗೀತೆ, ಹಾಗೂ ಉಜಿರೆ ಎಸ್.ಡಿ.ಎಂ ಕಾಲೇಜಿನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ‘ಕಲಾವೈಭವ’ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಅರ್ಚನಾ ರಮೇಶ್ ಅರವಿಂದ್, ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ.ಹರ್ಷೆಂದ್ರ ಕುಮಾರ್ ಮತ್ತು ಸುಪ್ರೀಯಾ ಹರ್ಷೇಂದ್ರ ಕುಮಾರ್, ಡಾ.ನಿರಂಜನ್ ಕುಮಾರ್, ಪದ್ಮಲತಾ ನಿರಂಜನ್ ಕುಮಾರ್, ಶ್ರದ್ಧಾ ಅಮಿತ್ ಹಾಗೂ ಶಾಸಕ ಹರೀಶ್ ಪೂಂಜಾ ಉಪಸ್ಥಿತರಿದ್ದರು. ಡಾ.ಎಲ್.ಎಚ್ ಮಂಜುನಾಥ್ ಸ್ವಾಗತಿಸಿ, ಆನಂದ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ವರದಿ: ರಕ್ಷಾ ಕೋಟ್ಯಾನ್

ಎಸ್.ಡಿ.ಎಂ, ಉಜಿರೆ

ಚಿತ್ರ: ಶಶಿಧರ ನಾಯ್ಕ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 pm, Thu, 29 December 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ