ಅಕ್ರಮ ಜಾನುವಾರು ಸಾಗಾಟ; ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಐವರ ಬಂಧನ

| Updated By: Ganapathi Sharma

Updated on: Aug 17, 2023 | 10:50 PM

Illegal Cattle Trafficking; ಬಂಟ್ವಾಳದ ಅಳಿಕೆ ಎಂಬಲ್ಲಿ ಅನುಮತಿ ಪಡೆಯದೆ ಅಮಾನವೀಯ ರೀತಿಯಲ್ಲಿ ಐದು ಜಾನುವಾರುಗಳನ್ನು ಸಾಗಿಸಿದ ಆರೋಪದ ಮೇಲೆ ಐವರನ್ನು ವಿಟ್ಲ ಪೊಲೀಸರು ಬುಧವಾರ ಬಂಧಿಸಿದ್ದರು. ಮಂಜೇಶ್ವರ ಬಾಕ್ರಬೈಲು ಮೂಲದ ಇಬ್ರಾಹಿಂ ಅಲಿಯಾಸ್ ಮೋನು, ಮೂಸ, ಕನ್ಯಾನದ ಹಮೀದ್ ಅಲಿಯಾಸ್ ಜಲಾಲ್ ಮತ್ತು ಸಾಲೆತ್ತೂರಿನ ಹಮೀದ್ ಬಂಧಿತ ಆರೋಪಿಗಳು.

ಅಕ್ರಮ ಜಾನುವಾರು ಸಾಗಾಟ; ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಐವರ ಬಂಧನ
ಸಾಂದರ್ಭಿಕ ಚಿತ್ರ
Follow us on

ಮಂಗಳೂರು, ಆಗಸ್ಟ್ 17: ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿದ (Illegal Cattle Trafficking) ಆರೋಪದಡಿ ಗುಂಪೊಂದರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ (Vitla) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಅದೇ ಗುಂಪು ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಯುವಕರ ಗುಂಪೊಂದು ತಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿದೆ. ಮಂಜೇಶ್ವರ ನಿವಾಸಿ ಮೂಸ ಎಂಬವರು ದೂರಿನಲ್ಲಿ, ತಾನು ಸಾಲೆತ್ತೂರಿನ ಇಬ್ರಾಹಿಂ ಅಲಿಯಾಸ್ ಮೋನು, ಹಮೀದ್ ಅಲಿಯಾಸ್ ಜಲಾಲ್ ಮತ್ತು ಹಮೀದ್ ಎಂಬುವವರೊಂದಿಗೆ ಮುಳಿಯಕ್ಕೆ ಹೋಗಿ ಮಂಗಳವಾರ ಐದು ಜಾನುವಾರುಗಳನ್ನು ಖರೀದಿಸಿದೆ. ಬುಧವಾರ ಮುಂಜಾನೆ ಜಾನುವಾರುಗಳನ್ನು ಕಜೆಗೆ ಸಾಗಿಸುತ್ತಿದ್ದಾಗ ಜಯಪ್ರಶಾಂತ್, ಲಕ್ಷ್ಮೀಶ ಮತ್ತು ಇತರರು ಕಾರು ಮತ್ತು ದ್ವಿಚಕ್ರವಾಹನದೊಂದಿಗೆ ಸರಕು ಸಾಗಣೆ ವಾಹನವನ್ನು ಅಡ್ಡಗಟ್ಟಿ ಗೂಡ್ಸ್ ವಾಹನದಲ್ಲಿದ್ದ ನಾಲ್ವರನ್ನು ಹೊರಗೆಳೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬೇಸ್‌ಬಾಲ್ ಬ್ಯಾಟ್ ಮತ್ತು ಮಾರಣಾಂತಿಕ ಆಯುಧಗಳೊಂದಿಗೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಸ್ಥಳದಿಂದ ಹೊರಡುವ ಮೊದಲು ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ ಎಂದು ಮೂಸ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮೂಸ ಅವರು ನೀಡಿದ ದೂರಿನ ಆಧಾರದ ಮೇಲೆ ವಿಟ್ಲ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿದೆ.

ಇದನ್ನೂ ಓದಿ: ಮಂಗಳೂರು: ಆಸ್ಪತ್ರೆಯಲ್ಲಿ ದೈಹಿಕ ಸಂಪರ್ಕ ನಡೆಸುವುದನ್ನು ನೋಡಿದ ಅಪ್ರಾಪ್ತೆ ಮೇಲೆ ಅತ್ಯಾಚಾರ!

ಬಂಟ್ವಾಳದ ಅಳಿಕೆ ಎಂಬಲ್ಲಿ ಅನುಮತಿ ಪಡೆಯದೆ ಅಮಾನವೀಯ ರೀತಿಯಲ್ಲಿ ಐದು ಜಾನುವಾರುಗಳನ್ನು ಸಾಗಿಸಿದ ಆರೋಪದ ಮೇಲೆ ಐವರನ್ನು ವಿಟ್ಲ ಪೊಲೀಸರು ಬುಧವಾರ ಬಂಧಿಸಿದ್ದರು. ಮಂಜೇಶ್ವರ ಬಾಕ್ರಬೈಲು ಮೂಲದ ಇಬ್ರಾಹಿಂ ಅಲಿಯಾಸ್ ಮೋನು, ಮೂಸ, ಕನ್ಯಾನದ ಹಮೀದ್ ಅಲಿಯಾಸ್ ಜಲಾಲ್ ಮತ್ತು ಸಾಲೆತ್ತೂರಿನ ಹಮೀದ್ ಬಂಧಿತ ಆರೋಪಿಗಳು.

ಪೊಲೀಸರು ಐದು ಜಾನುವಾರು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಜಾನುವಾರು ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ 2020 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ