Train Service: ವಿಜಯಪುರ – ಮಂಗಳೂರು ರೈಲು ಸಂಚಾರ ಜೂನ್ 4ರ ವರೆಗೆ ರದ್ದು
ಹಾಸನ ಜಿಲ್ಲೆಯ ಕಡಗರವಳ್ಳಿ ಮತ್ತು ಯಡಕುಮೇರಿ ಮಧ್ಯೆ ರೈಲು ಹಳಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ - ಮಂಗಳೂರು ನಡುವೆ ಸಂಚರಿಸುವ ರೈಲು ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಮಂಗಳೂರು: ಹಾಸನ ಜಿಲ್ಲೆಯ ಕಡಗರವಳ್ಳಿ ಮತ್ತು ಯಡಕುಮೇರಿ ಮಧ್ಯೆ ರೈಲು ಹಳಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ – ಮಂಗಳೂರು (Vijayapura – Mangaluru Train) ನಡುವೆ ಸಂಚರಿಸುವ ರೈಲು ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ರೈಲು ಸಂಚಾರ ರದ್ದುಗೊಳಿಸುವುದರಿಂದ ಪ್ರಯಾಣಿಕರಿಗೆ ಕೆಲ ದಿನಗಳ ಕಾಲ ತೊಂದರೆಯಾಗಲಿದೆ. ಇದರಿಂದ, ಗೋವಾದಲ್ಲಿ ಕುಲೈಮ್-ವಾಸ್ಕೋ ಡ ಗಾಮಾ ಸರಕು ಸಾಗಣೆ ರೈಲು ಸಂಚಾರದ ಮೇಲೂ ಪರಿಣಾಮವಾಗಲಿದೆ.
ಮಂಗಳೂರು – ವಿಜಯಪುರ ನಡುವಣ ದೈನಂದಿನ ರೈಲು ಸಂಚಾರ ಮೇ 21 ರಿಂದ ಜೂನ್ 4 ರವರೆಗೆ ರದ್ದಾಗಲಿದೆ. ಇದು ಗೋವಾದಲ್ಲಿ ಮರ್ಜೋಡ ಮತ್ತು ವಾಸ್ಕೋ ಡ ಗಾಮಾ ವಿಭಾಗದಲ್ಲಿ ಸರಕುಗಳ ಸಾಗಾಟದ ಮೇಲೂ ಪರಿಣಾಮ ಬಿರಲಿದೆ. ಕುಲೇಮ್ – ವಾಸ್ಕೋ ಡ ಗಾಮಾ ರೈಲು ಮೇ 22, 24, 26 ರಂದು ರದ್ದಾಗಲಿದೆ. ಈ ರೈಲು ಸಂಚಾರವನ್ನು ಮೇ 28, 30, ಜೂನ್ 1 ಮತ್ತು 3 ರಂದೂ ರದ್ದಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಅದೇ ರೀತಿ, ಮಂಗಳೂರು-ವಿಜಯಪುರ ರೈಲು (07378) ಮೇ 22ರಿಂದ ಜುಲೈ 5ರವರೆಗೆ ಮಂಗಳೂರು ಬದಲು ಹಾಸನದಿಂದ ಸಂಚರಿಸಲಿದೆ.
ಇದನ್ನೂ ಓದಿ: Video: ಕೋಲಾರ ಬಳಿ ಹಳಿ ತಪ್ಪಿದ ರೈಲು: ಲೋಕೊ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ
ಈ ಮಧ್ಯೆ, ಬೆಳಗಾವಿ- ಸಿಕಂದರಾಬಾದ್ ನಡುವೆ ಸಂಚರಿಸುವ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲಿನ (07335) ಕಾಜಿಪೇಟ- ಮಣುಗೂರು ನಿಲ್ದಾಣಗಳ ನಡುವಣ ಸಂಚಾರವನ್ನು ಮೇ 20ರಿಂದ ಜೂನ್ 6ರವರೆಗೆ ಭಾಗಶಃ ರದ್ದುಗೊಳಿಸಲಾಗಿದೆ. ಅದೇ ರೀತಿ, ಮಣುಗೂರು-ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲಿನ (07336) ಮಣುಗೂರು ಮತ್ತು ಕಾಜಿಪೇಟ ನಿಲ್ದಾಣಗಳ ನಡುವಣ ಸಂಚಾರವನ್ನು ಮೇ 21ರಿಂದ ಜೂನ್ 7ರವರೆಗೆ ಭಾಗಶಃ ರದ್ದುಗೊಳಿಸಲಾಗಿದೆ ಎಂದು ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ