Train Service: ವಿಜಯಪುರ – ಮಂಗಳೂರು ರೈಲು ಸಂಚಾರ ಜೂನ್ 4ರ ವರೆಗೆ ರದ್ದು

ಹಾಸನ ಜಿಲ್ಲೆಯ ಕಡಗರವಳ್ಳಿ ಮತ್ತು ಯಡಕುಮೇರಿ ಮಧ್ಯೆ ರೈಲು ಹಳಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ - ಮಂಗಳೂರು ನಡುವೆ ಸಂಚರಿಸುವ ರೈಲು ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.

Train Service: ವಿಜಯಪುರ - ಮಂಗಳೂರು ರೈಲು ಸಂಚಾರ ಜೂನ್ 4ರ ವರೆಗೆ ರದ್ದು
ಸಾಂದರ್ಭಿಕ ಚಿತ್ರ

Updated on: May 22, 2023 | 2:51 PM

ಮಂಗಳೂರು: ಹಾಸನ ಜಿಲ್ಲೆಯ ಕಡಗರವಳ್ಳಿ ಮತ್ತು ಯಡಕುಮೇರಿ ಮಧ್ಯೆ ರೈಲು ಹಳಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ – ಮಂಗಳೂರು (Vijayapura – Mangaluru Train) ನಡುವೆ ಸಂಚರಿಸುವ ರೈಲು ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ರೈಲು ಸಂಚಾರ ರದ್ದುಗೊಳಿಸುವುದರಿಂದ ಪ್ರಯಾಣಿಕರಿಗೆ ಕೆಲ ದಿನಗಳ ಕಾಲ ತೊಂದರೆಯಾಗಲಿದೆ. ಇದರಿಂದ, ಗೋವಾದಲ್ಲಿ ಕುಲೈಮ್-ವಾಸ್ಕೋ ಡ ಗಾಮಾ ಸರಕು ಸಾಗಣೆ ರೈಲು ಸಂಚಾರದ ಮೇಲೂ ಪರಿಣಾಮವಾಗಲಿದೆ.

ಮಂಗಳೂರು – ವಿಜಯಪುರ ನಡುವಣ ದೈನಂದಿನ ರೈಲು ಸಂಚಾರ ಮೇ 21 ರಿಂದ ಜೂನ್ 4 ರವರೆಗೆ ರದ್ದಾಗಲಿದೆ. ಇದು ಗೋವಾದಲ್ಲಿ ಮರ್ಜೋಡ ಮತ್ತು ವಾಸ್ಕೋ ಡ ಗಾಮಾ ವಿಭಾಗದಲ್ಲಿ ಸರಕುಗಳ ಸಾಗಾಟದ ಮೇಲೂ ಪರಿಣಾಮ ಬಿರಲಿದೆ. ಕುಲೇಮ್ – ವಾಸ್ಕೋ ಡ ಗಾಮಾ ರೈಲು ಮೇ 22, 24, 26 ರಂದು ರದ್ದಾಗಲಿದೆ. ಈ ರೈಲು ಸಂಚಾರವನ್ನು ಮೇ 28, 30, ಜೂನ್ 1 ಮತ್ತು 3 ರಂದೂ ರದ್ದಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಅದೇ ರೀತಿ, ಮಂಗಳೂರು-ವಿಜಯಪುರ ರೈಲು (07378) ಮೇ 22ರಿಂದ ಜುಲೈ 5ರವರೆಗೆ ಮಂಗಳೂರು ಬದಲು ಹಾಸನದಿಂದ ಸಂಚರಿಸಲಿದೆ.

ಇದನ್ನೂ ಓದಿ: Video: ಕೋಲಾರ ಬಳಿ ಹಳಿ ತಪ್ಪಿದ ರೈಲು: ಲೋಕೊ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

ಈ ಮಧ್ಯೆ, ಬೆಳಗಾವಿ- ಸಿಕಂದರಾಬಾದ್‌ ನಡುವೆ ಸಂಚರಿಸುವ ಡೈಲಿ ಎಕ್ಸ್​​​ಪ್ರೆಸ್ ವಿಶೇಷ ರೈಲಿನ (07335) ಕಾಜಿಪೇಟ- ಮಣುಗೂರು ನಿಲ್ದಾಣಗಳ ನಡುವಣ ಸಂಚಾರವನ್ನು ಮೇ 20ರಿಂದ ಜೂನ್‌ 6ರವರೆಗೆ ಭಾಗಶಃ ರದ್ದುಗೊಳಿಸಲಾಗಿದೆ. ಅದೇ ರೀತಿ, ಮಣುಗೂರು-ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್‌ ವಿಶೇಷ ರೈಲಿನ (07336) ಮಣುಗೂರು ಮತ್ತು ಕಾಜಿಪೇಟ ನಿಲ್ದಾಣಗಳ ನಡುವಣ ಸಂಚಾರವನ್ನು ಮೇ 21ರಿಂದ ಜೂನ್‌ 7ರವರೆಗೆ ಭಾಗಶಃ ರದ್ದುಗೊಳಿಸಲಾಗಿದೆ ಎಂದು ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us