Special Train: ಇಂದೋರ್ – ಮಂಗಳೂರು, ಮುರುಡೇಶ್ವರ – ಯಶವಂತಪುರ ಮಧ್ಯೆ ವಿಶೇಷ ರೈಲು; ಇಲ್ಲಿದೆ ವಿವರ
ಇಂದೋರ್ ಹಾಗೂ ಮಂಗಳೂರು ನಡುವೆ ಪಶ್ಚಿಮ ರೈಲ್ವೆಯ ಸಹಕಾರದೊಂದಿಗೆ ಮೇ 11ರಂದು ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ ಎಂದು ಭಾರತೀಯ ರೈಲ್ವೆ ಬುಧವಾರ ತಿಳಿಸಿದೆ.
ಮಂಗಳೂರು: ಇಂದೋರ್ ಹಾಗೂ ಮಂಗಳೂರು ನಡುವೆ ಪಶ್ಚಿಮ ರೈಲ್ವೆಯ ಸಹಕಾರದೊಂದಿಗೆ ಮೇ 11ರಂದು ವಿಶೇಷ ರೈಲು (Special Train) ಸೌಲಭ್ಯ ಕಲ್ಪಿಸಲಾಗಿದೆ ಎಂದು ಭಾರತೀಯ ರೈಲ್ವೆ ಬುಧವಾರ ತಿಳಿಸಿದೆ. 09302 ಸಂಖ್ಯೆಯ ರೈಲು ಗುರುವಾರ ಬೆಳಿಗ್ಗೆ 11.15ಕ್ಕೆ ಇಂದೋರ್ (Indore) ನಿಂದ ಹೊರಡಲಿದ್ದು, ಶುಕ್ರವಾರ ಸಂಜೆ 4.15ಕ್ಕೆ ಮಂಗಳೂರು (Mangalore) ತಲುಪಲಿದೆ. ಈ ರೈಲಿಗೆ ದೀವಸ್, ಉಜ್ಜೈನ್ ಜಂಕ್ಷನ್, ನಗ್ಡಾ ಜಂಕ್ಷನ್, ಸೂರತ್, ವಲ್ಸದ್, ವಾಪಿ, ಪಾಲ್ಘರ್, ವಾಸವಿ ರಸ್ತೆ, ಪನ್ವೆಲ್, ರೋಹಾ, ರತ್ನಗಿರಿ, ರಾಜಪುರ ರಸ್ತೆ, ಕುಡಲ್, ತಿವಿಮ್, ಕರ್ಮಲಿ, ಮಡಗಾಂವ್ ಜಂಕ್ಷನ್, ಕಾರವಾರ ಹಾಗೂ ಉಡುಪಿ ಸ್ಟೇಷನ್ಗಳಲ್ಲಿ ನಿಲುಗಡೆ ಇರಲಿದೆ.
ಮುರುಡೇಶ್ವರ – ಯಶವಂತಪುರ ಮಧ್ಯೆ ವಿಶೇಷ ರೈಲು
ನೈಋತ್ಯ ರೈಲ್ವೆಯ ವಿಶೇಷ ಸಹಯೋಗದೊಂದಿಗೆ ಯಶವಂತಪುರ – ಮುರುಡೇಶ್ವರ ಹಾಗೂ ಮುರುಡೇಶ್ವರ – ಯಶವಂತಪುರ ಮಧ್ಯೆ ವಿಶೇಷ ರೈಲು (ಸಂಖ್ಯೆ 06587/06588) ಸಂಚರಿಸಲಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ರೈಲು ಸಂಖ್ಯೆ 06588 ಮುರುಡೇಶ್ವರದಿಂದ ಬುಧವಾರ ಮಧ್ಯಾಹ್ನ 1.30ಕ್ಕೆ ಹೊರಟು ಗುರುವಾರ ಬೆಳಿಗ್ಗೆ 4 ಗಂಟೆಗೆ ಯಶವಂತಪುರ ತಲುಪಲಿದೆ.
ಈ ರೈಲಿಗೆ ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೋಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರಸ್ತೆ, ಬೈಂದೂರು ಹಾಗೂ ಭಟ್ಕಳಗಳಲ್ಲಿ ನಿಲುಗಡೆ ಇರಲಿದೆ.
ಇದನ್ನೂ ಓದಿ: Karnataka Election: ವಿಧಾನಸಭೆ ಚುನಾವಣೆಗೆ ವಿಶೇಷ ರೈಲು, ಹೆಚ್ಚುವರಿ ಕೋಚ್; ವಿವರ ಇಲ್ಲಿದೆ
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೂಡ ನೈಋತ್ಯ ರೈಲ್ವೆ ಮೂರು ವಿಶೇಷ ರೈಲುಗಳನ್ನು ಆಯೋಜಿಸಿತ್ತು. ಈ ರೈಲುಗಳು ಈಗಾಗಲೇ ಪ್ರಯಾಣ ಬೆಳೆಸಿವೆ. ಇದೀಗ ಬೇಸಗೆ ರಜಾ ಅವಧಿಯ ನಿಮಿತ್ತ ಮಂಗಳೂರು – ಇಂದೋರ್ ಹಾಗೂ ಯಶವಂತಪುರ – ಮುರುಡೇಶ್ವರ ಮಧ್ಯೆ ವಿಶೇಷ ರೈಲು ಸೌಲಭ್ಯ ಕಲ್ಪಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ