ಮಂಗಳೂರಿನ ಹೃದಯಭಾಗದಲ್ಲಿ ಚೂರಿ ಇರಿದು ಹಾಡಹಗಲೇ ವ್ಯಕ್ತಿಯ ಕೊಲೆ, ಜುವೆಲ್ಲರಿ ಅಂಗಡಿಗೆ ಬೈಕ್ನಲ್ಲಿ ಬಂದು ಕುಕೃತ್ಯ
15 ಗ್ರಾಂ ಚೈನ್ ಮತ್ತು ಉಂಗುರದ ಬಗ್ಗೆ ರಫ್ ಸ್ಕೆಚ್ ಬರೆದಿರೊದು ಕೂಡ ಅಲ್ಲಿ ಸಿಕ್ಕಿದೆ. ಆದರಿಂದ ಯಾರು, ಯಾಕಾಗಿ ಕೊಲೆ ಮಾಡಿದ್ದಾರೆ ಅನ್ನೊದು ಗೊತ್ತಾಗ್ತಿಲ್ಲ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ರು.
ಮಂಗಳೂರಿನ (Mangalore) ಹೃದಯಭಾಗ ಹಂಪನಕಟ್ಟೆಯಲ್ಲಿನ ಜನರು ಬೆಚ್ಚಿಬಿದ್ದಿದ್ರು. ಅಲ್ಲಿ ಹಾಡಹಗಲೇ ಚೂರಿ ಇರಿದು ವ್ಯಕ್ತಿಯನ್ನು ಕೊಲೆ (Murder) ಮಾಡಲಾಗಿತ್ತು. ಹೌದು ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯಿಂದ (Miscreant) ಜುವೆಲ್ಲರಿ ಕೆಲಸಗಾರನ ಕೊಲೆಯಾಗಿದೆ. ಈ ಕೊಲೆಯ ಹಿಂದೆ ನೂರಾರು ಅನುಮಾನಗಳ ಹುಟ್ಟಿಕೊಂಡಿವೆ. ಆ ಕಡೆ ಷೋಕೇಸ್ ನಲ್ಲಿ ಚಿನ್ನ-ಬೆಳ್ಳಿ (Jewellery) ಇದ್ರೆ ಈ ಕಡೆ ನೆಲದ ಮೇಲೆಲ್ಲಾ ರಕ್ತದ ಕೋಡಿ ಹರಿದಿದೆ. ಹೌದು ಮಂಗಳೂರಿನ ಹೃದಯಭಾಗ ಹಂಪನಕಟ್ಟೆಯು ಶುಕ್ರವಾರ ಸಂಜೆ ಒಂದು ಕ್ಷಣ ಆತಂಕಕ್ಕೀಡಾಗಿತ್ತು. ಹಾಡಹಗಲೇ ವ್ಯಕ್ತಿಯ ಮೇಲೆ ಚೂರಿ ಇರಿತವಾಗಿತ್ತು.
ಮೇಲಿನ ಫೋಟೊದಲ್ಲಿರುವ ವ್ಯಕ್ತಿಯ ಹೆಸರು ರಾಘವೇಂದ್ರ ಆಚಾರ್. ಹಂಪನಕಟ್ಟೆಯಲ್ಲಿನ ಮಂಗಳೂರು ಜುವೆಲ್ಲರ್ಸ್ ನಲ್ಲಿ ಕಳೆದ ಏಳು ತಿಂಗಳಿಂದ ಕೆಲಸ ಮಾಡುತ್ತಿದ್ದ. ಈ ಅಂಗಡಿಯ ಮಾಲೀಕ ಕೇಶವ ಆಚಾರ್ ಪ್ರತಿದಿನ ಮಧ್ಯಾಹ್ನ ರಾಘವೇಂದ್ರನನ್ನು ಒಬ್ಬನನ್ನೇ ಬಿಟ್ಟು ಮನೆಗೆ ಹೋಗಿ ಬರುತ್ತಿದ್ದರು. ಇಂದು ಕೂಡ ಹಾಗೆಯೇ ಮನೆ ಕಡೆ ಹೋಗಿದ್ದಾರೆ. ಹೋಗಿ ವಾಪಾಸ್ ಬಂದಾಗ ಅವರ ಪಾರ್ಕಿಂಗ್ ಜಾಗದಲ್ಲಿ ಬೇರೆ ಯಾರೊ ಬೈಕ್ ನಿಲ್ಲಿಸಿ ಹೋಗಿದ್ದಾರೆ.
ತಕ್ಷಣ ರಾಘವೇಂದ್ರಗೆ ಕರೆ ಮಾಡಿದ್ದಾರೆ. ಆ ಕಡೆ ರಾಘವೇಂದ್ರ ತನಗೆ ಯಾರೊ ಚೂರಿ ಹಾಕುತ್ತಿದ್ದಾರೆ ಅಂತಾ ಹೇಳಿದ್ದಾರೆ. ತಕ್ಷಣ ಜುವೆಲ್ಲರಿ ಬಳಿ ಹೋಗಿ ಬಾಗಿಲು ತೆಗೆದಾಗ ಹೆಲ್ಮೆಟ್ ಮತ್ತು ಮಾಸ್ಕ್ ಹಾಕಿದ ಅಪರಿಚಿತ ವ್ಯಕ್ತಿ ಅಲ್ಲಿಂದ ಹೊರಬಂದು ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಘವೇಂದ್ರನನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಿಲಾಗಿದೆ. ಆದ್ರೆ ಅಷ್ಟೋತ್ತಿಗೆ ರಾಘವೇಂದ್ರ ಆಚಾರ್ ಸಾವನ್ನಪ್ಪಿದ್ರು.
ಇನ್ನು ಆರೋಪಿ ಜುವೆಲ್ಲರಿ ಶಾಪ್ ಒಳಹೋಗಿ ಅರ್ಧ ಗಂಟೆ ಕಾಲ ಇರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಒಳಗೆ ಹೋದ ನಂತರ ಏನಾಯ್ತು ಅನ್ನೊದು ಗೊತ್ತಾಗಿಲ್ಲ. ಆದ್ರೆ ಶೋಕೇಸ್ ನಲ್ಲಿ ಇಟ್ಟಿದ್ದ ಕೆಲ ಚಿನ್ನಾಭರಣಗಳು ನಾಪತ್ತೆಯಾಗಿರೋದು ಕಂಡುಬಂದಿದೆ.
ಅಲ್ಲದೇ 15 ಗ್ರಾಂ ಚೈನ್ ಮತ್ತು ಉಂಗುರದ ಬಗ್ಗೆ ರಫ್ ಸ್ಕೆಚ್ ಬರೆದಿರೊದು ಕೂಡ ಅಲ್ಲಿ ಸಿಕ್ಕಿದೆ. ಆದರಿಂದ ಯಾರು, ಯಾಕಾಗಿ ಕೊಲೆ ಮಾಡಿದ್ದಾರೆ ಅನ್ನೊದು ಗೊತ್ತಾಗ್ತಿಲ್ಲ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ರು.
ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇನ್ನು ಚಿನ್ನಾಭರಣ ಕದಿಯೊ ಸಲುವಾಗಿ ಈ ಕೊಲೆ ನಡೆದಿದೆಯಾ, ಇಲ್ಲವೇ ಕೊಲೆಯ ಹಿಂದೆ ಬೇರೆ ಕಾರಣ ಇದ್ಯಾ? ಅನ್ನೊದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ 9, ಮಂಗಳೂರು