Mangaluru: ಕೋಟಿ ಚೆನ್ನಯ್ಯರ ಕಟಕಟೆ ತಲುಪಿದ ಕೋಳಿ ಅಂಕ ವಿವಾದ: ದೈವ ಕೊಟ್ಟ ಅಭಯವೇನು?

ಮಂಗಳೂರಿನ ಕಂಕನಾಡಿ ಗರೋಡಿ ದೈವಸ್ಥಾನದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸರು ತಡೆ ಒಡ್ಡಿದ್ದು, ಗರೋಡಿ ಆಡಳಿತ ಸಮಿತಿ ಕೋಟಿ ಚೆನ್ನಯ್ಯ ದೈವಗಳ ಮೊರೆ ಹೋಗಿದೆ. ಜೂಜು ಮತ್ತು ಪ್ರಾಣಿ ಹಿಂಸೆ ನೆಪವೊಡ್ಡಿ ನಿಷೇಧಿಸಿದ್ದರೂ, ದೈವಗಳು ಕೋಳಿ ಅಂಕ ನಡೆಯಲಿದೆ ಎಂದು ಅಭಯ ನೀಡಿವೆ. 150 ವರ್ಷಗಳ ಇತಿಹಾಸವಿರುವ ಈ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಬಾರದು ಎಂದು ಭಕ್ತರು ಆಗ್ರಹಿಸಿದ್ದಾರೆ.

Mangaluru: ಕೋಟಿ ಚೆನ್ನಯ್ಯರ ಕಟಕಟೆ ತಲುಪಿದ ಕೋಳಿ ಅಂಕ ವಿವಾದ: ದೈವ ಕೊಟ್ಟ ಅಭಯವೇನು?
ಕೋಳಿ ಅಂಕ (ಸಾಂದರ್ಭಿಕ ಚಿತ್ರ)
Edited By:

Updated on: Jan 04, 2026 | 10:21 AM

ಮಂಗಳೂರು, ಜನವರಿ 04: ಕಾನೂನಿನ ನೆಪವೊಡ್ಡಿ ಪ್ರಸಿದ್ಧ ಕಂಕನಾಡಿ ಗರೋಡಿ ದೈವಸ್ಥಾನದ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಖಾಕಿ ತಡೆ ವಿಚಾರವೀಗ ಕೋಟಿ ಚೆನ್ನಯ್ಯರ ಕಟಕಟೆ ತಲುಪಿದೆ. ಜೂಜು, ಪ್ರಾಣಿ ಹಿಂಸೆ ಕಾರಣ ನೀಡಿ ಕೋಳಿ ಅಂಕಕ್ಕೆ ಮಂಗಳೂರು ಪೊಲೀಸರು ಅನುಮತಿ ನಿರಾಕರಣೆ ಬೆನ್ನಲ್ಲೇ ಗರೋಡಿ ಆಡಳಿತ ಸಮಿತಿ ದೈವಗಳ ಮೊರೆ ಹೋಗಿದೆ. ಈ ವೇಳೆ ಅಭy ನೀಡಿರುವ ದೈವ, ‘ಹಿಂದೆ ಕೋಳಿ ಅಂಕ ನಿಲ್ಲಲು ಬಿಟ್ಟಿಲ್ಲ, ಮುಂದೆಯೂ ಬಿಡುವುದಿಲ್ಲ’ ಎಂದು ತಿಳಿಸಿದೆ.

ವಿಟ್ಲ ಕೇಪು ಉಳ್ಳಾಲ್ತಿ ಬಳಿಕ ಇದೀಗ, 150 ವರ್ಷಗಳ ಇತಿಹಾಸವಿರುವ ಕಂಕನಾಡಿ ಗರೋಡಿ ಜಾತ್ರೆಯ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಅನುಮತಿ ನಿರಾಕರಿಸಲಾಗಿದೆ. ಹಲವು ಬಾರಿ ಮನವಿ, ಮನವರಿಕೆ ಮಾಡಿದರೂ ಪೊಲೀಸರು ಒಪ್ಪಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಗರೋಡಿ ಆಡಳಿತ ಸಮಿತಿ ಕೋಟಿ ಚೆನ್ನಯ್ಯ ದೈವಗಳ ಮೊರೆ ಹೋಗಿದೆ. ದೈವವೇ ದಾರಿ ತೋರಿಸಿಕೊಡಬೇಕು ಎಂದು ಪ್ರಾರ್ಥನೆ ಸಲ್ಲಿಸಿದೆ.
ಯಾಕೆ ಈ ಬಾರಿ ಕೋಳಿ ಅಂಕ ನಡೆದಿಲ್ಲ ಎಂದು ದರ್ಶನದ ವೇಳೆ ದೈವಗಳು ಪ್ರಶ್ನೆ ಮಾಡಿದ್ದು, ಪೊಲೀಸ್‌ ಇಲಾಖೆಯಿಂದ ಕೋಳಿ ಅಂಕಕ್ಕೆ ತಡೆ ಎಂದು ಭಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಳಿ ಅಂಕ; ಕಾಂಗ್ರೆಸ್ ಶಾಸಕ ಆಯ್ತು ಈಗ ಬಿಜೆಪಿ ಮಾಜಿ ಶಾಸಕ, ಜಿಲ್ಲಾಧ್ಯಕ್ಷ ಸೇರಿ 27 ಜನರ ವಿರುದ್ಧ ಕೇಸ್

ಇನ್ನು ಕೋಳಿ ಅಂಕಕ್ಕೆ ತಡೆ ವಿಚಾರವಾಗಿ ಗರಡಿ ಕ್ಷೇತ್ರದ ಟ್ರಸ್ಟಿ ಚಂದ್ರನಾಥ್ ಅತ್ತಾವರ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಾರ್ಣಿಕದ ಕತೆ ಬಹಳ ಇದ್ದು,1997ರ ಆಯೋಧ್ಯೆ ರಾಮ ಮಂದಿರ ವಿವಾದದ ಕರ್ಫ್ಯೂ ವೇಳೆಯೂ ಇಲ್ಲಿ ಕೋಳಿ ಅಂಕ ನಡೆಸಲಾಗಿತ್ತು. ಕೊರೊನಾ ಸಂದರ್ಭದಲ್ಲೂ ಆಯೋಜಿಸಲಾಗಿತ್ತು. ದೈವಗಳಿಗೆ ಪ್ರಾರ್ಥನೆ ಬೆನ್ನಲ್ಲೆ ಎಲ್ಲಾ ಅಡೆತಡೆಗಳು ಪರಿಹಾರವಾಗಿತ್ತು. ಇದೀಗ ಮತ್ತೆ ಕೋಳಿ ಅಂಕವನ್ನ ಸುಸೂತ್ರವಾಗಿ ನಡೆಸೋದಾಗಿ  ದೈವ ನುಡಿ ಕೊಟ್ಟಿದೆ. ಜೂಜು ನಡೆದರೆ ಪೊಲೀಸರು ಕ್ರಮ ಕೈಗೊಳಲಿ. ಆದ್ರೆ ಭಕ್ತರ ಧಾರ್ಮಿಕ ನಂಬಿಕೆಗೆ ಅಡ್ಡಿಪಡಿಸಬಾರದು ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:21 am, Sun, 4 January 26