Kumble Sundar Rao: ಯಕ್ಷಗಾ‌ನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ಇನ್ನಿಲ್ಲ

TV9kannada Web Team

TV9kannada Web Team | Edited By: TV9 SEO

Updated on: Nov 30, 2022 | 9:57 AM

ಯಕ್ಷಗಾ‌ನ ಕಲಾವಿದ, ಮಾಜಿ ಶಾಸಕ ಕುಂಬಳೆ ಸುಂದರ್ ರಾವ್(90) ಅವರು ವಯೋಸಹಜ ಅನಾರೋಗ್ಯ ಕಾರಣದಿಂದ ವಿಧಿವಶರಾಗಿದ್ದಾರೆ.

Kumble Sundar Rao: ಯಕ್ಷಗಾ‌ನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ಇನ್ನಿಲ್ಲ
ಕುಂಬಳೆ ಸುಂದರ್ ರಾವ್

ಮಂಗಳೂರು: ಯಕ್ಷರಂಗದ ಅಪ್ರತಿಮ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್(88) ಅವರು ವಯೋಸಹಜ ಅನಾರೋಗ್ಯ ಕಾರಣದಿಂದ ವಿಧಿವಶರಾಗಿದ್ದಾರೆ. ಯಕ್ಷಗಾನ ಮತ್ತು ತಾಳ-ಮದ್ದಳೆ ಕಲಾವಿದರೂ ಆಗಿದ್ದ ಸುಂದರ್ ರಾವ್ (Kumble Sundar Rao), ಮಂಗಳೂರಿನ ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿಯೂ ಸೇವೆ‌ ಸಲ್ಲಿಸಿದ್ದರು. ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 20 ರಲ್ಲಿ ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ ಕುಂಬ್ಳೆ ಸುಂದರ್ ರಾವ್ ಅವರು 1994 ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ‌ ಸಲ್ಲಿಸಿದ್ದಾರೆ. ಜೊತೆಗೆ ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂದಲೇ ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆ‌ಗೆ ಪಾತ್ರರಾಗಿದ್ದಾರೆ.

ಸುಂದರ್ ರಾವ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಇವರು ಇಬ್ಬರು ಪುತ್ರರು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರ ಗುರುವಾರ ನೆರವೇರಲಿದೆ. ಮಂಗಳೂರು ಪಂಪ್ವೆಲ್ ಬಳಿ ಇರುವ ಅವರ ಮನೆಯಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿ

ಯಕ್ಷಗಾನಕ್ಕಾಗಿ ಕೇರಳದ ಕುಂಬಳೆಯಿಂದ ಕರ್ನಾಟಕ್ಕೆ ಬಂದವರು. ತಮ್ಮ ಮಾತಿನ ಮೋಡಿಯಿಂದ ಎಂಥವರನ್ನೂ ತಲೆದೂಗಉವಂತೆ ಮಾಡುತ್ತಿದ್ದರು. ಬಿಜೆಪಿಯ ಹಿರಿಯ ನಾಯಕ ಲಾಲಕೃಷ್ಣ ಅಡ್ವಾಣಿ ಅವರು ರಥಯಾತ್ರೆ ನಡೆಸಿದಾಗ ಕುಂಬಳೆ ಅವರು ಬಿಜೆಪಿ ಪರ ಮಾಡುತ್ತಿದ್ದ ಭಾಷಣಗಳು ಜನಪ್ರಿಯವಾಗಿದ್ದವು. ಇದನ್ನು ಗಮನಿಸಿದ್ದ ಬಿಜೆಪಿ 1994ರ ವಿಧಾನಸಭೆ ಚುನಾವಣೆಗೆ ಸುರತ್ಕಲ್ ಕ್ಷೇತ್ರದಿಂದ ಸ್ಪರ್ಧಿಸಲು ಕುಂಬಳೆ ಅವರಿಗೆ ಟಿಕೆಟ್ ನೀಡಿತ್ತು. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್​ನ ವಿಜಯಕುಮಾರ್ ಶೆಟ್ಟಿ ವಿರುದ್ಧ 4 ಸಾವಿರ ಮತಗಳ ಅಂತರದಿಂದ ಕುಂಬಳೆ ಗೆದ್ದಿದ್ದರು. ಆದರೆ 1999ರ ಚುನಾವಣೆಯಲ್ಲಿ ಅದೇ ಶೆಟ್ಟಿ ವಿರುದ್ಧ ಕುಂಬಳೆ ಪರಾಭವಗೊಂಡರು. ನಂತರ ಅವರಿಗೆ ಶಾಸಕರಾಗುವ ಅವಕಾಶ ಸಿಗಲಿಲ್ಲ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ರಂಗಮಂದಿರವನ್ನು ಯಕ್ಷಗಾನ ಪ್ರದರ್ಶನಕ್ಕೆ ಒದಗಿಸಬೇಕು ಎಂದು ಹೋರಾಡಿದವರಲ್ಲಿ ಕುಂಬಳೆ ಸುಂದರ್​ ರಾವ್ ಪ್ರಮುಖರು. ಅವರ ಬದುಕಿನ ಕಥೆ ‘ಸುಂದರ ಕಾಂಡ’ ಹೆಸರಿನಲ್ಲಿ ಪ್ರಕಟವಾಗಿದೆ. ಯಕ್ಷಗಾನ ಅವ ಜೀವವಾಗಿತ್ತು. ‘ಯಕ್ಷಗಾನವನ್ನು ಆರ್ಥಿಕ ದೃಷ್ಟಿಯಿಂದ ನೋಡದೆ ಮಾನಸಿಕ ಸಮತೊಲನ ದೃಷ್ಟಿಯಿಂದ ಎಲ್ಲರೂ ನಮ್ಮದು ಎಂದುಕೊಳ್ಳಬೇಕು. ಯಕ್ಷಗಾನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ನಮಗೆಲ್ಲರಿಗೂ ಇದೆ. ಯಕ್ಷಗಾನ ಅವರದ್ದಲ್ಲ, ನನ್ನದಲ್ಲ ಎಂಬ ಭಾವನೆ ಸಲ್ಲದು. ಯಕ್ಷಗಾನವು ನಮ್ಮೆಲ್ಲರಿಗೂ ಸೇರಿದ್ದು ಎಂಬ ಭಾವನೆಯಿಂದ ಮುಂದುವರಿಯಬೇಕು’ ಎಂದು ಅವರು ಆಗಾಗ ಹೇಳುತ್ತಿದ್ದರು.

ಇದನ್ನೂ ಓದಿ: Vikram Kirloskar: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಹೃದಯಾಘಾತದಿಂದ ನಿಧನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada