ಮಳಲಿ ದರ್ಗಾ ವಿವಾದ: ವಿಎಚ್ ಪಿ ಸಲ್ಲಿಸಿದ ಅರ್ಜಿ ವಜಾಗೊಳಿಸುವಂತೆ ವಾದ ಮಂಡಿಸುತ್ತಿರುವ ದರ್ಗಾ ಪರ ವಕೀಲರು
ಮಂಗಳೂರು ಕೋರ್ಟ್ ನಲ್ಲಿ ಮಳಲಿ ದರ್ಗಾ ವಿವಾದಕ್ಕೆ ಸಂಬಂಧಿಸಿದಂತೆ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಲಯದಲ್ಲಿ ವಿಚಾರಣೆ ಆರಂಭವಾಗಿದೆ. ದರ್ಗಾ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ
ಮಂಗಳೂರು: ಮಂಗಳೂರು (Managalore) ಕೋರ್ಟ್ ನಲ್ಲಿ ಮಳಲಿ (Malali) ದರ್ಗಾ (Dargh) ವಿವಾದಕ್ಕೆ ಸಂಬಂಧಿಸಿದಂತೆ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಲಯದಲ್ಲಿ ವಿಚಾರಣೆ ಆರಂಭವಾಗಿದೆ. ದರ್ಗಾ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ ದರ್ಗಾ ನವೀಕರಣ ಮಾಡದಂತೆ ಕೋರ್ಟಿಗೆ ಅರ್ಜಿ ಹಾಕಿತ್ತು. ವಿಎಚ್ ಪಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸುವಂತೆ ದರ್ಗಾ ಸಮಿತಿ ಅರ್ಜಿ ಹಾಕಿದೆ.
ಸರ್ವೇ ಮನವಿಗೆ ಮಸೀದಿ ಕಮಿಟಿ ವಕೀಲರು ತೀವ್ರ ಆಕ್ಷೇಪವ್ಯಕ್ತಪಡಿಸುತ್ತಿದ್ದಾರೆ. ಮಳಲಿ ಮಸೀದಿಗೆ ನೂರಾರು ವರ್ಷಗಳ ಇತಿಹಾಸವಿದೆ. ಹಲವು ವರ್ಷಗಳಿಂದ ಮುಸ್ಲಿಮರು ಪ್ರಾರ್ಥನೆ ಮಾಡ್ತಿದಾರೆ. ಜಾಗದಲ್ಲಿ ದಫನ್ ಭೂಮಿ ಇದ್ದು, ಎಲ್ಲದಕ್ಕೂ ದಾಖಲೆ ಇದೆ. ಸ್ಥಳೀಯ ಪಂಚಾಯಿತಿ ಒಪ್ಪಿಗೆ ಪಡೆದು ನವೀಕರಿಸಲಾಗುತ್ತಿದೆ. ಇದು ವಕ್ಫ್ ಆಸ್ತಿ, ಸರ್ಕಾರದ ದಾಖಲೆಯಲ್ಲೂ ಉಲ್ಲೇಖವಿದೆ. ಮಳಲಿ ಮಸೀದಿ ಜ್ಞಾನವಾಪಿ ಪ್ರಕರಣಕ್ಕೆ ಹೋಲಿಕೆ ಸರಿಯಲ್ಲ. ಕೋರ್ಟ್ ಕಮಿಷನರ್ ಸರ್ವೆ ಮಾಡುವ ಮನವಿ ತಿರಸ್ಕರಿಸಿ ಎಂದು ನ್ಯಾಯಾಲಯಕ್ಕೆ ಮಸೀದಿ ಪರ ವಕೀಲ ಎಂ.ಪಿ.ಶೆಣೈ ಮನವಿ ಮಾಡಿದ್ದಾರೆ.
ಇದನ್ನು ಓದಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ ಸೌರವ್ ಗಂಗೂಲಿ?; ಸಂದೇಹ ಹುಟ್ಟುಹಾಕಿದ ಟ್ವೀಟ್
ಮಳಲಿಯ ದರ್ಗಾದಲ್ಲಿ ದೇಗುಲದ ಕುರುಹು ಪತ್ತೆಯಾಗಿರುವ ಹಿನ್ನೆಲೆ ಹಿಂದೂ ಸಂಘಟನೆಗಳು ಮಸೀದಿಯನ್ನು ಬಿಟ್ಟುಕೊಡುವಂತೆ ಒತ್ತಾಯಿಸಿವೆ. ಈ ಬೆನ್ನಲ್ಲೆ ಮಳಲಿಯ ದರ್ಗಾ ಆಡಳಿತ ಮಂಡಳಿ ಮಂಗಳೂರಿನ 3ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ತಾಂತ್ರಿಕ ಕಾರಣ ನೀಡಿ ಹಿಂದೂ ಸಂಘಟನೆಗಳ ಅರ್ಜಿ ವಜಾಕ್ಕೆ ಕೋರಿ ಮಸೀದಿ ಆಡಳಿತ ಅರ್ಜಿ ಹಾಕಿತ್ತು. ಅರ್ಜಿ ವಜಾ ಬಗ್ಗೆ ಜೂನ್ 1ರಂದು ಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಮಳಲಿಯ ದರ್ಗಾ ಪ್ರದೇಶ ವಕ್ಫ್ ಆಸ್ತಿಯಾಗಿರುವ ಹಿನ್ನೆಲೆ ಹಿಂದೂ ಸಂಘಟನೆಗಳ ಅರ್ಜಿ ವಜಾಕ್ಕೆ ಮನವಿ ಮಾಡಿದೆ.
ವಿವಾದ ಏನು? ಮಂಗಳೂರಿನಲ್ಲಿ ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಹಿಂದೂ ಶೈಲಿಯ ದೇವಸ್ಥಾನ ಪತ್ತೆಯಾಗಿತ್ತು. ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾದಲ್ಲಿ ಗುಡಿಯೊಂದು ಪತ್ತೆಯಾಗಿತ್ತು. ನವೀಕರಣದ ವೇಳೆ ದರ್ಗಾ ಮುಂಭಾಗ ಕೆಡವಲಾಗಿತ್ತು. ದರ್ಗಾದ ಹಿಂಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿತ್ತು. ಈ ಬೆನ್ನಲ್ಲೇ ಹಿಂದೂ ಸಂಘಟನೆಗಳು ಜಾಗ ಬಿಟ್ಟುಕೊಡುವಂತೆ ಆಗ್ರಹಿಸಿವೆ.
ಇದನ್ನು ಓದಿ: ಭ್ರಷ್ಟಾಚಾರ ಬಯಲಿಗೆಳೆದು 7 ಬಾರಿ ಗುಂಡೇಟು ತಿಂದಿದ್ದ ಅಧಿಕಾರಿ UPSCಯಲ್ಲಿ ಪಾಸ್
ಕೇರಳದ ಪ್ರಖ್ಯಾತ ಜ್ಯೋತಿಷಿ ಹೇಳಿದ್ದೇನು? ವಿವಾದಕ್ಕೆ ಕಾರಣವಾಗಿದ್ದ ಮಳಲಿಯ ಮಸೀದಿ ಸ್ಥಳದಲ್ಲಿ ಮೇ 25ಕ್ಕೆ ತಾಂಬೂಲ ಪ್ರಶ್ನೆ ನಡೆಸಲಾಗಿದೆ. ತಾಂಬೂಲ ಪ್ರಶ್ನೆ ವೇಳೆ ಕೇರಳದ ಪ್ರಖ್ಯಾತ ಜ್ಯೋತಿಷಿ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಕೆಲ ಮಾಹಿತಿ ನೀಡಿದ್ದು, ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಎಂದಿದ್ದಾರೆ. ಸಾಮಾನ್ಯ ತಾಂಬೂಲ ಪ್ರಶ್ನೆಯಲ್ಲಿ ಪೂರ್ಣವಾದ ಚೈತನ್ಯವಿದೆ. ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರು ಇರುವುದು ನಿಜ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು ಎಂದು ತಿಳಿಯುತ್ತೆ. ಇದು ದೈವ ಸಾನ್ನಿಧ್ಯ ಇದ್ದಂತಹ ಸ್ಥಳ. ತಾಂಬೂಲ ಪ್ರಶ್ನೆಯಲ್ಲಿ ಹಿಂದೂ ಧಾರ್ಮಿಕ ಸ್ಥಳ ಎಂದು ಉತ್ತರ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Wed, 1 June 22