ದಕ್ಷಿಣ ಕನ್ನಡ: ಪ್ರವೀಣ್ ನೆಟ್ಟಾರ ಹತ್ಯೆ ಮಾಸುವ ಮುನ್ನವೇ ಮಂಗಳೂರಿನಲ್ಲಿ ಮತ್ತೊಬ್ಬ ಯುವಕನ ಕೊಲೆ
ಮೂವರು ದುಷ್ಕರ್ಮಿಗಳು ಅಟ್ಟಾಡಿಸಿ ಫಾಜಿಲ್ ಮೇಲೆ ಹಲ್ಲೆಗೈದಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ಹಿನ್ನೆಲೆ ಗಂಭೀರ ಗಾಯಗೊಂಡಿದ್ದ ಫಾಜಿಲ್ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ರೂ ಫಾಜಿಲ್ ಸುರತ್ಕಲ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಂಗಳೂರು: ಪ್ರವೀಣ್ ನೆಟ್ಟಾರ(Praveen Nettar) ಹತ್ಯೆ ಪ್ರಕರಣ ಮಾಸುವ ಮುನ್ನವೇ ಮಂಗಳೂರಿನಲ್ಲಿ ಮತ್ತೊಂದು ಕೊಲೆ(Murder) ನಡೆದಿದೆ. ಗುರುವಾರ ರಾತ್ರಿ 8 ಗಂಟೆಗೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳೂರಿನಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಮಂಗಳೂರು ನಗರದ ಹೊರವಲಯದಲ್ಲಿರುವ ಸುರತ್ಕಲ್‌ನ ಎಸ್.ಕೆ.ಮೊಬೈಲ್ಸ್ ಅಂಗಡಿ ಬಳಿ ಫಾಜಿಲ್ ಮಂಗಲಪೇಟೆ(23) ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಾಯಾಳು ಫಾಜಿಲ್ರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೊನ್ನೆ ರಾತ್ರಿ ಪ್ರವೀಣ್ ಹತ್ಯೆ, ಈಗ ಫಾಜಿಲ್ ಹತ್ಯೆ ನಡೆದಿದೆ. ಸದ್ಯ ಸ್ಥಳಕ್ಕೆ ಸುರತ್ಕಲ್ ಠಾಣೆಯ ಪೊಲೀಸರು ಹಾಗೂ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸುರತ್ಕಲ್‌ನಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಂಗಳೂರಿನ ಸುರತ್ಕಲ್‌ಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ರವಾನಿಸಲಾಗಿದೆ. ಮೂವರು ದುಷ್ಕರ್ಮಿಗಳು ಅಟ್ಟಾಡಿಸಿ ಫಾಜಿಲ್ ಮೇಲೆ ಹಲ್ಲೆಗೈದಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ಹಿನ್ನೆಲೆ ಗಂಭೀರ ಗಾಯಗೊಂಡಿದ್ದ ಫಾಜಿಲ್ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ರೂ ಫಾಜಿಲ್ ಸುರತ್ಕಲ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದು ಮೊನ್ನೆಯ ಕೊಲೆಗೆ ಪ್ರತಿಕಾರದಂತೆ ಕಾಣುತ್ತಿದೆ
ಮಾಜಿ ಶಾಸಕ ಮೊಯಿದ್ದಿನ್ ಭಾವಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಟಿವಿ9 ಜೊತೆ ಮಾತನಾಡಿದ್ದು, ಇದು ಮೊನ್ನೆಯ ಕೊಲೆಗೆ ಪ್ರತಿಕಾರದಂತೆ ಕಾಣುತ್ತಿದೆ. ಪ್ರವೀಣ್ ಕೊಲೆಗೆ ಈ ಕೊಲೆಯು ಪ್ರತಿಕಾರದಂತಿದೆ ಎಂದರು.
Published On - 9:12 pm, Thu, 28 July 22