ದಕ್ಷಿಣ ಕನ್ನಡ: ಮಂಗಳೂರು ಪಬ್ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರು ತಡೆದಿರುವ ವಿಚಾರವಾಗಿ ವಿಎಚ್ಪಿ ಮುಖಂಡರು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ರನ್ನು ಭೇಟಿಯಾಗಿದ್ದಾರೆ. ಕರ್ನಾಟಕ ದಕ್ಷಿಣ ಪ್ರಾಂತ ವಿಶ್ವಹಿಂದೂ ಪರಿಷತ್ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಸೇರಿದಂತೆ ಹಿಂದೂ ಮುಖಂಡರು ಭೇಟಿಯಾಗಿದ್ದು, ಘಟನೆ ಸಂಬಂಧ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಮುಖಂಡರು ವಿವರಣೆ ನೀಡುತ್ತಿದ್ದಾರೆ.
ಅವಧಿ ಮೀರಿ ಕಾರ್ಯನಿರ್ವಹಿಸುತ್ತಿರುವ ಪಬ್ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಡ್ರಗ್ ಧಂದೆ ಮತ್ತು ಕಾಲೇಜು ವಿದ್ಯಾರ್ಥಿಗಳ ಮೇಲೆ ಕಣ್ಣಿಡಲು ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿ ಪೊಲೀಸ್ ಇಲಾಖೆ ಸೂಚನೆ ನೀಡುವುದಾಗಿ ಶಾಸಕ ಕಾಮತ್ ಭರವಸೆ ನೀಡಿದ್ದಾರೆ.
ಈ ಸಂಬಂಧ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಪಬ್ ದಾಳಿ ಮಾಡುವ ಮನಸ್ಸು ಅವರಿಗೆ ಇರಲಿಲ್ಲ, ಅದನ್ನು ಸಂಘಟನೆ ಮಾಡಿಲ್ಲ. ಪೊಲೀಸ್ ಇಲಾಖೆ ಮೂಲಕ ಅಪ್ರಾಪ್ತ ವಯಸ್ಸಿನವರಿಗೆ ಬುದ್ದಿ ಹೇಳಿದ್ದಾರೆ. ಸಂಘಟನೆಯವರು ಈ ಮೂಲಕ ಪೊಲೀಸ್ ಇಲಾಖೆ ಜೊತೆ ಹೋಗಿದ್ದಾರೆ. ವಿದ್ಯಾರ್ಥಿಗಳು ಯಾವತ್ತೂ ಮನೆಯವರ ಒಪ್ಪಿಗೆ ಜೊತೆ ಈ ಕೆಲಸ ಮಾಡಲ್ಲ ಎಂದರು.
ಮನೆಯವರು ಸಂಘಟನೆಯವರ ಗಮನಕ್ಕೆ ಇಂಥದ್ದನ್ನ ತಂದಿದ್ದಾರೆ. ಹೀಗಾಗಿ ದುಷ್ಟಟಕ್ಕೆ ಬಲಿಯಾದಾಗ ವಿಎಚ್ಪಿ ಹೋಗಿ ಮನವಿ ಮಾಡಬೇಕೆಂದಿಲ್ಲ. ಆದರೆ ಜವಾಬ್ದಾರಿಯಿಂದ ವಿಎಚ್ಪಿಯವರು ಪೊಲೀಸರ ಮೂಲಕ ಹೋಗಿದ್ದಾರೆ. ಅವರು ದಾಳಿ ಮಾಡಬೇಕಿದ್ದಾರೆ ಪೊಲೀಸರಿಗೆ ಮುಂಚಿತವಾಗಿ ತಿಳಿಸ್ತಾ ಇರಲಿಲ್ಲ. ಲವ್ ಜಿಹಾದ್, ಡ್ರಗ್ ಚಟಕ್ಕೆ ಬಲಿಯಾಗೋ ವಾತಾವರಣ ಸೃಷ್ಟಿಯಾಗಬಾರದು ಎಂದು ಸೂಚನೆ ನೀಡಿದರು.
ವಿದ್ಯಾರ್ಥಿಗಳು ಈ ಬಗ್ಗೆ ಗಮನ ಹರಿಸಬೇಕು, ಮನೆಯವರ ಕಷ್ಟ ಅರಿಯಬೇಕು. ಯಾವುದೇ ಕಾನೂನು ಬಾಹಿರ ಚಟುವಟಿಕೆ ಆದಾಗ ಕಮಿಷನರ್ ಅವರಿಗೆ ತಿಳಿಸುತ್ತೇನೆ. ಅಪ್ರಾಪ್ತ ವಿದ್ಯಾರ್ಥಿಗಳ ಕಾನೂನು ಬಾಹಿರ ಚಟುವಟಿಕೆ ವಿರುದ್ದ ಪೊಲೀಸರ ಗಮನಕ್ಕೆ ತರ್ತೇನೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಅಮಲಿನಲ್ಲಿ ತೂರಾಡಿದ ವಿಡಿಯೋ ವೈರಲ್; ಎನ್ಎಸ್ ಯುಐ ಪ್ರತಿಭಟನೆ
ಶಿವಮೊಗ್ಗ: ವಿದ್ಯಾರ್ಥಿಗಳು ಅಮಲಿನಲ್ಲಿ ತೂರಾಡಿದ ವಿಡಿಯೋ ವೈರಲ್ ವಿಚಾರವಾಗಿ ಶಿವಮೊಗ್ಗ ಎನ್ಎಸ್ಯುಐ ನೇತೃತ್ವದಲ್ಲಿ ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ- ಕಾಲೇಜುಗಳ ಆವರಣದಲ್ಲಿ ಮಾದಕ ವಸ್ತು ಬಳಕೆ ಹೆಚ್ಚಳವಾಗುತ್ತಿದ್ದು, ಇದನ್ನು ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ. ಮಾದಕ ವಸ್ತು ಮಾರಾಟ ಮತ್ತು ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿರುವ ಜೊತೆಗೆ ಗೃಹಸಚಿವರನ್ನು ಸಂಪುಟದಿಂದ ಕೈಬಿಡಲು ಎನ್ಎಸ್ಯುಐ ಆಗ್ರಹಿಸಿದೆ.
Published On - 2:57 pm, Tue, 26 July 22