ಮಂಗಳೂರು: ಮೊಬೈಲ್ ಹೆಚ್ಚು ಬಳಸದಂತೆ ಬುದ್ಧಿವಾದ ಹೇಳಿದ್ದಕ್ಕೆ 14 ವರ್ಷದ ಬಾಲಕ ಆತ್ಮಹತ್ಯೆ

| Updated By: ಆಯೇಷಾ ಬಾನು

Updated on: Jan 31, 2023 | 1:29 PM

ತಾಯಿ ವಿನಯಾ ತನ್ನ ಮಗನಿಗೆ ಫೋನ್ ಬಳಸುವ ಬಗ್ಗೆ ಗದರಿದ್ದಾರೆ. ಇದರಿಂದ ಮನನೊಂದ ಬಾಲಕ ಸ್ನಾನ ಮಾಡಿ ಬರುವುದಾಗಿ ರೂಮ್​ನೊಳಗೆ ಹೋಗಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಂಗಳೂರು: ಮೊಬೈಲ್ ಹೆಚ್ಚು ಬಳಸದಂತೆ ಬುದ್ಧಿವಾದ ಹೇಳಿದ್ದಕ್ಕೆ 14 ವರ್ಷದ ಬಾಲಕ ಆತ್ಮಹತ್ಯೆ
ಜ್ಞಾನೇಶ್
Follow us on

ಮಂಗಳೂರು: ಮೊಬೈಲ್ ಹೆಚ್ಚು ಬಳಸದಂತೆ ಬುದ್ಧಿವಾದ ಹೇಳಿದ್ದಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೋಟಿಮುರ ಎಂಬಲ್ಲಿ ನಡೆದಿದೆ. ನೇಣು ಬಿಗಿದುಕೊಂಡು 9ನೇ ತರಗತಿ ವಿದ್ಯಾರ್ಥಿ ಜ್ಞಾನೇಶ್(14) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರೆಡ್​ ಬ್ರಿಕ್ಸ್ ಅಪಾರ್ಟ್​​ಮೆಂಟ್​ನ ಜಗದೀಶ್, ವಿನಯಾ ದಂಪತಿ ಪುತ್ರ ಜ್ಞಾನೇಶ್​ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದ. ಇದರಿಂದ ಬೇಸತ್ತ ತಾಯಿ ವಿನಯಾ ತನ್ನ ಮಗನಿಗೆ ಫೋನ್ ಬಳಸುವ ಬಗ್ಗೆ ಗದರಿದ್ದಾರೆ. ಇದರಿಂದ ಮನನೊಂದ ಬಾಲಕ ಸ್ನಾನ ಮಾಡಿ ಬರುವುದಾಗಿ ರೂಮ್​ನೊಳಗೆ ಹೋಗಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೇರಳ: ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಕ್ಕೆ ಕಾರಣವಾದ ವ್ಯಕ್ತಿಗೆ ಮೂರು ಜೀವಾವಧಿ ಶಿಕ್ಷೆ

ಪ್ರೀತಿಸಿದ ಯುವತಿಯಿಂದ ಮೋಸ, ಯುವಕ ಆತ್ಮಹತ್ಯೆ

ಮತ್ತೊಂದೆಡೆ ಪ್ರೀತಿಸಿದ ಯುವತಿಯಿಂದ ಮೋಸ ಆದ ಹಿನ್ನೆಲೆ ಹಾಸನದ ಯುವಕ ಚೆನ್ನೈನ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಹಾಸನ ನಗರದ ಸಂಗಮೇಶ್ವರ ಬಡಾವಣೆಯ ಕಾರ್ತಿಕ್ (26) ಮೃತ ಯುವಕ.

ಕಳೆದ ನಾಲ್ಕು ವರ್ಷಗಳಿಂದ ಕಾರ್ತಿಕ್ ಹೊಳೆನರಸೀಪುರ ತಾಲೂಕಿನ ಯುವತಿಯನ್ನು ಪ್ರೀತಿಸುತ್ತಿದ್ದ. ಜನವರಿ 27 ರಂದು ತಾನು ಚೆನ್ನೈಲಿದ್ದು ಅಲ್ಲಿಗೇ ಬರುವಂತೆ ಆತನ ಪ್ರೇಯಸಿ ಕರೆದಿದ್ದಳು. ಆಕೆಯ ಮಾತು ನಂಬಿ ಕಾರ್ತಿಕ್ ಚೆನ್ನೈಗೆ ಹೋಗಿದ್ದ. ಹೋದ ಬಳಿಕ ತಾನು ಹಾಸನದಲ್ಲೇ ಇರುವುದಾಗಿ ಹೇಳಿದ್ದಾಳೆ. ಯುವತಿ ತನಗೆ ಮೋಸ ಮಾಡಿದ್ದಾಳೆಂದು ಮನನೊಂದು ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದಾನೆ.

ಕಾರ್ತಿಕ್ ಹಾಸನದ ಪ್ರತಿಷ್ಠಿತ ಹೋಟೆಲ್ ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಯುವತಿ ತಮ್ಮ ಮಗನನ್ನು ನಂಬಿಸಿ ಮೋಸ ಮಾಡಿದ್ದಾಳೆ ಎಂದು ಯುವಕನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹಾಗೂ ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ. ಚೆನ್ನೈನ ಆರಂಬಕ್ಕಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಂದು ಹಾಸನಕ್ಕೆ ಯುವಕನ ಮೃತದೇಹ ಆಗಮಿಸುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ