Sign In

By signing in or creating an account, you agree with Associated Broadcasting Company's Terms & Conditions and Privacy Policy.

Surathkal: ಮಂಗಳೂರು ವಿದ್ಯಾರ್ಥಿಗಳು ತಯಾರಿಸಿದರು ಇ ಸ್ಪೆಷಲ್ ಬೈಕ್! ರಸ್ತೆಯಲ್ಲಿ ಇದು ಅನೇಕ ವಿಶೇಷತೆ ಹೊಂದಿದೆ!

ಸದ್ಯ ಮಾರುಕಟ್ಟೆಗೆ ಬಂದಿರುವ ಇಲೆಕ್ಟ್ಟಿಕ್ ದ್ವಿಚಕ್ರ ವಾಹನಗಳಲ್ಲಿ ಆಫ್ ರೋಡ್ ಸಾಮರ್ಥ್ಯದ ದ್ವಿಚಕ್ರ ವಾಹನ ಬಹು ಕಡಿಮೆ. ಹೀಗಾಗಿ ಎನ್.ಐ.ಟಿ.ಕೆ ಸುರತ್ಕಲ್‌ನ ವಿದ್ಯಾರ್ಥಿಗಳು ಅನ್ವೇಷನೆ ಮಾಡಿರುವ ಈ ಡರ್ಟ್ ಇ-ಬೈಕ್‌ನ್ನು ಮೋಟಾರು ಕಂಪೆನಿಗಳು ಪಡೆದು ಅಭಿವೃದ್ದಿಗೊಳಿಸುವ ಸಾಧ್ಯತೆಯಿದೆ.

Surathkal: ಮಂಗಳೂರು ವಿದ್ಯಾರ್ಥಿಗಳು ತಯಾರಿಸಿದರು ಇ ಸ್ಪೆಷಲ್ ಬೈಕ್! ರಸ್ತೆಯಲ್ಲಿ ಇದು ಅನೇಕ ವಿಶೇಷತೆ ಹೊಂದಿದೆ!
ಮಂಗಳೂರು ವಿದ್ಯಾರ್ಥಿಗಳು ತಯಾರಿಸಿದರು ಇ ಸ್ಪೆಷಲ್ ಬೈಕ್!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 31, 2022 | 12:10 PM

ದಿನ ಕಳೆದಂತೆ ಪೆಟ್ರೋಲ್ ಚಾಲಿತ ವಾಹನಗಳ ಬದಲಾಗಿ ಬ್ಯಾಟರಿ ಚಾಲಿತ ಇಲೆಕ್ಟ್ರಿಕ್ ವಾಹನಗಳು (e bike) ಹೆಚ್ಚಾಗಿ ಮಾರುಕಟ್ಟೆಗೆ ಬರ್ತಿವೆ. ಇದೀಗ ಆಫ್ ರೋಡ್ ಸಾಮರ್ಥ್ಯದ ಇಲೆಕ್ಟ್ರಿಕ್ ಬೈಕ್ ಒಂದನ್ನು ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ರೆಡಿ ಮಾಡಿದೆ. ಯಾವುದೇ ದೊಡ್ಡ ದೊಡ್ಡ ಕಂಪನಿಗಳಿಗೆ ನಾವೇನು ಕಮ್ಮಿಯಿಲ್ಲ ಎಂಬಂತೆ ತಯಾರಿಸಿರುವ ಇ-ಬೈಕ್ ಹಲವು ವಿಶೇಷತೆಗಳನ್ನು ಹೊಂದಿದೆ. ನೂತನ ತಂತ್ರಜ್ಞಾನ ಆಧರಿತ ಬ್ಯಾಟರಿಚಾಲಿತ ವಾಹನಗಳು ಮಾರುಕಟ್ಟೆಗೆ ದಾಂಗುಡಿಯಿಡುತ್ತಿವೆ. ಮಂಗಳೂರಿನ ಸುರತ್ಕಲ್‌ನಲ್ಲಿರುವ (surathkal) ಎನ್.ಐ.ಟಿ.ಕೆ ಕ್ಯಾಂಪಸ್‌ನಲ್ಲಿಯು ಇಂಜಿನಿಯರಿಂಗ್ ವಿದ್ಯಾರ್ಥಿಗಳು (students) ಇಲೆಕ್ಟ್ರಿಕ್ ವಾಹನಗಳ ಅನ್ವೇಷಣೆಯನ್ನು ಮಾಡ್ತಿದ್ದಾರೆ. ಇದೀಗ ಇಲ್ಲಿನ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್‌ನಿಂದ ಸ್ಪೆಷಲ್ ಡರ್ಟ್ ಇ-ಬೈಕ್ ಒಂದನ್ನು ರೆಡಿ ಮಾಡಲಾಗಿದೆ.

ಆಫ್ ರೋಡ್‌ನಲ್ಲಿ ಸಂಚರಿಸಲೆಂದು ಭಾವಿ ಇಂಜಿನಿಯರ್‌ಗಳು ಇದನ್ನು ಡಿಸೈನ್ ಮಾಡಿದ್ದಾರೆ. ಹಿಮಕುಸಿತ ವಲಯಗಳು, ಭೂಕುಸಿತ ಪ್ರದೇಶಗಳು ಮತ್ತು ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ಇತರ ಸ್ಥಳಗಳಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಸಹ ಈ ಡರ್ಟ್ ಇ-ಬೈಕ್‌ನ್ನು ಬಳಸಬಹುದಾಗಿದೆ ಎನ್ನುತ್ತಾರೆ ಇ-ಮೊಬಿಲಿಟಿ ಸಂಶೋಧನ ವಿಭಾಗ-ಎನ್.ಐ.ಟಿ.ಕೆ ಮುಖ್ಯಸ್ಥರಾದ ಪೃಥ್ವಿರಾಜ್ ಯು.

 Mangalore  NIT students develop special dirt e bike

1979 ರ ಎನ್.ಐ.ಟಿ.ಕೆಯ ಹಿರಿಯ ವಿದ್ಯಾರ್ಥಿಗಳು ಈ ಬೈಕ್ ವಿನ್ಯಾಸಕ್ಕೆ ಹಣಕಾಸಿನ ನೆರವು ನೀಡಿದ್ದು, SEG ಆಟೋಮೋಟಿವ್ ಸಹಭಾಗಿತ್ವದಲ್ಲಿ ಇದನ್ನು ರೆಡಿ ಮಾಡಲಾಗಿದೆ. ಈ ಬೈಕ್ ಬೆಟ್ಟ ಗುಡ್ಡಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಆಫ್-ರೋಡ್ ಸಾಮರ್ಥ್ಯದ ವಾಹನವಾಗಿದೆ. ಇದಕ್ಕಾಗಿ ಪವರ್‌ಫುಲ್ ಮೋಟಾರ್ ಬಳಕೆ ಮಾಡಲಾಗಿದೆ. ಮೂರರಿಂದ ನಾಲ್ಕು ಗಂಟೆಯಲ್ಲಿ ಫುಲ್ ಬ್ಯಾಟರಿ ಚಾರ್ಜ್ ಮಾಡಿದ್ರೆ ಸುಮಾರು 40 ಕಿಲೋ ಮೀಟರ್‌ವರೆಗೆ ಓಡಿಸಬಹುದಾಗಿದೆ. ಸದ್ಯ ಇದರ ನಿರ್ಮಾಣ ವೆಚ್ಚ ಸುಮಾರು ಎರಡು ಲಕ್ಷ ರೂಪಾಯಿಯಾಗಿದ್ದು ಮುಂದೆ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಲಭಿಸಿದ್ರೆ ಇನ್ನಷ್ಟು ಅಭಿವೃದ್ದಿಗೊಳಿಸಿ ತಯಾರಿಸುವ ಯೋಜನೆ ಇಲ್ಲಿನ ವಿದ್ಯಾರ್ಥಿಗಳದ್ದು.

ಸದ್ಯ ಮಾರುಕಟ್ಟೆಗೆ ಬಂದಿರುವ ಇಲೆಕ್ಟ್ಟಿಕ್ ದ್ವಿಚಕ್ರ ವಾಹನಗಳಲ್ಲಿ ಆಫ್ ರೋಡ್ ಸಾಮರ್ಥ್ಯದ ದ್ವಿಚಕ್ರ ವಾಹನ ಬಹು ಕಡಿಮೆ. ಹೀಗಾಗಿ ಎನ್.ಐ.ಟಿ.ಕೆ ಸುರತ್ಕಲ್‌ನ ವಿದ್ಯಾರ್ಥಿಗಳು ಅನ್ವೇಷನೆ ಮಾಡಿರುವ ಈ ಡರ್ಟ್ ಇ-ಬೈಕ್‌ನ್ನು ಮೋಟಾರು ಕಂಪೆನಿಗಳು ಪಡೆದು ಅಭಿವೃದ್ದಿಗೊಳಿಸುವ ಸಾಧ್ಯತೆಯಿದೆ.,

ವರದಿ: ಅಶೋಕ್, ಟಿವಿ 9, ಮಂಗಳೂರು

Published On - 12:08 pm, Sat, 31 December 22

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ